Advertisement
ಆರೋಗ್ಯ ಇಲಾಖೆ, ಸ್ಥಳೀಯಾಡಳಿತ ನಗರಸಭೆ ಸಹಯೋಗದಲ್ಲಿ ನಗರದಲ್ಲಿ ನಡೆದ ವಿಶೇಷ ಅಭಿಯಾನದಲ್ಲಿ ಆರೋಗ್ಯ ಇಲಾಖೆ, ನಗರಸಭೆ ಅಧಿಕಾರಿಗಳು ಹಾಗೂ ಸಿಬಂದಿ, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಪಾಲ್ಗೊಂಡು ಡೆಂಗ್ಯೂ, ಮಲೇರಿಯಾ ಕುರಿತು ಜಾಗೃತಿ ಮೂಡಿ ಸುವ ಜತೆಗೆ ಲಾರ್ವಾ ಉತ್ಪತ್ತಿಯಾಗುವ ಸ್ಥಳಗಳ ಸರ್ವೇಕ್ಷಣೆ, ನೀರು ನಿಲ್ಲುವ ಸ್ಥಳಗಳ ಪರಿಶೀಲನೆ, ಸ್ವತ್ಛತೆ ಇಲ್ಲದ ಸ್ಥಳಗಳ ಪರಿಶೀಲನೆ ನಡೆಸಿದರು.
ಜಾಥಾದಲ್ಲಿ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸುವ ಜತೆಗೆ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ನೀರು ನಿಲ್ಲುವ ಸ್ಥಳಗಳ ಸರ್ವೇಕ್ಷಣೆ ನಡೆಸಲಾಯಿತು.
Related Articles
Advertisement
ಗೈರಾದ ಅಧಿಕಾರಿಗಳಿಗೆ ನೋಟಿಸ್ಜಿಲ್ಲಾಧಿಕಾರಿ ಸೂಚನೆಯಂತೆ ನಗರಸಭಾ ವ್ಯಾಪ್ತಿಯಲ್ಲಿ ಡ್ರೈವ್ ಡೇ ವಿಶೇಷ ಕಾರ್ಯಾಚರಣೆ ಅಭಿಯಾನ ನಡೆಯುತ್ತಿದ್ದರೂ ಗೈರಾದ ನಗರಸಭಾ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಹಾಗೂ ಶ್ವೇತಾ ಕಿರಣ್ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸಹಾಯಕ ಕಮಿಷನರ್ ಅವರು ಪೌರಾಯುಕ್ತರಿಗೆ ಸೂಚನೆ ನೀಡಿದರು. ಜನಜಾಗೃತಿ ಮೂಡಿಸುವ ಆವಶ್ಯಕ: ಡಾ| ಗೀತಾ
ಸುಳ್ಯ: ನ.ಪಂ., ತಾಲೂಕು ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಡೆಂಗ್ಯೂ “ಡ್ರೈವ್ ಡೇ’ ನಗರದ ಖಾಸಗಿ ಬಸ್ ನಿಲ್ದಾಣ ಮುಂಭಾಗ ರವಿವಾರ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ಅವರು ಡೆಂಗ್ಯೂ ತಡೆಗಟ್ಟುವ ಕುರಿತಂತೆ ಮಾಹಿತಿ ನೀಡಿದರು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ| ಗೀತಾ ದೊಪ್ಪ ಮಾತನಾಡಿ, ಡೆಂಗ್ಯೂ ತಡೆಗಟ್ಟುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸುವ ಆವಶ್ಯಕತೆ ಇದೆ. ಮನೆ ಸುತ್ತಮುತ್ತ ತೆರೆದ ಪ್ರದೇಶ, ವಸ್ತುಗಳಲ್ಲಿ ಸಂಗ್ರಹವಾಗಿರುವ ನೀರನ್ನು ಬರಿದು ಮಾಡಿ ಸ್ವತ್ಛಗೊಳಿಸಿ ಸೊಳ್ಳೆ ಲಾರ್ವಾ ನಾಶ ಮಾಡಬೇಕು ಎಂದು ಅವರು ಹೇಳಿದರು. ಡಾ| ನಾರಾಯಣ ಹೊಳ್ಳ ಅವರು ರೋಗ ಬಾರದಂತೆ ಎಚ್ಚರಿಕೆ ವಹಿಸಬೇಕಾದ ಅಂಶಗಳ ಬಗ್ಗೆ ವಿವರಿಸಿದರು. ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ಜಾಥಾಕ್ಕೆ ಚಾಲನೆ ನೀಡಿದರು. 2 ತಂಡಗಳಾಗಿ ಮುಖ್ಯ ರಸ್ತೆಗಳಲ್ಲಿ ಜಾಥಾ ಸಾಗಿತ್ತು. ಧ್ವನಿವರ್ಧಕ ಮತ್ತು ಕರಪತ್ರದ ಮೂಲಕ ಡೆಂಗ್ಯೂ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಲಾಯಿತು. ನ.ಪಂ. ಮುಖ್ಯಾಧಿಕಾರಿ ಮತ್ತಡಿ, ವಿವಿಧ ಇಲಾಖಾಧಿಕಾರಿಗಳು, ಸ್ವತ್ಛ ಅಭಿಯಾನದ ವಿನೋದ್ ಲಸ್ರಾದೋ, ನ.ಪಂ. ಎಂಜಿನಿಯರ್ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಭಾರತೀಯ ವೈದ್ಯಕೀಯ ಸಂಘ ಸುಳ್ಯ ಘಟಕ, ಕೆವಿಜಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್, ಕೆವಿಜಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಡೆಂಗ್ಯೂ ಡ್ರೈ ಡೇ ಅಭಿಯಾನಕ್ಕೆ ಕೈ ಜೋಡಿಸಿತ್ತು. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.