Advertisement

Desi Swara: ಅರಬ್‌ ಭಾರತೀಯರಲ್ಲಿ ವಿಕ್ರಮ ಸಂಭ್ರಮ

05:58 PM Aug 29, 2023 | Team Udayavani |

ಚಂದ್ರಯಾನ – 3 ಯೋಜನೆಯ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ವಿಕ್ರಮ್‌ ಮತ್ತು ರೋವರ್‌ ಪ್ರಗ್ಯಾನ್‌ ಯಶಸ್ವಿಯಾಗಿ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ದೇಶ ವಿದೇಶಗಳಾದ್ಯಾಂತ ಕೋಟ್ಯಾಂತರ ಜನರು ಬುಧವಾರದಂದು ಟಿ.ವಿ. ಪರದೆಗಳಿಗೆ ಅಂಟಿ ಕುಳಿತಿದ್ದರು. ಯಾವಾಗ ಚಂದ್ರನ ಮೇಲೆ ವಿಕ್ರಮ್‌ ಸೇಫಾಗಿ ಲ್ಯಾಂಡ್‌ ಆಯಿತೋ ನೋಡಿ ಭಾರತ ದೇಶವು ಇತಿಹಾಸ ನಿರ್ಮಿಸಿದ್ದಲ್ಲದೆ, ಇಡೀ ಜಗತ್ತೇ ಭಾರತದ ಇಸ್ರೋ ವಿಜ್ಞಾನಿಗಳ ಸಾಧನೆಯನ್ನ ಸಂಭ್ರಮಿಸಿ ಕೊಂಡಾಡಿದ್ದಲ್ಲದೆ, ವಿಶ್ವದಾದ್ಯಂತದಿಂದ ಭಾರತಕ್ಕೆ ಭರಪೂರ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.

Advertisement

congratulationsindia ಎನ್ನುವ ಹ್ಯಾಶ್‌ ಟ್ಯಾಗ್‌ ಕೋಟ್ಯಾಂತರ ಜನರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇವೆಲ್ಲದರ ಮಧ್ಯೆ ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರಲ್ಲೂ ಸಂಭ್ರಮ ಮನೆ ಮಾಡಿತ್ತು. ಗಲ್ಫ್‌ ರಾಷ್ಟ್ರಗಳಲ್ಲಿ, ಚಿಕ್ಕ ಪುಟ್ಟ ಕೆಲಸ ಮಾಡುವುವರಿಂದ ಹಿಡಿದು ಕೋಟ್ಯಾಂತರ ಆಸ್ತಿ ಹೊಂದಿರುವ ವಿವಿಧ ವರ್ಗದ ಐವತ್ತು ಲಕ್ಷಕ್ಕೂ ಹೆಚ್ಚಿನ ವಿವಿಧ ರಾಜ್ಯಗಳ ಭಾರತೀಯ ಪ್ರಜೆಗಳಿ¨ªಾರೆ. ಚಂದ್ರಯಾನದ ಯಶಸ್ಸು ಪ್ರತಿಯೊಬ್ಬ ಭಾರತೀಯರಿಗೂ ಅತೀವ ಸಂತಸವನ್ನುಂಟು ಮಾಡಿದ್ದಲ್ಲದೆ, ಭಾರತೀಯರ ಮೇಲಿನ ಗೌರವವನ್ನು ಇಮ್ಮಡಿ ಗೊಳಿಸಿದೆ. ಭಾರತಕ್ಕೆ ಮತ್ತು ವಿಶ್ವಕ್ಕೆ ಮಹತ್ವದ ದಿನ. ಈ ಸಾಧನೆಯನ್ನು ಸಾಧಿಸಿದ ವಿಶ್ವದ ನಾಲ್ಕನೇ ದೇಶ ನಮ್ಮದು. ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂತಹ ನಿರ್ಣಾಯಕ ಮತ್ತು ಕಷ್ಟಕರವಾದ ಮಿಷನ್‌ ಅನ್ನು ಸಾಕಾರ ಗೊಳಿಸಿದಿದ್ದಕ್ಕಾಗಿ ನಮ್ಮ ಅದ್ಭುತ ವಿಜ್ಞಾನಿಗಳು ಮತ್ತು ಇಸ್ರೋಗೆ ಹ್ಯಾಟ್ಸ್‌ ಆಫ್ ಎಂದು ಪ್ರತಿಯೊಬ್ಬರು ಅಭಿನಂದನೆಗಳನ್ನು ವಿನಿಮಯ ಮಾಡಿಕೊಂಡರು. ವಾಟ್ಸ್‌ಆ್ಯಪ್‌ ಗ್ರೂಪ್‌ಗಳು, ಫೇಸ್‌ ಬುಕ್‌ಗಳು ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮೆಸ್ಸೇಜ್‌ಗಳು ತುಂಬಿ ತುಳುಕಾಡುತ್ತಿವೆ. ಭಾರತೀಯರಂತೆ ವಿವಿಧ ದೇಶಗಳ ವಲಸಿಗರು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿ ಕೆಲಸ ಮಾಡುತ್ತಿದ್ದಾರೆ, ಅದರಲ್ಲಿ ವಿಶೇಷವಾಗಿ ಪಾಕಿಸ್ಥಾನಿಗಳು ಸಹ ಭಾರತೀಯರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿನ ವಿವಿಧ ಭಾರತೀಯ ಸಾಂಸ್ಕೃತಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಸಂಭ್ರಮಾಚರಣೆಯನ್ನ ನಡೆಸಿದವು. ಬಹುತೇಕರು ಡಿಪಿಗಳಲ್ಲಿ ತಮ್ಮ ಫೋಟೋವನ್ನು ಇಸ್ರೋಗೆ ಅಭಿನಂದಿಸುವ ಮೂಲಕ ಬದಲಾಯಿಸಿಕೊಂಡಿದ್ದರು.

ವಿದೇಶಿ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳಲ್ಲೂ ಸಹ ಚಂದ್ರಯಾನ ಕುರಿತು ಸತತವಾಗಿ ವಿವಿದ ಬಗೆಯ ಪೋಸ್ಟ್‌ಗಳನ್ನ ಹಾಕುತ್ತಿದ್ದರು. ಸಾಮಾನ್ಯವಾಗಿ ಭಾರತದ ಬಗೆಗಿನ ಋಣಾತ್ಮಕ ಸುದ್ದಿಗಳನ್ನ ಪೋಸ್ಟ್‌ ಮಾಡುತ್ತಿದ್ದ ಇವರು, ಇಂದು ಚಂದ್ರಯಾನ ಕುರಿತು ಸುದ್ದಿ ಪ್ರಸಾರ ಮಾಡಿ ತಮ್ಮ ನ್ಯೂಸ್‌ ವೀವರ್ ಅನ್ನು ಹೆಚ್ಚಿಸಿಕೊಂಡಿದ್ದನ್ನ ಕಾಣಬಹುದಾಗಿತ್ತು. ಭಾರತ ರಾಷ್ಟ್ರಕ್ಕೂ ಮತ್ತು ಎಲ್ಲ ಭಾರತೀಯರಿಗೂ ಇದೊಂದು ಹೆಮ್ಮೆಯ ಕ್ಷಣವಾಗಿತ್ತು.

ಇವರೊಂದಿಗೆ ಅರಬ್‌ ರಾಷ್ಟ್ರಗಳ ನಾಯಕರು ಸಹ ಸಾಮಾಜಿಕ ಜಾಲಾತಾಣಗಳ ಮೂಲಕ ಭಾರತಕ್ಕೆ ಅಭಿನಂದನೆಯನ್ನು ನೀಡಿದ್ದರು. ದುಬೈ, ಯುಎಇ, ಒಮಾನ್‌ ರಾಷ್ಟ್ರದ ನಾಯಕರು ಇಸ್ರೋ ವಿಜ್ಞಾನಿಗಳ ಸಾಧನೆಗೆ ಸಲಾಂ ಹೊಡೆದಿದ್ದಾರೆ. ಅನಿವಾಸಿ ಭಾರತೀಯರಾಗಿ ನೆಲೆಸಿರುವ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದೂ ಗೌರವದ ಹಾಗೂ ಖುಷಿಯ ಸಂಗತಿಯಾಗಿದೆ.

Advertisement

*ಪಿ.ಎಸ್‌.ರಂಗನಾಥ, ಮಸ್ಕತ್‌

Advertisement

Udayavani is now on Telegram. Click here to join our channel and stay updated with the latest news.

Next