Advertisement

ಕ್ವಾರ್ಟರ್‌ ಫೈನಲ್‌ಗೆ ಚಿರಾಗ್‌-ಸಾತ್ವಿಕ್‌

09:51 PM Oct 20, 2022 | Team Udayavani |

ಒಡೆನ್ಸ್‌ (ಡೆನ್ಮಾರ್ಕ್‌): ಡೆನ್ಮಾರ್ಕ್‌ ಓಪನ್‌ ಸೂಪರ್‌-750 ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಪುರುಷರ ಡಬಲ್ಸ್‌ನಲ್ಲಿ ಭಾರತದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ  ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಸೈನಾ ನೆಹ್ವಾಲ್‌ ಮೊದಲ ಸುತ್ತಿನಲ್ಲೇ ಎಡವಿದ್ದಾರೆ.

Advertisement

ಭಾರತದ ಜೋಡಿ ಇಂಡೋನೇಷ್ಯಾದ ಮುಹಮ್ಮದ್‌ ಫಿಕ್ರಿ-ಮೌಲಾನಾ ಬಗಾಸ್‌ ವಿರುದ್ಧ 21-14, 21-16 ಅಂತರದ ಗೆಲುವು ಒಲಿಸಿಕೊಂಡಿತು. ಕೇವಲ 36 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಎಚ್‌.ಎಸ್‌. ಪ್ರಣಯ್‌-ಲಕ್ಷ್ಯ ಸೇನ್‌ ಮುಖಾಮುಖೀ ಆಗಲಿದ್ದಾರೆ. ಪ್ರಣಯ್‌ 21-13, 22-20 ಅಂತರದಿಂದ ಚೀನದ ಜಾವೊ ಜುನ್‌ ಪೆಂಗ್‌ ಅವರನ್ನು ಮಣಿಸಿದರು.

ಸೈನಾಗೆ ಆಘಾತ:

ಭಾರತದ ನೆಚ್ಚಿನ ಆಟಗಾರ್ತಿ ಸೈನಾ ನೆಹ್ವಾಲ್‌ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದರು. ಬುಧವಾರ ರಾತ್ರಿಯ ಪಂದ್ಯದಲ್ಲಿ ಚೀನದ ಚಾಂಗ್‌ ಯೀ ಮನ್‌ ವಿರುದ್ಧ 17-21, 21-19, 11-21 ಅಂತರದಿಂದ ಪರಾಭವಗೊಂಡರು.

Advertisement

ವನಿತಾ ಡಬಲ್ಸ್‌ನಲ್ಲಿ 16ರ ಸುತ್ತಿನ ಪಂದ್ಯದಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಸೋಲನುಭವಿಸಿದರು. ಥಾಯ್ಲೆಂಡ್‌ನ‌ ಜೊಂಗೊಲ್ಪಾನ್‌ ಕಿಟಿತಾರಕ್‌-ರವಿಂದಾ ಪ್ರಜೊಂಗ್‌ಜಾಯ್‌ 23-21, 21-13ರಿಂದ ಭಾರತದ ಜೋಡಿಯನ್ನು ಹಿಮ್ಮೆಟ್ಟಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next