Advertisement
ನಗರದಲ್ಲಿ ನಡೆಯುತ್ತಿರುವ ಅತ್ಯಧಿಕ ನಿರ್ಮಾಣ, ಅಸಮರ್ಪಕ ಕಸ ನಿರ್ವಹಣೆ, ಹವಾಮಾನ ಬದಲಾವಣೆ, ವಲಸೆಯಂತಹ ಹಲವು ಕಾರಣಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಅತ್ಯಲ್ಪಾವಧಿಯಲ್ಲಿ ಸಾಂಕ್ರಾಮಿಕ ರೋಗ ಅತಿ ವೇಗವಾಗಿ ಹರಡುತ್ತಿರುವುದರ ಮುನ್ಸೂಚನೆ ನೀಡಿದೆ.
Related Articles
Advertisement
ಅದೇ ರೀತಿ, 2011ರಲ್ಲಿ ನಗರ ಜಿಲ್ಲೆಯಲ್ಲಿ 477 ಪ್ರಕರಣಗಳು ಚಿಕುನ್‌ಗುನ್ಯ ಪ್ರಕರಣಗಳು ದಾಖಲಾಗಿದ್ದವು. ಆದರೆ, 2015ರ ಹೊತ್ತಿಗೆ ಇವುಗಳ ಸಂಖ್ಯೆ 2,982ಕ್ಕೆ ಏರಿಕೆಯಾಗಿದೆ. ಈ ಮೂಲಕ ಚಿಕುನ್‌ಗುನ್ಯದಲ್ಲೂ ಬೆಂಗಳೂರಿನ ಪಾಲು ಶೇ. 24ರಷ್ಟಿದೆ. ಈ ಅಂಕಿ-ಅಂಶಗಳ ಪ್ರಕಾರ ಬೆಂಗಳೂರು ಸಾಂಕ್ರಾಮಿಕ ರೋಗಗಳ ರಾಜಧಾನಿಯಾಗಿಯೂ ಬೆಳೆಯುತ್ತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪೂರಕ ವಾತಾವರಣ ಇರುವುದೇ ಕಾರಣ ಸಾಂಕ್ರಾಮಿಕ ರೋಗಗಳು ಇಷ್ಟೊಂದು ವೇಗವಾಗಿ ಹೆಚ್ಚಲು ನಗರದಲ್ಲಿ ರೋಗ ಹರಡುವಂತಹ ಸೊಳ್ಳೆಗಳಿಗೆ ಪೂರಕ ವಾತಾವರಣ ಇರುವುದೇ ಮುಖ್ಯ ಕಾರಣ ಎಂಬ ತೀರ್ಮಾನಕ್ಕೆ ಎಂಪ್ರಿ ವಿಜ್ಞಾನಿಗಳು ಬಂದಿದ್ದಾರೆ.
ತಮಗೆ ಎನ್‌ವಿಬಿಡಿಸಿಪಿ ನೀಡಿದ ದತ್ತಾಂಶಗಳು ಹಾಗೂ ನಗರದಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧರಿಸಿ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯನ್ನು ತಾಳೆ ಹಾಕಿ ನೋಡಿದೆ. ಡೆಂಘೀ ಮತ್ತು ಚಿಕುನ್‌ಗುನ್ಯದಂತ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳಿಗೆ 14ರಿಂದ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ಅತ್ಯಂತ ಸೂಕ್ತವಾದುದು. ಇದಕ್ಕೆ ಪೂರಕವಾಗಿ ಕಳೆದ ಐದು ವರ್ಷಗಳಲ್ಲಿ ನಗರದ ತಾಪಮಾನ 0.6 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ದು ಕಂಡುಬಂದಿದೆ.
ಅಧ್ಯಯನ ಹೀಗೆ: ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಾಖಲಾದ ಡೆಂಘೀ ಮತ್ತು ಚಿಕುನ್‌ಗುನ್ಯ ಪ್ರಕರಣಗಳ ಸಂಖ್ಯೆ ಕಲೆಹಾಕಲಾಗಿದೆ. ನಂತರ ಆಯಾ ಜಿಲ್ಲೆಗಳಲ್ಲಿನ ಪ್ರತಿ ತಿಂಗಳಲ್ಲಿ ದಾಖಲಾದ ತಾಪಮಾನ ಹಾಗೂ ಆದ್ರತೆ ಎಷ್ಟೆಷ್ಟಿದೆ ಎಂಬುದರ ಮಾಹಿತಿ ಸಂಗ್ರಹಿಸಲಾಗುವುದು. ಇದರ ಜತೆಗೆ ತಿಂಗಳವಾರು ಪ್ರಕರಣಗಳನ್ನು ವಿಂಗಡಿಸಲಾಗುವುದು. ಅದನ್ನು ವಿಶ್ಲೇಷಿಸಿಧಿದಾಗ ನಗರದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಕಂಡುಬಂದಿದೆ ಎಂದು ಎಂಪ್ರಿ ವಿಜ್ಞಾನಿ ಕಿರಣ್‌ರೆಡ್ಡಿ ವಿವರಿಸುತ್ತಾರೆ.
* ವಿಜಯಕುಮಾರ್ ಚಂದರಗಿ