ನವದೆಹಲಿ : ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿ ಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ರೈತರಿಗೆ ಹಲವಾರು ಜನ ಸಾಥ್ ನೀಡುತ್ತಿದ್ದು, 29 ವರ್ಷದ ಯುವತಿ ಪ್ರತಿಭಟನೆ ನಡೆಯುತ್ತಿರುವ ರೈತರಿಗಾಗಿ ಗ್ರಂಥಾಲಯವನ್ನು ತೆರೆದಿದ್ದಾರೆ.
ಹೌದು ನವಕಿರಣ ನಟ್(29) ತಾತ್ಕಾಲಿಕವಾಗಿ ಮೂರು ತಿಂಗಳಿನಿಂದ ಗ್ರಂಥಾಲಯವನ್ನು ತೆರೆದಿದ್ದಾರೆ. ಇವರು ದಂತ ವೈದ್ಯೆಯಾಗಿದ್ದು, ಸಿನಿಮಾ ಅಧ್ಯಯನದಲ್ಲಿ ಪದವಿ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಯುವತಿ, ನಾನು ಎಲ್ಲರಂತೆ ಟ್ರಾವೆಲ್ ಮಾಡುತ್ತ, ಸೋಷಿಯಲ್ ಮೀಡಿಯಾ ಬಳಸುತ್ತ ಎಂಜಾಯ್ ಮಾಡಬಹುದಿತ್ತು. ಆದ್ರೆ ಇಂತಹ ಪರಿಸ್ಥಿತಿಯಲ್ಲಿ ವಿದ್ಯಾವಂತರಾದ ನಾವುಗಳು ಸುಮ್ಮನೆ ಕೂರಬಾರದು ಎಂದು ಹೇಳಿದ್ದಾರೆ. ಇವರ ಮಾತು ಮತ್ತು ಇವರ ನಡೆ ಎಷ್ಟೋ ಯುವಕರಿಗೆ ಸ್ಪೂರ್ತಿಯಾಗುತ್ತಿದೆ.
“ಪುಸ್ತಕಗಳು ನನಗೆ ಸಹಾಯ ಮಾಡುತ್ತವೆ”, “ಪುಸ್ತಕಗಳು ನಮಗೆ ಸಹಾಯ ಮಾಡುತ್ತವೆ” ಎನ್ನುವ ಇವರು, ಭಗತ್ ಸಿಂಗ್ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ. ರೈತ ಪ್ರತಿಭಟನೆಯ ಸಮಯದಲ್ಲೇ ಹುಟ್ಟಿಕೊಂಡ ‘ಟ್ರೋಲಿ ಟೈಮ್ಸ್’ ಪತ್ರಿಕೆಗೆ ಸಹಾಯ ಮಾಡುತ್ತಿದ್ದರಂತೆ. ಇವರ ಜೊತೆ ಇನ್ನೂ ಹಲವು ಮಂದಿ ಯುವಕರು ದೆಹಲಿ ಗಡಿಯಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ.
ಇಂತಹ ಪ್ರತಿಭಟನೆಗಳಲ್ಲಿ ಯುವಕರು ಭಾಗಿಯಾಗಬೇಕು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ ನಿರಾಶೆಗೊಂಡಿದ್ದೇನೆ. ಕ್ರಿಯಾಶೀಲತೆಯಲ್ಲಿ ನನ್ನ ನಿಜವಾದ ನಿಲುವನ್ನು ಕಂಡುಕೊಂಡಿದ್ದೇನೆ ಅಂತಾರೆ ನವಕಿರಣ ನಟ್.