Advertisement

ಬಾಬಾ ವಿರೋಧಿಗಳನ್ನು ಕೊಲ್ತೇವೆ ಹುಷಾರ್; ಡೇರಾ ಸಚ್ಚಾ ಖುರ್ಬಾನಿ ಲೀಗ್

10:57 AM Sep 28, 2017 | Team Udayavani |

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರುವ ಹರ್ಯಾಣದ ಡೇರಾ ಸಚ್ಚಾ ಸೌದಾ ಪಂಗಡದ ಧರ್ಮಗುರು ಬಾಬಾ ರಾಮ್ ರಹೀಂ ಸಿಂಗ್ ವಿರುದ್ಧ ಮಾತನಾಡುವ ಡೇರಾ ಸಚ್ಚಾದ ಮಾಜಿ ಅನುಯಾಯಿಗಳು, ಹರ್ಯಾಣ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸುದ್ದಿ ಪ್ರಕಟಿಸುತ್ತಿರುವ ಪತ್ರಕರ್ತರನ್ನು ಹತ್ಯೆಗೈಯುವುದಾಗಿ ಡೇರಾ ಸಚ್ಚಾ ಸೌದಾದ ಖುರ್ಬಾನಿ ಲೀಗ್ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.

Advertisement

ಮಾಧ್ಯಮಗಳ ವರದಿ ಪ್ರಕಾರ, 2002ರ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಬಾಬಾ ವಿರುದ್ಧ ಸುದ್ದಿ ಬಿತ್ತರಿಸುತ್ತಿರುವ ಕೆಲವು ಖಾಸಗಿ ಟಿವಿ ಚಾನೆಲ್ ಗಳ ಹೆಸರನ್ನು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next