Advertisement
ಈಡೀಸ್ ಈಜಿಪ್ಟೆ„ ಸೊಳ್ಳೆ ಕಡಿಯುವುದರಿಂದ ಡೆಂಗ್ಯೂ ವೈರಸ್ ಹರಡುತ್ತದೆ. ಹಗಲಿನಲ್ಲಿ ಈ ಸೊಳ್ಳೆಗಳು ಕಚ್ಚುತ್ತವೆ. ಇದರಿಂದ ಜ್ವರ ಉಂಟಾಗುತ್ತದೆ. ಡೆಂಗ್ಯೂ ಜ್ವರ, ಡೆಂಗ್ಯೂ ರಕ್ತಸ್ರಾವ ಜ್ವರ, ಡೆಂಗ್ಯೂ ಶಾಕ್ ಸಿಂಡ್ರೋಮ್ ಹೀಗೆ ಮೂರು ವಿಧದಲ್ಲಿ ಜ್ವರ ಹರಡುತ್ತದೆ.
ಇದ್ದಕ್ಕಿದ್ದಂತೆ ತೀವ್ರ ಜ್ವರ ಕಾಣಿಸಿಕೊಳ್ಳುವುದು. ತಲೆನೋವು, ಕಣ್ಣಿನ ಮುಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ರೋಗದ ಪ್ರಮುಖ ಲಕ್ಷಣಗಳು. ತೀಕ್ಷ್ಣ ಜ್ವರದ ನಂತರ ರಕ್ತಸ್ರಾವ , ಮೈ, ಊತ, ರಕ್ತದ ಒತ್ತಡ ಉಂಟಾಗುತ್ತದೆ. ಸಾಮಾನ್ಯವಾಗಿ ಇದು ಮಕ್ಕಳಲ್ಲಿ ತೀವ್ರವಾಗಿ ಕಂಡು ಬರುತ್ತದೆ. ಜ್ವರ ಬಂದ 3-5 ದಿನಗಳಲ್ಲಿ ರಕ್ತ ಸ್ರಾವದ ಮತ್ತು ಮೈ ಊತದ ಲಕ್ಷಣಗಳು ಗೋಚರಿಸುತ್ತದೆ. ರೋಗಿಯು ತೀವ್ರ ನಿಶ್ಯಕ್ತಿಯಿಂದ ಬಳಲಿದಂತಾಗುತ್ತಾನೆ.
Related Articles
Advertisement
ಹರಡುವ ರೀತಿಡೆಂಗ್ಯೂ ಸೋಂಕು ಹೊಂದಿದ ವ್ಯಕ್ತಿಯನ್ನು ಸೊಳ್ಳೆ ಕಡಿಯುವುದರಿಂದ ವೈರಸ್ ಹರಡಲು ಕಾರಣವಾಗುತ್ತದೆ. ಸೊಳ್ಳೆ ಕಚ್ಚಿದ 5-7 ದಿವಸಗಳ ನಂತರ ಈ ರೋಗದ ಪ್ರಾಥಮಿಕ ಲಕ್ಷಣಗಳು ಕಂಡುಬರುತ್ತದೆ. ನಿಯಂತ್ರಣ ಕ್ರಮಗಳು
ಮನೆಯೊಳಗೆ ಅಥವಾ ಮೇಲ್ಛಾವಣಿಯ ನೀರಿನ ತೊಟ್ಟಿಗಳಲ್ಲಿ ವಾರಕ್ಕೊಮ್ಮೆ ನೀರನ್ನು ಖಾಲಿ ಮಾಡಿ ಪುನಹಃ ಭರ್ತಿ ಮಾಡಿ ಭದ್ರವಾದ ಮುಚ್ಚಳಿಕೆಯಿಂದ ಮುಚ್ಚುವುದು. ಮನೆಯ ಒಳಗೆ ಹಾಗೂ ಹೊರಗೆ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರವಹಿಸುವುದು. ಒಡೆದ ಬಾಟಲಿ, ಟಿನ್, ಟೈರು ಇತ್ಯಾದಿಗಳಲ್ಲಿ ನೀರು ಸಂಗ್ರಹ ವಾಗದಂತೆ ನೋಡಿಕೊಳ್ಳಬೇಕು. ವಾತಾವರಣ ಸ್ವತ್ಛವಾಗಿರಿಸಿಕೊಂಡರೆ ಇಂತಹ ಸಾಂಕ್ರಾಮಿಕ ರೋಗ ತಡೆಗಟ್ಟಬಹುದಾಗಿದೆ. ತಾಲೂಕಿನ 5 ಮಂದಿಗೆ ಡೆಂಗ್ಯೂ
ಕಾರ್ಕಳ ತಾಲೂಕಿನ 5 ಮಂದಿಗೆ ಡೆಂಗ್ಯೂ ಬಾಧಿಸಿದೆ. ಸಾರ್ವಜನಿಕರು ಸೊಳ್ಳೆ ನಿಯಂತ್ರಣದ ನಿಟ್ಟಿನಲ್ಲಿ ಪರಿಸರ ಸ್ವತ್ಛಗೊಳಿಸುವುದರೊಂದಿಗೆ ಮೈ ಪೂರ್ತಿ ಮುಚ್ಚುವಂತೆ ಬಟ್ಟೆ ಧರಿಸುವುದು, ಸೊಳ್ಳೆ ಪರದೆ, ಸೊಳ್ಳೆ ಬತ್ತಿಯನ್ನು ಉಪಯೋಗಿಸುವುದು ಉತ್ತಮ.
-ಡಾ| ಕೃಷ್ಣಾನಂದ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ, ಕಾರ್ಕಳ ಎಚ್ಚೆತ್ತುಕೊಳ್ಳಲಿ
ಕಾರ್ಕಳ ಪುರಸಭೆ ವ್ಯಾಪ್ತಿಯ ಹಲವೆಡೆಗಳಲ್ಲಿ ನೀರು ನಿಂತಿದ್ದು, ಡೆಂಗ್ಯೂ ಭೀತಿ ಹುಟ್ಟಿಸಿದೆ. ಚರಂಡಿ ಸಮರ್ಪಕವಾಗಿಲ್ಲದ ಕಾರಣ ಹಲವೆಡೆ ನೀರು ನಿಂತ ಪ್ರದೇಶಗಳು ಸೊಳ್ಳೆ ಉತ್ಪತ್ತಿ ತಾಣಗಳಾಗವೆ.