Advertisement

ವನ್ಯ ಜೀವಿಗಳಿಗೆ ಆಸರೆಯಾದ ಇಲಾಖೆ-ರಂಭಾಪುರಿ ಮಠ

03:59 PM May 04, 2019 | Team Udayavani |

ಕೊರಟಗೆರೆ: ಬಯಲುಸೀಮೆ ಪ್ರದೇಶವಾದ ಕೊರಟ ಗೆರೆ ಕ್ಷೇತ್ರದ ಬೆಟ್ಟಗುಡ್ಡಗಳಲ್ಲಿ ನೀರಿನ ಅಭಾವ ಸೃಷ್ಟಿ ಸಿದೆ. ಆಹಾರ-ನೀರಿಗಾಗಿ ವನ್ಯಜೀವಿಗಳು ನಾಡಿನತ್ತ ಧಾವಿಸುತ್ತಿವೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಸಿದ್ದರಬೆಟ್ಟದ ರಂಭಾಪುರಿ ಮಠ ವನ್ಯ ಜೀವಿಗಳಿಗೆ ಆಸರೆಯಾಗಿವೆ. ಈಗಾಗಲೇ ತಿಮ್ಮಲಾಪುರ ಅಭ ಯಾರಣ್ಯ ಮತ್ತು ಚನ್ನರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಜಲ ಹೊಂಡಗಳನ್ನು ನಿರ್ಮಿಸಿ ಕುಡಿಯುವ ನೀರಿನ ಪೂರೈಕೆ ಮಾಡಿ ವನ್ಯ ಜೀವಿಗಳನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ.

Advertisement

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಅನುಪಲು ಗ್ರಾಮದ ಸಮೀಪದ ತಿಮ್ಮಲಾಪುರ ಅಭಯಾರಣ್ಯದ ದಟ್ಟ ಕಾಡಿನಲ್ಲಿ 3 ಕಡೆ ಮತ್ತು ಚನ್ನರಾಯನದುರ್ಗ ಬೆಟ್ಟದ ಅರಣ್ಯ ಪ್ರದೇಶದಲ್ಲಿ 3 ಕಡೆ ಕಾಡಿನ ಪ್ರಾಣಿ ಮತ್ತು ಪಕ್ಷಿಗಳಿಗೆ ಪ್ರತಿದಿನ ಕುಡಿಯಲು ನೀರಿನ ಪೂರೈಕೆ ಮಾಡುವ ಮೂಲಕ ನೂತನ ಪ್ರಯತ್ನಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

ಅನುಪಲು ಗ್ರಾಮದ ಸಮೀಪದ ತಿಮ್ಮಲಾಪುರ ಅಭಯಾರಣ್ಯದ 1200ಹೆಕ್ಟೇರ್‌ ಪ್ರದೇಶ ಮತ್ತು ಚನ್ನರಾಯನದುರ್ಗ ಬೆಟ್ಟದ 1400ಹೆಕ್ಟೇರ್‌ ಅರಣ್ಯದಲ್ಲಿ ಚಿರತೆ, ಕರಡಿ, ಚಿಪ್ಪುಹಂದಿ, ಮುಳ್ಳಂದಿ, ನರಿ, ಕಡವೆ, ಮೊಲ, ಜಿಂಕೆ, ನವಿಲು, ಕಾಡುಕುರಿ, ಕತ್ತೆಕಿರುಬ, ಕಾಡುಕೋಳಿ, ಜಂಗಲ್ಪೋಲ್ ಮತ್ತು ಪಕ್ಷಿಗಳಾದ ನೀಲಕಂಠ, ಬುಲ್ಬುಲ್, ಗಿಳಿ, ಗೌಜಗಾನಹಕ್ಕಿ, ಕೊಕ್ಕರೆ, ಬಿಲುವನಹಕ್ಕಿ ಸೇರಿದಂತೆ ನೂರಾರು ಬಗೆಯ ಪ್ರಾಣಿ ಮತ್ತು ಪಕ್ಷಿಗಳಿವೆ.

ಪ್ರಾಣಿಪಕ್ಷಿಗಳ ವೀಕ್ಷಣೆಗೆ ಗೋಪುರ: ತಿಮ್ಮಲಾಪುರ ಅಭಯಾರಣ್ಯದ ಬೆಟ್ಟದ ತುದಿಯ ಮೇಲ್ಭಾಗದಲ್ಲಿ ಅರಣ್ಯ ಇಲಾಖೆಯಿಂದ ಪ್ರಕೃತಿ ಸಂರಕ್ಷಣೆ ಯೋಜನೆಯಡಿ 2ಲಕ್ಷ ರೂ., ವೆಚ್ಚದಲ್ಲಿ 40ಅಡಿ ಎತ್ತರದ ವೀಕ್ಷಣಾ ಗೋಪುರವಿದೆ. ವನ್ಯಜೀಗಳ ವೀಕ್ಷಣೆ ಮತ್ತು ಕಳ್ಳ ಬೇಟೆ ತಡೆಯುವ ಉದ್ದೇಶಕ್ಕೆ ಸಹಕಾರಿ ಆಗಲಿದೆ. ಸಿದ್ದರಬೆಟ್ಟ, ಚನ್ನರಾಯನದುರ್ಗ ಮತ್ತು ಹಿರೇಬೆಟ್ಟದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಬೇಕಾಗಿದೆ.

ರಕ್ಷಣಾ ಶಿಬಿರದ ಕಚೇರಿ: ತಿಮ್ಮಲಾಪುರ ಅಭಯ ರಣ್ಯದ 2 ಕಡೆ ಅರಣ್ಯ ಇಲಾಖೆ ಪ್ರಕೃತಿ ಸಂರಕ್ಷಣೆ ಯೋಜನೆಯಡಿ 16ಲಕ್ಷ ರೂ.,ವೆಚ್ಚದಲ್ಲಿ ರಕ್ಷಣಾ ಶಿಬಿರದ ಕಚೇರಿ ನಿರ್ಮಿಸಿ ಆ ಕಚೇರಿಗೆ ಚಿರತೆ ಮತ್ತು ಕರಡಿ ಎಂದು ನಾಮಕರಣ ಮಾಡಲಾಗಿದೆ.

Advertisement

ಶಿಬಿರದ ಮನೆಯಲ್ಲಿ ವಾಸಿಸುವ 4 ಜನ ಕಾವಲುಗಾರರು ಅರಣ್ಯದಲ್ಲಿ ಗಸ್ತು ನಡೆಸುವ ಮೂಲಕ ಪ್ರಾಣಿಪಕ್ಷಿಗಳ ಚಲನವಲನದ ಮೇಲೆ ನಿಗಾ ಇಡಲಿದ್ದಾರೆ.

ಸಿದ್ದರಬೆಟ್ಟಕ್ಕೆ ಜಲ ಹೊಂಡ ಅಗತ್ಯ: ಸಿದ್ದರಬೆಟ್ಟದ 663ಹೆಕ್ಟೇರ್‌ ಅರಣ್ಯ ಮತ್ತು ಹಿರೇಬೆಟ್ಟದ 954ಹೆಕ್ಟೇರ್‌ ಅರಣ್ಯದಲ್ಲಿ ಸಾವಿರಾರು ಬಗೆಯ ಪ್ರಾಣಿ-ಪಕ್ಷಿಗಳು ವಾಸಿಸುತ್ತೀವೆ. ನೀರು ಮತ್ತು ಆಹಾರದ ಕೊರತೆಯಿಂದ ಪ್ರಾಣಿಗಳು ಪ್ರತಿದಿನ ರೈತರ ಜಮೀನಿಗೆ ದಾಳಿ ಮಾಡಿ ಬೆಳೆಗಳನ್ನು ನಾಶ ಮಾಡುತ್ತಿವೆ. ಅರಣ್ಯ ಇಲಾಖೆ ಜೊತೆ ಸಂಘ-ಸಂಸ್ಥೆ ಮತ್ತು ಪ್ರಕೃತಿ ಪ್ರಿಯರು ಪ್ರಾಣಿಪಕ್ಷಿಗಳ ರಕ್ಷಣೆಗೆ ಧಾವಿಸಬೇಕಾಗಿದೆ.

● ಪದ್ಮನಾಭ್‌

Advertisement

Udayavani is now on Telegram. Click here to join our channel and stay updated with the latest news.

Next