Advertisement

ಯಕ್ಷಗಾನ ಹಾಸ್ಯ ಪರಂಪರೆ ಪ್ರಾತ್ಯಕ್ಷಿಕೆ, ದಾಖಲೀಕರಣ

11:51 PM Jan 08, 2020 | Lakshmi GovindaRaj |

ಬೆಳ್ತಂಗಡಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಉಜಿರೆಯ ಎಸ್‌ಡಿಎಂ ಕಾಲೇಜಿನ ಸಹಯೋಗದಲ್ಲಿ ಜ.11 ಹಾಗೂ 12ರಂದು ಯಕ್ಷಗಾನ ಹಾಸ್ಯ ಪರಂಪರೆ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಕಾರ್ಯಕ್ರಮ ಆಯೋಜಿಸಿದೆ. ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಸಂಯೋಜನೆಯಲ್ಲಿ ಸಿದ್ಧವನ ಗುರುಕುಲದಲ್ಲಿ ನಡೆಯುವ ಕಾರ್ಯಕ್ರಮವನ್ನು ಜ. 11ರಂದು ಬೆಳಗ್ಗೆ 10 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು.

Advertisement

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ|ಎಂ.ವಿ.ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಹಾಸ್ಯಗಾರ ಪೆರುವಡಿ ನಾರಾಯಣ ಭಟ್‌ ಭಾಗವಹಿಸುವರು. ಬಡಗಿನ ಬೇಹಿನಚರ, ದಾರುಕ, ದೇವದೂತ, ರಕ್ಕಸದೂತ, ಕುದುರೆದೂತ, ವನಪಾಲಕಿ, ಕಂದರ ಹಾಗೂ ತೆಂಕಿನ ಹೊಗಳಿಕೆ, ಹನುಮನಾಯಕ, ಮಂತ್ರವಾದಿ, ಕೊರವಂಜಿ, ಭೈರಾಗಿ, ರಂಗ-ರಂಗಿ, ಸಿಂಗ-ಸಿಂಗಿ ಇವುಗಳ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ ಮೊದಲ ದಿನ ನಡೆಯಲಿದೆ.

ಅದೇ ದಿನ ಸಂಜೆ 6ರಿಂದ ಉಜಿರೆಯ ಗೋವಿಂದ ಕಲಾಭಾವಾ ರ್ಪಣ ಸಂಯೋಜನಾ ಸಮಿತಿಯಿಂದ ಕರ್ಣಾ ರ್ಜುನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜ.12ರಂದು ಅಪಶಕುನಗಳು, ಮಡಕೆ ಮಾರುವವ, ಸೌದೆ ಮಾರುವವ, ಕಳ್ಳು ಮಾರುವವ, ಹರಿವೆ ಸೊಪ್ಪು ಮಲ್ಲಮ್ಮ, ಉರ್ದು ಸಾಯº, ಮಾಪಿಳ್ಳೆ, ಕಿರಿಸ್ತಾನ್‌ ನರಸಣ್ಣ, ಗಾಣಿಗ, ಅಂಡುಕುಟ್ಟಿ ಹಾಗೂ ದೇವದೂತ, ರಕ್ಕಸದೂತ, ಬ್ರಹ್ಮ, ನಾರದ, ಜ್ಯೋತಿಷಿ, ವಿದ್ಯುಜ್ಜಿಹ್ವ, ಬಾಹುಕ, ಪಾಪಣ್ಣ ಇತ್ಯಾದಿಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಜೆ 4 ಗಂಟೆಗೆ ಪ್ರೊ| ಎಂ.ಎ.ಹೆಗಡೆ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next