Advertisement
“ಬೆಳಕಿನ ಹಬ್ಬ ದೀಪಾವಳಿ’ ಈ ಶಬ್ದವೇ ಸಡಗರ, ಸಂಭ್ರಮವನ್ನು ಸೂಚಿಸುತ್ತದೆ. ಎಳೆಯರಿಂದ ಹಿರಿಯರ ತನಕ, ಹೊಸದಾಗಿ ಮದುವೆಯಾದವರಿಂದ ಆರಂಭಿಸಿ ಹಳೆ ದಂಪತಿಯ ತನಕ ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕಾದಿರುವ ಹಬ್ಬ. ದೀಪಾವಳಿ ಅಂದರೆ ಹಬ್ಬಮಾತ್ರವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೆ„ತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.
ಅಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಅಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷ್ಮೀ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಸೇರಿಸದೆ ಉಳಿದ 3 ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ. ಈ ಸಲ ಕೆಲವರು ನ. 13ರಂದು ಚತುರ್ದಶಿ ಆರಂಭ ಮಾಡಿಕೊಂಡು 15ಕ್ಕೆ ಹಬ್ಬ ಮುಗಿಸುತ್ತಾರೆ. ಇನ್ನು ಕೆಲವರು 16ಕ್ಕೆ ಪಾಡ್ಯ ಆಚರಿಸುತ್ತಾರೆ. ಕೆಲವು ಪಂಚಾಂಗದ ಪ್ರಕಾರ ನ.16ರಂದು ಪಾಡ್ಯದ ಅವಧಿ 10.33ಗಳಿಗೆಯಿದ್ದು ಉಪರಿ ಬಿದಿಗೆ ಬಂದ ಕಾರಣ ಪಾಡ್ಯ ಆಚರಣೆ 15ರಂದೇ ಬರುತ್ತದೆ ಎನ್ನಲಾಗುತ್ತಿದೆ.
Related Articles
ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹಾಗೆಯೇ ಸ್ವದೇಶೀ ಗೂಡುದೀಪಗಳ ಬೇಡಿಕೆ ಕಳೆದ ವರ್ಷದಂತೆಯೇ ಇದೆ. ಈಗಾಗಲೇ ಬಹುತೇಕ ಅಂಗಡಿಗಳಲ್ಲಿ ಒಂದು ಸುತ್ತು ವ್ಯಾಪಾರ ಮುಗಿದಿದೆ. ಇನ್ನಷ್ಟು ಆರ್ಡರ್ ಹಾಕಬೇಕೇ ಬೇಡವೇ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಚೌತಿ, ನವರಾತ್ರಿಗೆ ಹೋಲಿಸಿದರೆ ದೀಪಾವಳಿ ವ್ಯಾಪಾರಿಗಳ ಗಲ್ಲಾದಲ್ಲಿ ಬೆಳಕು ಕಾಣಿಸುವಂತೆ ಮಾಡಿದೆ.
Advertisement
ಆತ್ಮನಿರ್ಭರ ವ್ಯಾಪಾರಗೂಡುದೀಪಗಳ ತಯಾರಿಕೆಗೆ ಸ್ಥಳೀಯವಾಗಿ ಒತ್ತು ನೀಡಲಾಗುತ್ತಿದೆ. ಹಣತೆ ತಯಾರಿ, ಖರೀದಿಗೂ ವ್ಯಾಪಾರಿಗಳು ಸ್ಥಳೀಯರಿಗೆ ಪ್ರಾಮುಖ್ಯ ನೀಡುತ್ತಿದ್ದಾರೆ. ಗೋಮಯ ದೀಪ ಇನ್ನೂ ಇಲ್ಲಿನ ಮಾರುಕಟ್ಟೆಗೆ ಬಂದಿಲ್ಲ. ಮಣ್ಣಿನ ಹಣತೆಗೆ ಹೆಚ್ಚಿನ ಬೇಡಿಕೆಯಿದೆ ಎನ್ನುತ್ತಾರೆ ವ್ಯಾಪಾರಿಗಳು. “ಉದಯವಾಣಿ’ ಈ ಬಾರಿ ಗೂಡುದೀಪದ ಸ್ಪರ್ಧೆ ಆಯೋಜಿಸಿದ್ದು , ಗೂಡುದೀಪ ತಯಾರಿ ಕುರಿತಾಗಿಯೂ ಓದುಗರಿಗೆ ಮಾಹಿತಿ ನೀಡಿದೆ. ದೇಸೀದೀಪ
ನಾವು ಚೀನ ಗೂಡುದೀಪಗಳನ್ನು ತರುತ್ತಿಲ್ಲ. ದೇಸೀ ದೀಪಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಬೇಡಿಕೆ ಕಡಿಮೆಯಾಗಿಲ್ಲ. ಎಲ್ಲ ಸಂಕಷ್ಟ ಮುಗಿದು ನಾಡಿನ ಜನತೆ ದೀಪಾವಳಿ ಸಂಭ್ರಮದಿಂದ ಆಚರಿಸುವಂತಾಗಿದೆ.
-ಶೋಭಾ ಭಂಡಾರ್‌ಕಾರ್ ವ್ಯಾಪಾರಿ, ಕುಂದಾಪುರ