ಚೆನ್ನೈ: ಪೊಲೀಸ್ ಪೇದೆಗಳಿಬ್ಬರು ಸಸ್ಯಹಾರಿ ಹೊಟೇಲ್ ನಲ್ಲಿ ಚಿಕನ್ ಕೇಳಿ, ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೆನ್ನೈನ ತಾಂಬರಂ ಸಮೀಪದ ಪುದುವಂಚೇರಿಯ ರೆಸ್ಟೋರೆಂಟ್ ವೊಂದಕ್ಕೆ ಇಬ್ಬರು ಪೊಲೀಸ್ ಪೇದೆಗಳು ಊಟಕ್ಕೆಂದು ಬಂದಿದ್ದಾರೆ. ಕುಡಿದು ಬಂದಿದ್ದ ಪೊಲೀಸರು ರೆಸ್ಟೋರೆಂಟ್ ಸಿಬ್ಬಂದಿ ಬಳಿ ಚಿಕನ್ ತರಲು ಆರ್ಡರ್ ಮಾಡಿದ್ದಾರೆ. ಚಿಕನ್ ಸಿಗುವುದಿಲ್ಲ ಸರ್ ಎಂದು ಸಿಬ್ಬಂದಿ ಹೇಳಿದ್ದಾನೆ.
ಆಗ ಸಿಬ್ಬಂದಿ ನಮ್ಮದು ವೆಜಿಟೇರಿಯನ್ ಹೋಟೆಲ್ ನಾನ್ ವೆಜ್ ಇಲ್ಲ ಎಂದು ತಿಳಿಸಿದ್ದರು. ತದನಂತರ ಎಗ್ (ಮೊಟ್ಟೆ) ರೈಸ್ ಬೇಕು, ಎಗ್ ವೆಜಿಟೇರಿಯನ್ ಎಂದು ವಾದಿಸಲು ಆರಂಭಿಸಿರುವುದಾಗಿ ವರದಿ ತಿಳಿಸಿದೆ. ಅದಕ್ಕೆ ಪೇದೆಗಳು ಸಿಟ್ಟಾಗಿ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ಹೊಟೇಲ್ ನ ಇತರರು ಬಂದು ಸಮಾಧಾನದಿಂದ ಹೇಳಿದರೂ ಕುಡಿದು ಬಂದಿದ್ದ ಪೇದೆಗಳು ಮಾತು ಕೇಳದೆ ಹಲ್ಲೆಗೆ ಮಂದಾಗಿದ್ದಾರೆ.
ಆಫ್ ಡ್ಯೂಟಿಯಲ್ಲಿದ್ದ ಪೊಲೀಸರು ಹೊಟೇಲ್ ನಲ್ಲಿ ರಾದ್ಧಾಂತವನ್ನೇ ಮಾಡಿದ್ದು, ಇದರಿಂದ ಹೊಟೇಲ್ ನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರೂ ಪೇದೆಗಳಿಗೆ ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
ಹೊಟೇಲ್ ನ ಸಿಸಿಟಿವಿಯಲ್ಲಿ ಪೊಲೀಸ್ ಪೇದೆಗಳ ವರ್ತನೆ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.