Advertisement
10 ಕೋ.ರೂ. ವೆಚ್ಚದ ಕಾಮಗಾರಿಬನ್ನಂಜೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗಿದೆ. ಕಟ್ಟಡವು ಒಟ್ಟು 40,941 ಚದರಡಿ ವಿಸ್ತೀರ್ಣ ಹೊಂದಿದೆ. ಒಳಾಂಗಣ ವಿನ್ಯಾಸಕ್ಕೆ ಅನುದಾನ ಇನ್ನೂ ಬಿಡುಗಡೆ ಯಾಗದ ಹಿನ್ನೆಲೆಯಲ್ಲಿ ಹಳೆಯ ಕಚೇರಿಯ (ತಾಲೂಕು ಕಚೇರಿ) ಪೀಠೊಪಕರಣಗಳನ್ನು ಹೊಸ ಕಚೇರಿಗೆ ಬಳಸಿಕೊಳ್ಳಲಾಗಿದೆ. ಬಾಕಿ ಇರುವ ಸುಮಾರು 3 ಕೋ.ರೂ. ಅನುದಾನ ಬಿಡುಗಡೆಯಾದ ತತ್‌ಕ್ಷಣ ಕಾಂಪೌಂಡ್ ಸೇರಿದಂತೆ ವಿವಿಧ ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ನೆಲ ಮಹಡಿಯಲ್ಲಿ ತಹಶೀಲ್ದಾರ್ ಕಚೇರಿ, ಕೋರ್ಟ್ ಹಾಲ್, ಗ್ರೇಡ್ 2 ತಹಶೀಲ್ದಾರ್ ಚೇಂಬರ್, ತಹಶೀಲ್ದಾರ್ ದಾಖಲೆ ಕೊಠಡಿ, ಸಿಬಂದಿಯ ಕಚೇರಿ, ಭೂಮಿ, ಶಾಸಕರ ಕಚೇರಿ (ಶಾಸಕರ ಕಚೇರಿ ಸ್ಥಳಾಂತರಗೊಂಡಿಲ್ಲ), ಮೀಟಿಂಗ್ ಹಾಲ್, ಆಹಾರ ಮತ್ತು ನಾಗರಿಕ ಪೂರೈಕೆ ಕಚೇರಿ ಇದೆ. 1ನೇ ಮಹಡಿಯಲ್ಲಿ ಎಸಿ ಟ್ರಿಬ್ಯುನಲ್, ಮುಖ್ಯ ಕಚೇರಿ, ಎಸಿ ಸಿಬಂದಿ ಕಚೇರಿ, ದಾಖಲೆ ಕೊಠಡಿ, ಉಪ ನೋಂದಣಿ ಅಧಿಕಾರಿ ಕಚೇರಿ, ಚುನಾವಣೆ ಶಾಖೆ ಸಭಾಂಗಣ ಹಾಗೂ 2ನೇ ಮಹಡಿಯಲ್ಲಿ ಎ.ಡಿ.ಎಲ್.ಆರ್. ಮತ್ತು ಸರ್ವೆಯರ್ ಶಾಖೆ, ತಹಶೀಲ್ದಾರ್ ಕಚೇರಿ ರೆಕಾರ್ಡ್ ಹಾಗೂ ಸಾಕಷ್ಟು ವಿಶಾಲ ಕಚೇರಿಗಳಿಗೆ ಸ್ಥಳಾವಕಾಶವಿದೆ.
Related Articles
ಮಿನಿ ವಿಧಾನಸೌಧ ಮೂರು ಮಹಡಿಯ ಕಟ್ಟಡವಾಗಿದೆ. ಇಲ್ಲಿ ಲಿಫ್ಟ್ ವ್ಯವಸ್ಥೆ, ಅಂಗವೈಕಲ್ಯ ಇರುವವರ ಅನುಕೂಲಕ್ಕೆ ರ್‍ಯಾಂಪ್, ನೆಲ ಮತ್ತು ಮೊದಲ ಮಹಡಿಯಲ್ಲಿ ಶೌಚಗೃಹ, ಅಂಗವಿಕಲರಿಗೆ ಪ್ರತ್ಯೇಕ ಶೌಚಗೃಹವಿದೆ. ಒ.ಎಚ್.ಟಿ. 2500 ಲೀ. ಸಾಮರ್ಥ್ಯ, ಸಂಪ್ ಟ್ಯಾಂಕ್, ಟ್ರಾನ್ಸ್‌ಫಾರ್ಮರ್, ಡೀಸೆಲ್ ಜನರೇಟರ್ ಇದೆ.
Advertisement
ಉತ್ತಮ ಸೇವೆ ಲಭ್ಯಒಂದು ವಾರದ ಹಿಂದೆ ಹಳೆ ತಾಲೂಕು ಕಚೇರಿಯಲ್ಲಿ ಇದ್ದ ಎಲ್ಲ ಇಲಾಖೆಗಳನ್ನು ಹೊಸ ಮಿನಿ ವಿಧಾನ ಸೌಧಕ್ಕೆ ವರ್ಗಾವಣೆ ಮಾಡಲಾಗಿದೆ. ಹೊಸ ಕಚೇರಿ ವಿಶಾಲವಾಗಿದೆ. ಇಲ್ಲಿ ಜನರಿಗೆ ಉತ್ತಮ ಸೇವೆ ಸಿಗಲಿದೆ.
-ಪ್ರದೀಪ್ ಕುರ್ಡೇಕರ್, ತಹಶೀಲ್ದಾರ್, ಉಡುಪಿ ತಾಲೂಕು