Advertisement
ಹತ್ಯೆ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದ ಜಗದೀಶ ಶೆಟ್ಟರ್, ಮೊದಲ ಬೆಂಗಳೂರಿಗೆ ಗಾರ್ಡನ್ ಸಿಟಿ ಎಂಬ ಹೆಸರಿತ್ತು. ಆದರೆ ಇದೀಗ ಕ್ರೈಮ್ ಸಿಟಿ, ಮರ್ಡರ್ ಸಿಟಿ ಆಗಿದೆ ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ದೇಶಪಾಂಡೆ, ಆ ರೀತಿ ಹೇಳಬೇಡಿ. ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಂಕಿ-ಅಂಶ ಇದ್ದರೆ ಹೇಳಿ. ಹೂಡಿಕೆಯಲ್ಲಿ ದೇಶದಲ್ಲೇ ನಾವು ಮೊದಲಿದ್ದೇವೆ, ರಾಜ್ಯದ ಹಿತದೃಷ್ಟಿಯಿಂದ ತಪ್ಪುಮಾಹಿತಿ ಕೊಡಬೇಡಿ ಎಂದರು. ಮಾತು ಮುಂದುವರಿಸಿದ ಜಗದೀಶ ಶೆಟ್ಟರ್, ಆಯ್ತು ಕೈಗಾರಿಕೆ ಹೂಡಿಕೆ ಯಲ್ಲಿ ನಂಬರ್ ಒನ್ ಅಂತೀರಿ, ನೀವು 3.35 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಗುರಿ ಹೊಂದಿ ದ್ದೀರಿ, ಇದುವರೆಗೂ ಬಂದಿದ್ದು 50,324 ಕೋಟಿ ರೂ. ಮಾತ್ರ. ಇದಕ್ಕೆ ನಂಬರ್ ಓನ್ ಎಂದು ದೊಡ್ಡ ದೊಡ್ಡ ಜಾಹೀರಾತು ಹಾಕಿಕೊಂಡಿದ್ದೀರಿ ಎಂದು ಲೇವಡಿ ಮಾಡಿದರು.
ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡೋಣ ಎಂದಿದ್ದೆ. ಆದರೆ, ದೇಶಪಾಂಡೆ ಅವರು ಹೂಡಿಕೆಯಲ್ಲಿ ನಂಬರ್ ಒನ್ ಎಂದು ಹೇಳಿದ್ದಕ್ಕೆ ಹೇಳಬೇಕಾಯಿತು ಎಂದು ಸಮಜಾಯಿಷಿ ನೀಡಿದರು.