Advertisement

ಹಳಿ ತಪ್ಪಿದ ಆಡಳಿತ, ಜಿಡ್ಡುಗಟ್ಟಿದ ವ್ಯವಸ್ಥೆ

03:45 AM Feb 10, 2017 | Team Udayavani |

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಜಿಡ್ಡು ಹಿಡಿದಿದ್ದು, ಆಡಳಿತ ವೈಖರಿ
ಸಂಪೂರ್ಣ ಹಳಿ ತಪ್ಪಿದೆ, ಕ್ರೀಯಾಶೀಲ ಚಟುವಟಿಕೆಗಳು ನಡೆಯುತ್ತಿಲ್ಲ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ
ಪ್ರತಿಪಕ್ಷ ಬಿಜೆಪಿಯನ್ನು ಟಾರ್ಗೆಟ್‌ ಮಾಡಿ ರಾಜಕಾರಣ ನಡೆಸಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್‌
ಶೆಟ್ಟರ್‌ ವಿಧಾನ ಸಭೆಯಲ್ಲಿ ಸರ್ಕಾರದ ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಂಡರು.

Advertisement

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಸುದೀರ್ಘ‌ವಾಗಿ ಸಿಎಂ ಸಿದ್ದರಾಮಯ್ಯ ಆಡಳಿತ ವೈಖರಿಯನ್ನು ಟೀಕಿಸುತ್ತ, ಇಲಾಖಾವಾರು ವೈಫ‌ಲ್ಯಗಳನ್ನು ಬಿಚ್ಚಿಟ್ಟರು. 4 ವರ್ಷ ಕಳೆದರೂ ಉತ್ತಮ ಆಡಳಿತದ ಅನುಭವ ನಮಗ್ಯಾರಿಗೂ ಆಗಿಲ್ಲ. ಜಿಡ್ಡು ಹಿಡಿದ ಆಡಳಿತವೇ ಗೋಚರವಾಗುತ್ತಿದೆ.

ರಾಜ್ಯಾದ್ಯಂತ ಮಳೆ ಇಲ್ಲದೆ ಬರ ತಾಂಡವವಾಡಿದರೆ, ಸದನದಲ್ಲಿ ಸಚಿವರ ಹಾಜರಾತಿ ಬರವೂ ಉಂಟಾಗಿದೆ ಎಂದು ಶೆಟ್ಟರ್‌ ಮಾರ್ಮಿಕವಾಗಿ ಕಲಾಪಕ್ಕೆ ಗೈರು ಹಾಜರಾಗಿದ್ದ ಸಚಿವರನ್ನು ಚುಚ್ಚಿದರು. ರಾಜ್ಯ ಸರ್ಕಾರ ಲೋಕಾಯುಕ್ತ ಮತ್ತು ಮಾನವ ಹಕ್ಕುಗಳ ಆಯೋಗದಂತಹ ಸಂಸ್ಥೆಯ ಮುಖ್ಯಸ್ಥರನ್ನು ಸರಿಯಾದ ಸಮಯಕ್ಕೆ ನೇಮಿಸದೆ ಕಾಲ ಹರಣ ಮಾಡುತ್ತಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next