Advertisement

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

02:42 PM Mar 16, 2024 | Team Udayavani |

ಜನವರಿ 22 ತಾರೀಕು ತೇದಿ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಿನಂತೆ ಉಳಿದಿದೆ. ಅದು ರಾಮನ ಪುನರಾಗಮನ ಅಯೋಧ್ಯೆಗೆ, ಭವ್ಯ ಮಂದಿರದಲ್ಲಿ ನೆಲೆಸಿದ ಶ್ರೀರಾಮ, ಅಯೋಧ್ಯೆ ಸಂತಸದ ಸಾಗರದಲ್ಲಿ ಹರಿಯಿತು, ಅನೇಕ ಜನ ಸಮೂಹದ ನದಿಗಳು ಭಕ್ತಿಯ ನಾವೆಯಲ್ಲಿ ಹರಿದು ಬಂದು, ವಿಶ್ವವೇ ಅನುಭವಿಸಿತು ಸಂತಸದ ಕ್ಷಣಗಳು. ಭಾರತದ ಸುದ್ದಿ ವಾಹಿನಿಗಳು ವಿದೇಶದಲ್ಲಿ ಆಚರಣೆಯ ಬಗ್ಗೆ ಕೇಳಿದಾಗ ಹೃದಯ ತುಂಬಿ ಬಂತು. ಹೌದು ಆದಿನ ಇಟಲಿಯ ಹಿಂದೂ ದೇಗುಲಗಳಲ್ಲಿ, ಗೀತಾನಂದಾಶ್ರಮದಲ್ಲಿ ವಿಶೇಷ ಪೂಜೆಗಳು ಅಂದು ನಡೆದಿತ್ತು.

Advertisement

ನನ್ನ ವಿಶೇಷ ಅನುಭವ ನಮ್ಮ ಸತ್ಸಂಗ್‌ನವರು ರಾಮನ ಪುನರಾಗಮದ ಬಗ್ಗೆ ಮಾತಾಡಿ ಅಂದಾಗ! ಆದರೆ 15 ನಿಮಿಷಗಳ ಅವಧಿಯಲ್ಲಿ ಶತಮಾನಗಳ ಚರಿತ್ರೆ ಹೇಳಬೇಕಿತ್ತು. ರಾಮನ ಅನುಗ್ರಹ ಅದು ಸಾಧ್ಯವಾಯಿತು. ಬ್ರಹ್ಮಮುಹೂರ್ತದಲ್ಲಿ 30 ಜನರು ಜೂಮ್‌ ವೀಡಿಯೋ ಮೂಲಕ ಸೇರಿ¨ªಾಗ ಹೇಳಿದ ಎರಡು ಮಾತುಗಳನ್ನು ಇಟಾಲಿಯನ್‌ ಭಾಷೆಯಿಂದ ಅನುವಾದ ಮಾಡಿ ಇಲ್ಲಿ ಹೇಳುತ್ತಿದ್ದೇನೆ.

“ಜೈ ಸಾಯಿರಾಂ ಜೈ ಶ್ರೀರಾಮ್‌. ಸುವರ್ಣಾವಕಾಶ ಕಲ್ಪಿಸಿದ ಸತ್ಸಂಗದ ಮುಖ್ಯಸ್ಥರಿಗೆ ಧನ್ಯವಾದಗಳು. ನಮ್ಮ ಹಿಂದೂ ಧರ್ಮಕ್ಕನುಸಾರವಾಗಿ ಯಾವ ಕೆಲಸಕ್ಕೂ ಮುಂಚೆ ಗಣೇಶನ ಪ್ರಾರ್ಥನೆ ಮುಖ್ಯ. “ಗಣೇಶ ಶರಣಂ ಶರಣಂ ಗಣೇಶ’. ರಾಮನಿಗೆ ವಂದಿಸಿ ಮುಂದೆ ಹೋಗೋಣ.

“ರಘುಪತಿ ರಾಘವ ರಾಜಾರಾಮ್‌
ಪತಿತ ಪಾವನ ಸೀತಾರಾಮ್‌
ಈಶ್ವರ ಅಲ್ಲ ತೇರೇ ನಾಮ್‌
ಸಬಕೋ ಸನ್ಮತಿ ದೇ ಭಗವಾನ್‌’

ಅಯೋಧ್ಯೆಗೆ ರಾಮನ ಪುನರಾಗಮನ. ಇಂದಿನ ಪ್ರವಚನದ ಶೀರ್ಷಿಕೆ, ಒಂದು ಕುತೂಹಲ ಮೂಡಿಸುತ್ತದೆ. ಹಾಗಾದರೆ ರಾಮ ಇದ್ದಿ¨ªಾದರೂ ಎಲ್ಲಿ, ಎಲ್ಲಿಂದ ಮತ್ತೆ ಬರುತ್ತಾನೆ? ತ್ರೇತಾಯುಗದಲ್ಲಿ ರಾಮ ರಾವಣನನ್ನು ಸಂಹರಿಸಿ, 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗುತ್ತಾನೆ. ಆದರೆ ಕಲಿಯುಗದಲ್ಲಿ ರಾಮ ಅಯೋಧ್ಯೆಗೆ ಪುನರಾಗಮನ ಇದರ ಹಿನ್ನಲೆ ಏನು?
ಇದನ್ನು ತಿಳಿಯುವ ಕುತೂಹಲ ಅಲ್ಲವೇ !

Advertisement

ಅಯೋಧ್ಯೆ ಎಲ್ಲಿದೆ? ಭಾರತದ ಉತ್ತರ ಪ್ರದೇಶದಲ್ಲಿ ಸರಯೂ ನದಿಯ ತೀರದಲ್ಲಿದೆ. ವಾರಾಣಸಿ ಇಂದ ಅಯೋಧ್ಯೆಗೆ ಆರು ಗಂಟೆಗಳ ಪಯಣ. ಅಯೋಧ್ಯೆ ಪವಿತ್ರ ಹಿಂದೂ ಯಾತ್ರ ಸ್ಥಳ. ಇದು ಶ್ರೀರಾಮಚಂದ್ರ ಹುಟ್ಟಿದ ಊರು. ಈ ಹೆಸರಿನ ಅರ್ಥ ಸೋಲಿಲ್ಲದ ಹಾಗೂ ದೇವಾದಿ ದೇವತೆಗಳು ಇಲ್ಲಿ ನೆಲಸಿದ್ದರಂತೆ ಅದಕ್ಕೆ ದೇವನಗರಿ ಅನ್ನುವ ಹೆಸರು ಕೂಡ ಪುರಾತನ ಕಾಲದಿಂದ ಬಂದಿದೆ.

500 ವರ್ಷಗಳು ಉರುಳಿದ ಮೇಲೆ ರಾಮ, ರಾಮಲಲ್ಲಾ ಅರ್ಥಾತ್‌ ಬಾಲರಾಮನಾಗಿ ಅಯೋಧ್ಯೆಗೆ ಹಿಂದಿರುಗಿ¨ªಾನೆ. ನಮಗೆಲ್ಲ ಹುಡುಗ ರಾಮನ ಪರಿಚಯ ಯೋಗವಸಿಷ್ಠ ಸಂಸ್ಕೃತ ದಿಂದ ಇಟಾಲಿಯನ್‌ ಭಾಷೆಗೆ ನಾವು ಅನುವಾದ ಮಾಡಿರುವುದರಿಂದ ತಿಳಿದಿದೆ.ಈಗ ಬಾಲರಾಮನನ್ನು ಪರಿಚಯ ಮಾಡಿಕೊಳ್ಳೋಣ.

ಇದಕ್ಕೆ ಮುನ್ನ ಚರಿತ್ರೆಯ ಹಿನ್ನೆಲೆ ಅವಶ್ಯಕ. ನಾವು ಹಿಂದೂಗಳು ರಾಮನಿಗೋಸ್ಕರ ತ್ರೇತಾಯುಗದಲ್ಲಿ ಶಬರಿ ಅನೇಕ ವರ್ಷಗಳು ಕಾದಂತೆ, ನಾವೂ ಸಹ ಸಂವತ್ಸರುಗಳೇ ಕಾದೆವು. ಕಾರಣ ತಿಳಿಯಲು ಚರಿತ್ರೆ ತಿಳಿಯೋಣ. ಪ್ರಾಚೀನದಲ್ಲಿ ಭಾರತ ಪರಕೀಯರ ದಬ್ಟಾಳಿಕೆಗೆ ಒಳಗಾಗಿತ್ತು. ಅವರು ದೇಶದಲ್ಲಿ ತಮ್ಮದೇ ಆದ ಆಳ್ವಿಕೆ ನಡೆಸಿದ್ದರು. ನಮ್ಮ ದೇವಸ್ಥಾನಗಳನ್ನು ಹಾಳುಮಾಡಿ ನಮ್ಮ ಸಂಸ್ಕೃತಿಯನ್ನು ಬೇರು ಕೀಳಲು ಯತ್ನಿಸಿದ್ದರು. ಈ ಒಂದು ದುಷ್ಕೃತ್ಯಕ್ಕೆ ಅಯೋಧ್ಯ ಸಿಕ್ಕಿ ಬಿದ್ದಿತ್ತು.

1526ನೇ ಇಸವಿಯಲ್ಲಿ ಮೊಗಲ್‌ ರಾಜ್ಯ ಸ್ಥಾಪಿಸಿದ ಚಕ್ರವರ್ತಿ ಬಾಬರ್‌ ಒಬ್ಬ ದುರುಳ ಏಕೆಂದರೆ ತನ್ನ ತಂದೆಯನ್ನು ಕಾರಾಗೃಹದಲ್ಲಿರಿಸಿ ಸಹೋದರರನ್ನು ಕೊಂದು ಸಿಂಹಾಸನವನ್ನೇರಿದ್ದ. ಆಗಿನ ಕಾಲದಲ್ಲಿದ್ದ ರಾಮನ ದೇವಸ್ಥಾನ ಒಡೆದು ಅದೇ ಜಾಗದಲ್ಲಿ ಮಸೀದಿ ಕಟ್ಟಿಸಿ ವಿಜಯ ಪತಾಕೆ ಹಾರಿಸಿದ್ದ. ಇದು ಹಿಂದೂಗಳಿಗೆ ಆದ ಮಹಾಅನ್ಯಾಯ. ಇದಕ್ಕಾಗಿ ಅಂದಿನಿಂದ ಬಹಳ ಮಂದಿ ಹೋರಾಡಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು. ಕೊನೆಗೂ 1992ರಲ್ಲಿ ಮಸೀದಿಯನ್ನು ಒಡೆಯಲಾಯಿತು .ಸುಪ್ರೀಂ ಕೋರ್ಟ್‌ 2019ರಲ್ಲಿ ದೇವಸ್ಥಾನ ಕಟ್ಟಲು ಒಪ್ಪಿಗೆ ಕೊಟ್ಟರು. ಕೇವಲ ಐದು ವರ್ಷಗಳಲ್ಲಿ ಭವ್ಯ ಮಂದಿರ ಕಟ್ಟಲ್ಪಟ್ಟಿತು. ಈ ದೇಗುಲ ಬಾಲರಾಮ ನಿಗೆ, ರಾಮ ತನ್ನ ಜನ್ಮಸ್ಥಳಕ್ಕೆ ಬಾಲಕನ ರೂಪದಲ್ಲಿ ಹಿಂದಿರುಗಿ ಕಂಗೊಳಿಸುತ್ತ ಎಲ್ಲರ ಮನ ಸೆಳೆಯುತ್ತ ಅಯೋಧ್ಯೆಗೆ ಮುಂಚಿನ ಶೋಭೆ ಮರಳಿಸಿದ್ದಾನೆ.

ಇದಕ್ಕೆಲ್ಲ ಮುಖ್ಯ ಕಾರ್ಯಕರ್ತರು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ, ಹಿಂದೆ ಅವರು ಅಯೋಧ್ಯೆಗೆ ಭೇಟಿ ಕೊಟ್ಟಾಗ ರಾಮನ ವಿಗ್ರಹ ಒಂದು ಗುಡಾರದಲ್ಲಿ ನೋಡಿ ಬೇಜಾರಾಗಿ ನಮ್ಮ ರಾಮನಿಗೆ ಸರಿಯಾದ ದೇವಸ್ಥಾನ ಕಟ್ಟಿಸಲೇಬೇಕು ಎಂದು ವಾಗ್ಧಾನ ಮಾಡಿದರಂತೆ. ಅವರ ಇಚ್ಛೆಯಂತೆ ಇಂದು ಅತ್ಯದ್ಭುತ ದೇವಸ್ಥಾನ ಸಿದ್ಧ. ಬಾಬಾ ಅವರು ಹೇಳಿರುವಂತೆ ದೇವಸ್ಥಾನಗಳು ಭಕ್ತರ ಮನಸ್ಸನ್ನು ಕರಗಿಸಿ ಅವರಲ್ಲಿ ದಾನ, ಧರ್ಮ ಪ್ರೇರೇಪಿಸಿ ಅವರನ್ನು ಸನ್ಮಾರ್ಗದಲ್ಲಿ ನಡೆಸಿ ಮೋಕ್ಷದ ಹಾದಿ ತೋರುತ್ತದೆ. ಬಾಬಾ ಹೇಳುತ್ತಾರೆ ಕಲ್ಲನ್ನು ದೇವರಂತೆ ಪೂಜಿಸಿ, ಅದು ಬರಿ ಕಲ್ಲು ಎಂಬ ಭಾವನೆ ಬೇಡ . “ಶಿಲೆಗಳು ಸಂಗೀತವ ಹಾಡಿದೆ’ ಹಾಡಿನಂತೆ ಹೌದು, ಅದಕ್ಕೆ ತನ್ನದೇ ಆದ ಶಕ್ತಿ ಇರುತ್ತದೆ.

ಬಾಲರಾಮನ ಅದ್ಭುತ ವಿಗ್ರಹ ಕೆತ್ತಿದವರು ಬಹು ದೊಡ್ಡ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು. ಅವರೇ ಹೇಳುತ್ತಾರೆ, “ವಿಶ್ವಕ್ಕೆ ಹೇಗೆ ಬಾಲ ರಾಮನ ವಿಗ್ರಹ ಪೂಜೆಗೆ ನೀಡಬೇಕೆಂದು ದೀರ್ಘಾಲೋಚನೆ ಮಾಡಿ, ಐದು ವರ್ಷದ ಮಕ್ಕಳನ್ನು ಅವರ ಹಾವ ಭಾವಗಳನ್ನು ಗಮನಿಸಿ ಕಾರ್ಯಕ್ಕೆ ತೊಡಗಿದೆ ‘. ಇದರ ಫ‌ಲಿತಾಂಶ ಇಗೋ ನಮ್ಮೆಲ್ಲರ ಕಣ್ಮುಂದೆ ಮುಗುಳ್ನಗುವ ಬಾಲರಾಮ, ನೋಡುತ್ತಿದ್ದರೆ ನಮ್ಮಕಡೆಗೆ ಬರುತ್ತಿರುವಂತೆ ಭಾಸವಾಗುತ್ತದೆ.

ಪ್ರಾಣ ಪ್ರತಿಷ್ಠೆ :
ಅಂದರೆ ಏನು? ಪ್ರಾಣ ಅಂದರೆ ಉಸಿರು, ಪ್ರತಿಷ್ಠೆ ಅಂದರೆ ಶಿಲಾಪ್ರತಿಮೆಗೆ ಜೀವ ತುಂಬುವುದು, ನೆಲೆಗೊಳಿಸುವುದು, ಸ್ಥಾಪಿಸುವುದು. ಇದು ಒಂದು ಪ್ರಾಚೀನಕಾಲದಿಂದ ಬಂದಿರುವ ಶಾಸ್ತ್ರೋಕ್ತ ಪದ್ಧತಿ. ಇದಕ್ಕೆ ಸೂಕ್ತವಾದ ದಿನ, ಗಳಿಗೆ, ಕಾಲ ನೋಡಿ ಗೊತ್ತು ಪಡಿಸುತ್ತಾರೆ. ಇದನ್ನು ನಡೆಸುವವರು ವೇದೋಕ್ತ ಸಂಪ್ರದಾಯದಂತೆ ಕಟ್ಟು ನಿಟ್ಟುಗಳನ್ನು ಪಾಲಿಸಬೇಕು ಅದರಂತೆಯೇ ಪ್ರಧಾನಿಯವರು ಅನುಸರಿಸಿ ಪ್ರತಿಷ್ಠಾಪನೆಗೆ ಅನುವಾದರು. ವಿಗ್ರಹದ ಕಣ್ಣುಗಳನ್ನು ಪ್ರತಿಷ್ಠಾಪನೆಗೆ ಸ್ವಲ್ಪ ವೇಳೆ ಮುಂಚೆ ಕೆತ್ತುವುದು ಸಂಪ್ರದಾಯವಂತೆ. ಏನಾಶ್ಚರ್ಯ ಅರುಣ್‌ ಯೋಗಿ ಅವರು ಚಿನ್ನದ ಉಳಿಯಲ್ಲಿ ಕಣ್ಣು ರೂಪಿಸಿ ಪ್ರತಿಷ್ಠೆ ಆದ ಕ್ಷಣದ ದರ್ಶನ ಸ್ವರ್ಗ ಭೂಮಿಗಿಳಿದಂತೆ ಭಾಸವಾಯಿತು. ವಿಶ್ವದಾದ್ಯಂತ ಜನರಿಗೆ ರಾಮ ತಮ್ಮ ಕಡೆಗೆ ಬರುತ್ತಿ¨ªಾನೆ ಅಂತ ಅನಿಸಿದೆ ಇದರ ಜತೆಗೆ ಅನೇಕ ಪವಾಡಗಳು ಅಯೋಧ್ಯೆಯಲ್ಲಿ ನಡೆಯಿತು. ಜನ ಸಮೂಹ ತುಂಬಿ ಹರಿಯಿತು! ರಾಮರಾಜ್ಯ ಬಂದಿತು ಅಂತ ಅನ್ನೋಣವೇ !

Last but not least ಅಂದ ಹಾಗೆ ನಾವು ರಾಮನನ್ನು ಏನು ಬೇಕೆಂದು ಕೇಳಿಕೊಳ್ಳೋಣ ? ಇದನ್ನು ಸಾರುವ ಉತ್ತಮ ಕವಿತೆ ಗಜಾನನ ಶರ್ಮಾ ಅವರು ರಚಿಸಿರುವ “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’, ಇಟಾಲಿಯನ್‌ ನಲ್ಲಿ ಹೇಳುವ ಹಾಗೆ ciliegina sulla torta ಕೇಕಿನ ಮೇಲೆ ಹಣ್ಣು, ವಿಶೇಷತೆ ಏನೆಂದರೆ ಜಿಯನ್ನ ಜಿರಾಲ್ಡಿ ಅನ್ನುವವರು ಕನ್ನಡದಲ್ಲಿ ಈ ಹಾಡು ಹಾಡುತ್ತಾರೆ. ಇವರ ಗುರು ಪ್ರಸಿದ್ಧ ಹಿನ್ನೆಲೆ ಗಾಯಕ ಬದರಿಪ್ರಸಾದ್‌ ಅವರು. ಈ ಸುಶ್ರಾವ್ಯ ಗಾನದೊಂದಿಗೆ ನಿಮಗೆಲ್ಲ ಶುಭವಾಗಲಿ, ರಾಮನ ಅನುಗ್ರಹ ಇರಲಿ. ಓಂ ಸಾಯಿರಾಂ.

*ಜಯಮೂರ್ತಿ, ಇಟಲಿ

Advertisement

Udayavani is now on Telegram. Click here to join our channel and stay updated with the latest news.

Next