ಸಂಭವಿಸುವ ಮುನ್ನ ಕುಂದಾಪುರದಿಂದ ಬಸ್ಸಿನಲ್ಲಿ ಸಿದ್ದಾಪುರದ ಕಡೆಗೆ ಸಂಚರಿಸಿದ್ದರು ಎನ್ನಲಾಗುತ್ತಿದೆ. ಅವರು ಬ್ಯಾಗ್ ಹೊಂದಿದ್ದರು ಎನ್ನುವುದು ಶಾಸ್ತ್ರೀ ಸರ್ಕಲ್‌ನಲ್ಲಿರುವ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಆದರೆ ಅದು ಇನ್ನೂ ಪತ್ತೆಯಾಗಿಲ್ಲ.
Advertisement
ನ. 8ರಂದು ಬದಿಯಡ್ಕದ ತಮ್ಮ ಕ್ಲಿನಿಕ್‌ನಿಂದ ನಾಪತ್ತೆಯಾಗಿದ್ದ ವೈದ್ಯರ ಛಿದ್ರಗೊಂಡ ದೇಹವು ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲು ಹಳಿಯಲ್ಲಿ ನ. 9ರಂದು ಪತ್ತೆಯಾಗಿತ್ತು. ನ. 10ರಂದು ಅವರ ಪುತ್ರಿಯ ಸಹಿತ ಕುಟುಂಬಿಕರು ಮೃತದೇಹವನ್ನು ಗುರುತಿಸಿದ್ದರು.
ರೈಲು ಹಳಿಯ ಮರು ಪರಿಶೀಲನೆ ವೇಳೆ ಕೃಷ್ಣಮೂರ್ತಿ ಅವರು ಧರಿಸಿದ್ದ ಕನ್ನಡಕ, ಚಪ್ಪಲಿ ಹಾಗೂ ಬೆಲ್ಟ್ ಪತ್ತೆಯಾಗಿದೆ. ಅವರು ತಂದಿದ್ದ ಬ್ಯಾಗ್ ಸಿಕ್ಕರೆ ಅದರಲ್ಲಿ ಡೆತ್‌ನೋಟ್ ಏನಾದರೂ ಬರೆದಿಟ್ಟಿರಬಹುದೇ? ಅಥವಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದಾದರೂ ಮಹತ್ವವಾದ ಸುಳಿವು ಸಿಗಬಹುದೇ ಅನ್ನುವ ಕಾರಣಕ್ಕಾಗಿ ಆ ಬ್ಯಾಗ್‌ಗಾಗಿ ಪೊಲೀಸರಿಂದ ತೀವ್ರ ಶೋಧ ನಡೆಯುತ್ತಿದೆ ಎನ್ನಲಾಗಿದೆ.
Related Articles
Advertisement
ಪೈವಳಿಕೆ: ಮೆರವಣಿಗೆ ಮಾಡಿದ 56 ಮಂದಿ ವಿರುದ್ಧ ಕೇಸು ದಾಖಲುಮಂಜೇಶ್ವರ: ಡಾ| ಕೃಷ್ಣಮೂರ್ತಿ ಅವರ ನಿಗೂಢ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಪೈವಳಿಕೆಯಲ್ಲಿ ನಡೆದ ಮೆರವಣಿಗೆಯ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು 56 ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಅವರ ಮೇಲೆ ಸಾರಿಗೆ ಅಡಚಣೆ ಸೃಷ್ಟಿಸಿರುವ ಆರೋಪ ಹೊರಿಸಲಾಗಿದೆ.