Advertisement

ಗೋ ಸಮ್ಮೇಳನದಲ್ಲಿ ಗಮನಸೆಳೆದ ದೇಸೀ ತಳಿಗಳು

12:47 PM Jun 04, 2019 | sudhir |

ಉಡುಪಿ: ಶ್ರೀ ಕೃಷ್ಣಮಠದ ಸುವರ್ಣಗೋಪುರ ಸಮರ್ಪಣ ಸಮಾರಂಭದ ಸಂದರ್ಭ ಉಡುಪಿ ರಥಬೀದಿಯಲ್ಲಿ ರವಿವಾರ ಆಯೋಜಿಸಲಾದ “ಗೋಪುರಂ’ ಭಾರತೀಯ ದೇಶಿ ಗೋ ಸಮ್ಮೇಳನದಲ್ಲಿ ಸುಮಾರು 200ರಷ್ಟು ದೇಸೀ ಗೋವುಗಳು ಸಾರ್ವಜನಿಕರ ಗಮನಸೆಳೆದವು.

Advertisement

ಅದಮಾರು ಮಠ, ನೀಲಾವರ ಗೋಶಾಲೆ, ಕಿನ್ನಿಗೋಳಿಯ ಸುರಭೀವನ, ಆರೂರಿನ ಪುಣ್ಯಕೋಟಿ ಗೋಶಾಲೆ, ಶ್ರೀ ಮಂಜುನಾಥ ಗೋವಿಂದ ಗೋಶಾಲೆಯಲ್ಲಿನ ಗೋವುಗಳನ್ನು ಇಲ್ಲಿಗೆ ತರಿಸಲಾಗಿತ್ತು.
ಹಲವಾರು ಮಂದಿ ಗೋ ವೀಕ್ಷಣೆ ಮಾಡಿ ಸಂಭ್ರಮಿಸಿದರು.

16-20 ಗೋ ತಳಿಗಳು
ಕಾಣಿಯೂರು ಮಠದಿಂದ ಪಲಿಮಾರು ಮಠದ ವರೆಗೆ ನಿರ್ಮಿಸಿದ ತಾತ್ಕಾಲಿಕ ಹಟ್ಟಿಯಲ್ಲಿ (ಶಾಮಿಯಾನ) ಮಲೆನಾಡಿನ ಮಲ್‌ನಾಡು ಗಿಡ್ಡ, ಉತ್ತರಭಾರತದ ಓಂಗೊಲ್‌, ದ.ಕ.ದ ಕಪಿಲಾ, ರಾಜಸ್ಥಾನದ ಥಾರ್‌ ಪಾರ್ಕರ್‌, ರಾಟಿ, ಗುಜರಾತ್‌ನ ಗಿರ್‌, ಕೇರಳದ ವೇಚೂರು ಸಹಿತ ಸುಮಾರು 16ರಿಂದ 20 ಗೋ ತಳಿಗಳು ಗಮನಸೆಳೆದವು.

ಸಾಹಿವಾಲ್‌
ಈ ತಳಿಗಳಲ್ಲಿ ಹಸುಗಳು ಹೆಚ್ಚಿನ ಹಾಲನ್ನು ಕೊಡುತ್ತವೆ. ಸಾಹಿವಾಲ…, ಕೆಂಪು ಸಿಂಧಿ, ಗಿರ್‌, ದೇವನಿ ತಳಿಗಳು ಇದಕ್ಕೆ ಉದಾಹರಣೆಗಳು.

ವೇಚೂರು
ಉದ್ದ ಬಾಲ, ನಮ್ಮ ಮಲೆನಾಡು ಗಿಡ್ಡ ತಳಿಗಿಂತ ಚಿಕ್ಕದಾದ ಬಲಿಷ್ಟ ಕೋಡು, ಕೆಂಬಣ್ಣ, 80ರಿಂದ ನೂರು ಅಂಗುಲದಷ್ಟು ಎತ್ತರ ವೇಚೂರಿನ ದೈಹಿಕ ಲಕ್ಷಣಗಳು. ವೇಚೂರ್‌ ತಳಿಯ ಹಾಲಿನಲ್ಲಿರುವ ಔಷಧೀಯ ಗುಣಗಳು ವಿಶೇಷವಾಗಿವೆ. ಅನೇಕ ಕಾಯಿಲೆಗಳಿಗೆ ವೇಚೂರಿನ ಹಾಲನ್ನು ಸೇವಿಸುವಂತೆ ವೈದ್ಯರೇ ಸಲಹೆ ನೀಡುತ್ತಾರೆ ಎನ್ನುತ್ತಾರೆ ಗೋ ಸಾಕಣಿಕೆಯ ಸಿಬಂದಿ.

Advertisement

ಗಿರ್‌
ಗುಜರಾತ್‌ನ ಗಿರ್‌ ತಳಿಯ ಎತ್ತುಗಳು ನೊಡುಗರ ಆಕರ್ಷಣೆಯ ಕೇಂದ್ರವಾಗಿತ್ತು. ಗದ್ದೆಯ ಕೆಲಸಕ್ಕೆ ಬಳಕೆ ಮಾಡಬಹುದಾದ ಹಳ್ಳಿಕರ್‌ ತಳಿಯ ದನ ಮತ್ತು ಎತ್ತುಗಳು ಪ್ರದರ್ಶನದಲ್ಲಿದ್ದವು. ಈ ತಳಿಯ ದನಗಳು 15 ಕ್ವಿಂಟಲ್‌ ಭಾರವನ್ನು ಎಳೆಯಬಲ್ಲ ಸಾಮರ್ಥ್ಯವನ್ನು ಹೊಂದಿವೆ.

ಅಪಾರ ಮಾಹಿತಿ
ಗೋ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಬೇಕು. ಇಂತಹ ಸಮ್ಮೇಳನದಲ್ಲಿ ಗೋ ಉತ್ಪನ್ನಗಳ ಬಗ್ಗೆ ಅಪಾರ ಮಾಹಿತಿ ಸಿಗುತ್ತದೆ.
– ಶ್ರೀನಿವಾಸ ಪೆಜತ್ತಾಯ, ಗೋ ಸೇವಕರು

ಅಪಾರ ತಿಳುವಳಿಕೆ
ದೇಶಿ ಗೋ ತಳಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ಅಗತ್ಯವಾಗಿವೆ. ಈ ಮೂಲಕ ಜನರಲ್ಲಿ ದೇಸಿ ತಳಿಗಳ ಬಗ್ಗೆ ಅಪಾರ ತಿಳುವಳಿಕೆ ಮೂಡಲು ಕಾರಣವಾಗುತ್ತದೆ.
-ವೈಷ್ಣವಿ ಬಾಕೂìರು

Advertisement

Udayavani is now on Telegram. Click here to join our channel and stay updated with the latest news.

Next