Advertisement
ತಾಲೂಕಿನ ನಾಗನೂರ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಶಾಲಾ ಮೈದಾನದಲ್ಲಿ ರಾಜ್ಯ ಖೋ-ಖೋ ಅಸೋಸಿಯೇಷನ್ ಹಾಗೂ ಬೆಳಗಾವಿ ಜಿಲ್ಲಾ ಖೋ-ಖೋ ಅಸೋಸಿಯೇಶನ್ ಮತ್ತು ನಾಗನೂರ ಶ್ರೀ ಮಹಾಲಿಂಗೇಶ್ವರ ನ್ಪೋಟ್ಸì ಕ್ಲಬ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ 18 ವರ್ಷದೊಳಗಿನ ಬಾಲಕ/ಬಾಲಕಿಯರ ಹೊನಲು ಬೆಳಕಿನ ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ನವದೆಹಲಿಯಲ್ಲಿ ಮುಂಬರುವ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಏಷಿಯನ್ ಖೋ-ಖೋ ಚಾಂಪಿಯನ್ ಷಿಪ್ ಆಯೋಜಿಸುವುದರ ಜೊತೆಗೆ ಕ್ರಿಯೆಟಿವ್ ಖೋ-ಖೋ ಕ್ರೀಡಾಕೂಟ ನಡೆಸಲಾಗುವುದು ಎಂದರು.
Related Articles
Advertisement
ಕೆಎಂಎಫ್ ಅಧ್ಯಕ್ಷ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ದಾಸಪ್ಪ ನಾಯಕ ಅವರು ಕ್ರೀಡಾಕೂಟದ ಉತ್ತೇಜನಕ್ಕಾಗಿ 2 ಲಕ್ಷ ರೂ. ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸನಗೌಡ ರಾ ಪಾಟೀಲ, ಕರ್ನಾಟಕ ರಾಜ್ಯ ಖೋ ಖೋ ಅಸೋಸಿಯೇಶನ್ ಉಪಾಧ್ಯಕ್ಷ ಶಿವಯೋಗಿ ಎಲಿ, ಬೆಂಗಳೂರು ಖೋ ಖೋ ಅಸೋಸಿಯೇಶನ್ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ. ಆರ್, ಬೆಳಗಾವಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಂದನಾ ಶಿಂಧೆ, ಪರಸಪ್ಪ ಬಬಲಿ ಮಾತನಾಡಿದರು.
ವೇದಿಕೆಯಲ್ಲಿ ಶ್ರೀನಿವಾಸ್‌ಗೌಡ ಪಾಟೀಲ, ಕೆಂಚಗೌಡ ಪಾಟೀಲ, ಬಲವಂತ ಕರಬನ್ನವರ, ಬಸವರಾಜ ಕರಿಹೊಳಿ, ಬಸವರಾಜ ಹೊಸಮನಿ, ಚಂದ್ರು ಬೆಳಗಲಿ, ಎಸ್.ಎಲ್. ಹೊಸಮನಿ, ಸಿದ್ದಣ್ಣ ಯಾದಗೂಡ , ಬಿ ಜಿ.ತಡಸನ್ನವರ, ಕೆ.ಕೆ. ಸಕ್ರೆಪ್ಪಗೋಳ, ಭೀಮಗೌಡ ಹೊಸಮನಿ, ಶಿವಾನಂದ ಹಳಿಗೌಡರ, ಕೆ.ಎಸ್.ಮಾರಾಪೂರ, ಬಿ.ಎಸ್.ಮೇಟಿ, ಗಜಾನನ ಯರಗಣವಿ, ಈರಣ್ಣ ಬಿ ಹಳಿಗೌಡರ ಇತರರು ಇದ್ದರು.
ಉಪಾಧ್ಯಕ್ಷ ಸಿ.ಆರ್ .ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಆರ್. ಎಂ.ಗುಡಿಸಿ ಹಾಗೂ ರವೀಂದ್ರ ಕಬ್ಬೂರ ನಿರೂಪಿಸಿದರು. ದೈಹಿಕ ಶಿಕ್ಷಕ ಸಿ.ಎಸ್.ಹಿರೇಮಠ ವಂದಿಸಿದರು.