Advertisement

ಹೊಳಲ್ಕೆರೆ: ಶಾಸಕನ ವಿರುದ್ಧ ಅವಹೇಳನಕಾರಿ ಬರಹ: ಆರೋಪಿ ಬಂಧನ

12:35 PM Oct 07, 2022 | Team Udayavani |

ಹೊಳಲ್ಕೆರೆ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಅವರ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವಹೇನಕಾರಿ ಪದಗಳಿಂದ ನಿಂದಿಸಿ, ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

Advertisement

ಹೊಳಲ್ಕೆರೆ ತಾಲೂಕಿನ ಹುಲೆ ಮಳಲಿ ಹರೀಶ್ ಬಂಧಿತ ಆರೋಪಿ.

ಘಟನೆಯ ವಿವರ: ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ತಾಲೂಕಿನ ವಿಶ್ವನಾಥನ ಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಹಲವಾರು ಫೋಟೋಗಳನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ಪೋಸ್ಟ್‌ನ ಕುರಿತು ಹೊಳಲ್ಕೆರೆ ತಾಲೂಕಿನ ಹರೀಶ್, ಶಾಸಕನ ವಿರುದ್ಧ ಅವೇಳನಕಾರಿ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ಬಿಜೆಪಿ ಪಕ್ಷದ ಮುಖಂಡ ಗಿರೀಶ್ ಹೊಳಲ್ಕೆರೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಹಿನ್ನೆಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಹೊಳಲ್ಕೆರೆ ಪೊಲೀಸ್, ಆರೋಪಿ ಹರೀಶ್ ನನ್ನು ಬಂಧಿಸಿ, ನ್ಯಾಯಾಲಯದ ಬಂಧನಕ್ಕೆ ನೀಡಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next