Advertisement

ಮಳೆಯ ಆರ್ಭಟ: ಡೆಂಗ್ಯೂ, ಚಿಕೂನ್‌ಗುನ್ಯಾ ದುಪ್ಪಟ್ಟು!

10:38 PM Jul 19, 2022 | Shreeram Nayak |

ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಕಳೆದ 18 ದಿನದಲ್ಲಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಪ್ರಕರಣದಲ್ಲಿ ಎರಡರಷ್ಟು ಹೆಚ್ಚಳವಾಗಿದೆ.

Advertisement

ರಾಜ್ಯದಲ್ಲಿ ಕಳೆದ 18ದಿನದಲ್ಲಿ 1,660 ಡೆಂಗ್ಯೂ ಹಾಗೂ 407 ಚಿಕೂನ್‌ಗುನ್ಯಾ ಪ್ರಕರಣ ವರದಿಯಾಗಿದೆ. 2022ರ ಏಪ್ರಿಲ್‌1ರಿಂದ ಜು.19ರ ವರೆಗೆ ಒಟ್ಟು ರಾಜ್ಯದ 30 ಜಿಲ್ಲೆಯಲ್ಲಿ 2,799 ಹಾಗೂ ಬಿಬಿಎಂಪಿಯಲ್ಲಿ 585 ಸೇರಿ 3,384 ಡೆಂಗ್ಯೂ ಪ್ರಕರಣ ಹಾಗೂ 775 ಚಿಕೂನ್‌ಗುನ್ಯಾ ಪ್ರಕರಣ ವರದಿಯಾಗಿದೆ. ಆ ಮೂಲಕ ಕಳೆದ ನಾಲ್ಕು ತಿಂಗಳಲ್ಲಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಪ್ರಕರಣ ಸಂಖ್ಯೆ ಮೂರುಪಟ್ಟು ಏರಿಕೆಯಾಗಿರುವುದು ಆರೋಗ್ಯ ಇಲಾಖೆ ಅಂಕಿ- ಅಂಶ ದೃಢಪಡಿಸಿದೆ.

ಉಡುಪಿ 356, ಮೈಸೂರು 349, ದಕ್ಷಿಣ ಕನ್ನಡ 176, ದಾವಣಗೆರೆ 163, ಶಿವಮೊಗ್ಗ 158 ಡೆಂ à ಪ್ರಕರಣಗಳು ಪತ್ತೆಯಾಗಿದೆ. ವಿಜಯಪುರ 136, ಕೋಲಾರ 100, ಹಾಸನ 53 ಚಿಕೂನ್‌ಗುನ್ಯಾ ಪ್ರಕರಣದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗಿದೆ.

ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳೂ ಸಹ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಪ್ರಕರಣಗಳ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸುವುದು ಕಡ್ಡಾಯವಾಗಿಸಿದೆ. ಈಡೀಸ್‌ ಲಾರ್ವಾ ಸಮೀಕ್ಷೆ ನಡೆಸಿದ್ದು, ಲಾರ್ವಾ ತಾಣಗಳನ್ನು ನಾಶಪಡಿಸಲಾಗಿದೆ. ಈ ಚಟುವಟಿಕೆ ನಿರಂತರಗೊಳಿಸಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಡೆಂಗ್ಯೂ ಲಕ್ಷಣ
-ಇದ್ದಕ್ಕಿದ್ದಂತೆ ತೀವ್ರ ಜ್ವರ
-ವಿಪರೀತ ತಲೆನೋವು
-ಮೈ-ಕೈ ನೋವು
-ಕೀಲುಗಳಲ್ಲಿ ವಿಪರೀತ ನೋವು
– ವಾಕರಿಕೆ, ವಾಂತಿ
-ಆಂತರಿಕ ರಕ್ತಸ್ರಾವ
-ಒಸಡುಗಳಲ್ಲಿ ರಕ್ತಸ್ರಾವ.

Advertisement

ಚಿಕೂನ್‌ಗುನ್ಯಾದ ಲಕ್ಷಣ
-ತೀವ್ರ ಜ್ವರ
-ದೇಹದಲ್ಲಿ ಅತಿಯಾದ ನೋವು
-ಗಂಟುಗಳಲ್ಲಿ ನೋವು
– ದೇಹದ ಹಲವಾರು ಭಾಗಗಳಲ್ಲಿ ದದ್ದುಗಳು
-ಪಾದ ಹಾಗೂ ಕೈಗಳಲ್ಲಿ ಊತ
– ಕಣ್ಣುಗಳು ಕೆಂಪಾಗಬಹುದು

 

 

Advertisement

Udayavani is now on Telegram. Click here to join our channel and stay updated with the latest news.

Next