Advertisement

ಚಿಂತಾಮಣಿ ನಗರದಲಿ ಹೆಚ್ಚಿದ ಡೆಂಗ್ಯು ಜ್ವರ ಪ್ರಕರಣ

04:28 PM Jul 25, 2022 | Team Udayavani |

ಚಿಕ್ಕಬಳ್ಳಾಪುರ: ಎರಡು ವರ್ಷಗಳ ಹಿಂದೆ ಕೊರೊನಾ ಸೋಂಕು ಹೆಚ್ಚಾಗಿ ಜನಜೀವನವೇಬುಡಮೇಲೆ ಮಾಡಿತು. ಈಗ ಎಲ್ಲವೂಸರಿಯಾಗಿದೆ ಅನ್ನುವಷ್ಟರಲ್ಲಿಯೇ ಜಿಲ್ಲೆಯವಾಣಿಜ್ಯ ನಗರದಲ್ಲಿ ಕೋವಿಡ್‌ ಜೊತೆಗೆ ಡೆಂಗ್ಯುಜ್ವರ ಕಾಣಿಸಿಕೊಂಡಿದ್ದು, ನಾಗರಿಕರಲ್ಲಿ ಆತಂಕ ಮನೆ ಮಾಡಿದೆ.

Advertisement

ಚಿಂತಾಮಣಿ ನಗರದ 20ನೇ ವಾರ್ಡ್‌ನಲ್ಲಿ ಐದು ವರ್ಷದ ಬಾಲಕಿ ನಿವೇದಿತಾ ಡೆಂಗ್ಯು ಯಿಂದಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ.ಸೋಮವಾರ ಇಂದಿರಾಗಾಂಧಿ ಆಸ್ಪತ್ರೆಯಿಂದಅಧಿಕೃತ ವರದಿ ಹೊರಬೀಳಲಿದ್ದು, ಸತ್ಯಾಂಶತಿಳಿಯಲಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ಮೂವರಿಗೆ ವೈರಲ್‌ ಜ್ವರ: ಚಿಂತಾಮಣಿ ನಗರದ 20ನೇ ವಾರ್ಡ್‌ನಲ್ಲಿ ನಾಲ್ವರಿಗೆ ಜ್ವರಕಾಣಿಸಿಕೊಂಡಿದ್ದು, ಆ ಪೈಕಿ ಒಬ್ಬರಿಗೆ ಡೆಂಗ್ಯುಇರುವುದು ಗೊತ್ತಾಗಿದೆ. ಉಳಿದ ಮೂರು ಮಂದಿಗೆ ವೈರಲ್‌ ಜ್ವರ ಇದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಮನೆಗೆ ತೆರಳಿ ಲಾರ್ವ ತಪಾಸಣೆ: ನಗರದ 20ನೇ ವಾರ್ಡ್‌ನಲ್ಲಿ ಈಗಾಗಲೇ ಆರೋಗ್ಯ ಇಲಾಖೆಯಿಂದ ಮನೆ ಮನೆ ಸರ್ವೆ ಕಾರ್ಯಆರಂಭಿಸಲಾಗಿದೆ. ಈಗಾಗಲೇ 264 ಮನೆಗಳಿಗೆತೆರಳಿ ತಪಾಸಣೆ ನಡೆಸಲಾಗಿದೆ. ಅದರಲ್ಲಿ 14ಮನೆಗಳಲ್ಲಿ ಲಾರ್ವ ಪ್ರಕರಣಗಳು ಕಂಡುಬಂದಿದ್ದು, ಅದನ್ನು ನಿರ್ಮೂಲನೆ ಮಾಡಲು ಇಲಾಖಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಒಣ ದಿನ ಆಚರಣೆಗೆ ಸ್ಪಂದಿಸುತ್ತಿಲ್ಲ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಿಂತಲೂ ನಗರ ಪ್ರದೇಶದಲ್ಲಿ ನೈರ್ಮಲ್ಯ ಹದಗೆಟ್ಟು ಸೊಳ್ಳೆಗಳಿಗೆಆಶ್ರಯತಾಣಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಜನರಲ್ಲಿ ಮನೆಯ ಮುಂದೆ ನೀರು ನಿಲ್ಲದಂತೆಮತ್ತು ಕನಿಷ್ಠ ವಾರಕ್ಕೊಮ್ಮೆ ಒಣಗಳ ದಿನಮಾಡಬೇಕೆಂದು ಸೂಚನೆ ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Advertisement

ವಾರ್ಡ್‌ವಾರು ಸಭೆಗೆ ತೀರ್ಮಾನ: ಜಿಲ್ಲೆಯಲ್ಲಿ ಡೆಂಗ್ಯುಜ್ವರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದು ಪ್ರತಿಯೊಂದು ವಾರ್ಡ್‌ಗಳಲ್ಲಿ ಡೆಂಗ್ಯು ಜ್ವರದ ಕುರಿತು ಜಾಗೃತಿ ಮೂಡಿಸುವಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಜಿಲ್ಲೆಯಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಆರೋಗ್ಯಇಲಾಖೆಯೊಂದಿಗೆ ನಾಗರಿಕರು ಸಹ ಸಹಕಾರನೀಡಬೇಕೆಂದು ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಚಿಂತಾಮಣಿ ತಾಲೂಕಿನಲ್ಲಿ ಭಾನುವಾರ ಕೊರೊನಾ ಸೋಂಕಿನ ಪ್ರಕರಣ ಸಹ ಹೆಚ್ಚಾಗಿದೆ. ಐದು ಮಂದಿಗೆ ಕೊರೊನಾ ಸೋಂಕುಕಾಣಿಸಿಕೊಂಡಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ

ಚಿಂತಾಮಣಿ ತಾಲೂಕಿನಲ್ಲಿ ಡೆಂಗ್ಯು ಜ್ವರ ಕಾಣಿಸಿಕೊಂಡಿರುವಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜ್ವರದಿಂದ ಮೃತಪಟ್ಟಿರುವ ಬಾಲಕಿಯ ಬಗ್ಗೆ ಈಗಾಗಲೇ ಇಂದಿರಾಗಾಂಧಿಆಸ್ಪತ್ರೆಯಿಂದ ವರದಿಯನ್ನು ಕೇಳಿದ್ದೇವೆ.ಸೋಮವಾರ ವರದಿ ಬರುವ ಸಾಧ್ಯತೆಇದ್ದು, ನಂತರ ಸತ್ಯಾಂಶ ತಿಳಿಯಲಿದೆ. ಗ್ರಾಮೀಣ, ನಗರ ಪ್ರದೇಶಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ವಾರ್ಡ್‌ವಾರು ಡೆಂಗ್ಯು  ಸಹಿತ ಸಾಂಕ್ರಾಮಿಕರೋಗಗಳ ಕುರಿತು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಡಾ.ಮಹೇಶ್‌ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ, ಚಿಕ್ಕಬಳ್ಳಾಪುರ.

Advertisement

Udayavani is now on Telegram. Click here to join our channel and stay updated with the latest news.

Next