ಡೆಹ್ರಾಡೂನ್: ಹವಾಮಾನ ಸುಧಾರಣೆಗೊಂಡ ಹಿನ್ನೆಲೆಯಲ್ಲಿ ಉತ್ತರಖಂಡದ ಜೋಶಿಮಠದಲ್ಲಿ ಅಸುರಕ್ಷಿತ ಕಟ್ಟಡಗಳನ್ನು ಕೆಡವಿಹಾಕುವ ಕಾರ್ಯ ಶನಿವಾರ ಪುನರಾರಂಭಗೊಂಡಿದೆ. ಮಲಾರಿ ಇನ್ ಮತ್ತು ಮೌಂಟ್ ವೀವ್ ಹೋಟೆಲ್ ಹಾಗೂ ಲೋಕೋಪಯೋಗಿ ಇಲಾಖೆಯ ಐಬಿ ಕಟ್ಟಡವನ್ನು ಡ್ರಿಲ್ಲಿಂಗ್ ಮೆಶಿನ್ ಮತ್ತು ಬುಲ್ಡೋಜರ್‌ಗಳ ಸಹಾಯದಿಂದ ನೆಲಸಮಗೊಳಿಸುವ ಮತ್ತೆ ಕೈಗೆತ್ತಿಕೊಳ್ಳಲಾಗಿದೆ.
ಇದುವೆರೆಗೂ ಜೋಶಿಮಠದ 849 ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. 269 ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಚಳಿಯಿಂದ ರಕ್ಷಿಸಿಕೊಳ್ಳಲು ಹೀಟರ್‌ಗಳು, ಬ್ಲೋವರ್‌ಗಳು, ಥರ್ಮಲ್ ವೇರ್, ಬಿಸಿ ನೀರಿನ ಬಾಟಲ್, ವುಲ್ಲನ್ ಕ್ಯಾಪ್, ಸಾಕ್ಸ್, ಶಾಲ್, ಕಂಬಳಿಗಳನ್ನು ಒದಗಿಸಲಾಗಿದೆ.
ಜತೆಗೆ ಆಹಾರ ಧ್ಯಾನ್ಯಗಳ ಕಿಟ್ ಮತ್ತು ದಿನನಿತ್ಯ ಬಳಕೆಯ ವಸ್ತುಗಳ ಕಿಟ್‌ಗಳನ್ನು ಒದಗಿಸಲಾಗಿದೆ,’ ಎಂದು ಅಧಿಕಾರಿ ಮಾಹಿತಿ ನೀಡಿದರು.