Advertisement

ಹಳಿ ತಪ್ಪಿದ ಗೂಡ್ಸ್ ರೈಲು : ಗೋವಾ-ಕರ್ನಾಟಕ ರೈಲು ಸಂಚಾರದಲ್ಲಿ ವ್ಯತ್ಯಯ

04:14 PM May 23, 2022 | Team Udayavani |

ಪಣಜಿ: ಗೋವಾದ ಕುಳೆ ರೈಲ್ವೆ ನಿಲ್ದಾಣದ ಬಳಿ ಕಲ್ಲಿದ್ದಲು ಸಾಗಿಸುತ್ತಿದ್ದ ಸರಕು ಸಾಗಾಣೆ ರೈಲಿನ ಹಳಿ ತಪ್ಪಿದ್ದರಿಂದ ಗೋವಾ-ಕರ್ನಾಟಕ ರೈಲು ಮಾರ್ಗದ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯವುಂಟಾದ ಘಟನೆ ನಡೆದಿದೆ. ಈ ಕುರಿತು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಕಲ್ಲಿದ್ದಲು ಸಾಗಿಸುತ್ತಿದ್ದ ನಾಲ್ಕು ಕಂಟೇನರ್ ಗಳು ಹಳಿ ತಪ್ಪಿದ ಘಟನೆ ಭಾನುವಾರ ಸಂಜೆ ಗೋವಾದ ಕುಳೆ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದೆ. ಸರಕು ಸಾಗಾಣೆ ರೈಲು ಹಳಿ ತಪ್ಪಿದ್ದರಿಂದ ಈ ಮಾರ್ಗದಲ್ಲಿ ಓಡಾಟ ನಡೆಸುತ್ತಿದ್ದ ಹಲವು  ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ.

ರೈಲು ಕ್ರಮಾಂಕ 17310-ವಾಸ್ಕೊಡಗಾಮಾ ಯಶವಂತಪುರ ಎಕ್ಸಪ್ರೆಸ್, ರೈಲು ಕ್ರಮಾಂಕ 07343 ವಾಸ್ಕೊಡಗಾಮಾ-ಕುಳೆ ಡಿಇಎಂಯು ಸ್ಪೇಶಲ್, ರೈಲು ಕ್ರಮಾಂಕ 17310 ವಾಸ್ಕೊಡಗಾಮಾ ಯಶವಂತಪುರ ಎಕ್ಸಪ್ರೆಸ್ ಈ ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ.

ಇದನ್ನೂ ಓದಿ : ಉಕ್ರೇನ್ ನಲ್ಲಿ ರಷ್ಯಾದ ಟ್ಯಾಂಕ್ ಕಮಾಂಡರ್‌ಗೆ ಜೀವಾವಧಿ ಶಿಕ್ಷೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next