Advertisement
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್ ಅಧ್ಯಕ್ಷತೆಯಲ್ಲಿಶನಿವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾಸಭೆಯಲ್ಲಿ ಅವರು ಮಾಹಿತಿ ನೀಡಿದರು.ಮೇ ತಿಂಗಳಿಂದ ವ್ಯಕ್ತಿಗೆ 2 ಕೆ.ಜಿ. ಅಕ್ಕಿ, 3 ಕೆ.ಜಿ.ರಾಗಿ ಮತ್ತು 2 ಕೆ.ಜಿ. ಗೋಧಿ ವಿತರಣೆಯಾಗಲಿದೆ.ರಾಗಿ ವಿತರಿಸಲು ರೈತರಿಂದ ನೇರವಾಗಿ ಖರೀದಿಸಿಸಂಗ್ರಹಿಸಲಾಗಿದೆ ಎಂದರು.
Related Articles
Advertisement
ಲೋಕೋಪಯೋಗಿ ಇಲಾಖೆಗೆ ಜಿಲ್ಲೆಯ 418ಕೊಠಡಿಗಳ ದುರಸ್ತಿಗೆ 8. 36 ಕೋಟಿ ರೂ. ಅನುದಾನಬಿಡುಗಡೆ ಮಾಡಲಾಗಿತ್ತು. ಮಾರ್ಚ್ ತಿಂಗಳವರೆಗೆ277 ಕೊಠಡಿ ದುರಸ್ತಿ ಪೂರ್ಣಗೊಂಡಿದ್ದು, 75ಪ್ರಗತಿಯಲ್ಲಿದ್ದು, 66 ಕಾಮಗಾರಿ ಪ್ರಾರಂಭವಾಗಬೇಕಿದೆ. ಶೇ. 75ರಷ್ಟು ಅನುದಾನಬಿಡುಗಡೆಯಾಗಿದೆ. ಉಳಿಕೆ ಹಣ ನೀಡಿದರೆ ಕೆಲಸಪೂರ್ಣಗೊಳಿಸುತ್ತೇವೆ ಎಂದು ಇಲಾಖಾ ಅಧಿಕಾರಿಮಾಹಿತಿ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಡಿಡಿಪಿಐಪಾಂಡುರಂಗ, ಕಾಮಗಾರಿ ಪೂರ್ಣಗೊಳಿಸಿದರೆಜಿಲ್ಲಾಧಿಕಾರಿಗಳು ಪೂರ್ಣ ಅನುದಾನ ಬಿಡುಗಡೆಮಾಡುವರು. ಕಾಮಗಾರಿ ವಿಳಂಬದ ಬಗ್ಗೆ ಬೇಸರತೋಡಿಕೊಂಡ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷಕೆ.ಎಸ್.ಮಂಜುನಾಥ್, ಜಿಪಂ ಅಧ್ಯಕ್ಷರು ಸಮಿತಿರಚಿಸಿ ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆಮಾಡಬೇಕು ಎಂದು ಸಲಹೆ ನೀಡಿದರು.
ದಿವ್ಯಾಂಗರಿಗೆ 9 ಸಾವಿರ ಯುಡಿಐಡಿ ಕಾರ್ಡ್‌ವಿತರಣೆ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ14 ಶಿಬಿರ ನಡೆಸಲಾಗಿದೆ ಎಂದು ವಿಕಲಚೇತನರಕಲ್ಯಾಣ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿನೀಡಿದರು. ಹೋಬಳಿ ಮಟ್ಟದಲ್ಲಿ ಶಿಬಿರಏರ್ಪಡಿಸಿದರೆ ದಿವ್ಯಾಂಗರಿಗೆ ಅನುಕೂಲವಾಗುತ್ತದೆಎಂದು ಜಿಪಂ ಅಧ್ಯಕ್ಷರು ಸಲಹೆ ನೀಡಿದರು.
ವಿಶೇಷಚೇತನರಿಗೆ ತ್ರಿಚಕ್ರದ ವಾಹನ ನೀಡುವಲ್ಲಿವಿಳಂಬವಾಗುತ್ತಿರುವ ಬಗ್ಗೆ ಸಭೆಯಲ್ಲಿ ಗಂಭೀರಚರ್ಚೆ ನಡೆಯಿತು.ಸರ್ಕಾರಿ ವಾಹನ ತಪಾಸಣೆ ಮಾಡಲು ಆರ್‌ಟಿಒಅಧಿಕಾರಿಗಳು ಅಲೆದಾಡಿಸುತ್ತಿ¨ªಾರೆ. ಹೀಗಾದರೆಸಾರ್ವಜನಿಕರ ಕೆಲಸ ಹೇಗೆ ಮಾಡುತ್ತಾರೆ. ವಾಹನಪರೀಕ್ಷೆ ಮಾಡಲು ಎಷ್ಟು ದಿನಗಳು ಬೇಕು. ಇಲಾಖೆಅಧಿಕಾರಿಗಳು ಪೂರ್ಣ ಮಾಹಿತಿ ಕೊಡುವುದಿಲ್ಲ.ಹಣಕಾಸಿನ ವಿವರವಂತೂ ಇರುವುದೇ ಇಲ್ಲ ಎಂದುಜಿಪಂ ಅಧ್ಯಕ್ಷೆ ಅಸಮಧಾನ ವ್ಯಕ್ತಪಡಿಸಿದರು.ಕ್ರೀಡಾ ಸಾಮಗ್ರಿ ಕಿಟ್: ಜಿಲ್ಲೆಯಲ್ಲಿ ಕ್ರೀಡಾ ಸಾಮಗ್ರಿಕಿಟ್ ವಿತರಿಸಲು 24 ಲಕ್ಷ ರೂ.ಟೆಂಡರ್‌ಕರೆಯಲಾಗಿದೆ.
1 ಕಿಟ್‌ನಲ್ಲಿ 14 ಬಗೆಯ ಆಟದಸಾಮಾನುಗಳಿರುತ್ತವೆ. 1 ಕಿಟ್‌ಗೆ 48 ಸಾವಿರ ರೂ.ವೆಚ್ಚವಾಗುತ್ತದೆ. ಗರಡಿ ಮನೆ, ಕ್ರೀಡಾ ಕೇಂದ್ರ ಮತ್ತುಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅನುದಾನನೀಡಲಾಗುತ್ತಿದೆ ಎಂದು ಯುವ ಸಬಲೀಕರಣಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರುತಿಳಿಸಿದರು.