Advertisement

ಡೆಂಘೀ-ಮಲೇರಿಯಾ ನಿಯಂತ್ರಣ ಜಾಗೃತಿ ಜಾಥಾ

03:10 PM Jul 16, 2019 | Team Udayavani |

ಹಿರೇಕೆರೂರ: ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇಲ್ಲಿನ ಎಸ್‌ವಿಎಂ ಪ್ರೌಢ ಶಾಲಾ ಮಕ್ಕಳ ಸಂಯೋಗದೊಂದಿಗೆ ರಾಷ್ಟ್ರೀಯ ಡೆಂಘೀ ವಿರೋಧಿ ಮಾಸಾಚರಣೆ ನಿಮಿತ್ತ ಗ್ರಾಮದ ಪ್ರಮುಖ ಬೀದಿಯಲ್ಲಿ ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕುರಿತು ಜಾಥಾ ನಡೆಸಲಾಯಿತು.

Advertisement

ಈ ವೇಳೆ ಮಾತನಾಡಿದ ಡಾ| ಮಂಗಳಗೌರಿ, ಸೊಳ್ಳೆಗಳು ಆರೋಗ್ಯವಂತ ಮನುಷ್ಯನನ್ನು ಕಚ್ಚಿದಾಗ ರೋಗಾಣುಗಳು ದೇಹ ಪ್ರವೇಶಿಸುತ್ತವೆ. ಬಳಿಕ ಕೆಲವು ದಿನದ ಬಳಿಕ ಇದರ ಪ್ರಭಾವ ಹೆಚ್ಚಾಗುತ್ತದೆ. ಚಳಿ, ತೆಲೆನೋವು, ತೀವ್ರವಾದ ಜ್ವರ, ವಿಪರೀತ ಬೆವರು, ದಿನಬಿಟ್ಟು ದಿನ ಕಾಣಿಸಿಕೊಳ್ಳುವುದು ಮಲೇರಿಯಾ ಲಕ್ಷಣಗಳು. ರೋಗ ಬಂದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ರೋಗ ಬರುವ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಹಿರಿಯ ಶಿಕ್ಷಕ ಆರ್‌.ಎಂ.ದೇವರಮನಿ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಆರೋಗ್ಯ ಇಲಾಖೆ ಸಲಹೆ ಸೂಚನೆಗಳನ್ನು ಪಾಲಿಸಿದರೆ ರೋಗದಿಂದ ದೂರವಿರುವುದಕ್ಕೆ ಸಾಧ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಪ್ರಭು ಕೆಂಚಳ್ಳೇರ, ಸಂತೋಷ, ಶಿಲ್ಪಾ ಎಂ., ಡಿ.ಚಂದ್ರಶೇಖರ, ಆರ್‌.ಎಸ್‌.ಪಾಟೀಲ, ಎಂ.ಶಕುಂತಲಾ, ಸುಮಾ, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next