Advertisement

ಡೆಮೋಕ್ರಟಿಕ್ ಆಜಾದ್ ಪಾರ್ಟಿ: ನೂತನ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಆಜಾದ್

01:24 PM Sep 26, 2022 | Team Udayavani |

ಜಮ್ಮು-ಕಾಶ್ಮೀರ: ಕಾಂಗ್ರೆಸ್ ಪಕ್ಷವನ್ನು ತೊರೆದ ಒಂದು ತಿಂಗಳ ಬಳಿಕ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಸೋಮವಾರ (ಸೆಪ್ಟೆಂಬರ್ 26) ತಮ್ಮ ನೂತನ ಪಕ್ಷದ ಹೆಸರನ್ನು ಘೋಷಿಸಿದ್ದಾರೆ. ಹೊಸ ಪಕ್ಷಕ್ಕೆ “ಡೆಮೋಕ್ರಟಿಸ್ ಆಜಾದ್ ಪಾರ್ಟಿ ಎಂದು ಹೆಸರಿಟ್ಟಿದ್ದಾರೆ.

Advertisement

ಇದನ್ನೂ ಓದಿ:ʼರಾಮ್‌ ಸೇತುʼ ಉಳಿವಿಗೆ ರೋಚಕ ಸಫಾರಿ ಹೊರಟ ಅಕ್ಷಯ್:‌ ಟೀಸರ್‌, ರಿಲೀಸ್‌ ಡೇಟ್‌ ಔಟ್

ತಮ್ಮ ಪಕ್ಷಕ್ಕೆ ಸೇರುವವರಿಗೆ ವಯಸ್ಸಿನ ಮಿತಿ ಇಲ್ಲ. ಯುವಕರು ಹಾಗೂ ಹಿರಿಯರು ಡೆಮೋಕ್ರಟಿಕ್ ಆಜಾದ್ ಪಕ್ಷವನ್ನು ಸೇರಬಹುದಾಗಿದೆ ಎಂದು ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ. ಗುಲಾಂ ನಬಿ ಅವರು ಆಗಸ್ಟ್ 26ರಂದು ಕಾಂಗ್ರೆಸ್ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಇದರೊಂದಿಗೆ ಸುಮಾರು ಐದು ದಶಕಗಳ ಕಾಂಗ್ರೆಸ್ ಪಯಣ ಕೊನೆಗೊಂಡಂತಾಗಿತ್ತು.

ನನ್ನ ಹೊಸ ಪಕ್ಷಕ್ಕಾಗಿ ಉರ್ದು ಮತ್ತು ಸಂಸ್ಕೃತ ಭಾಷೆಯ ಸುಮಾರು 1,500 ಹೆಸರುಗಳನ್ನು ಸೂಚಿಸಲಾಗಿತ್ತು. ಆದರೆ ನಮಗೆ ಪ್ರಜಾಪ್ರಭುತ್ವ, ಶಾಂತಿಯುತ ಮತ್ತು ಸ್ವತಂತ್ರ ರೀತಿಯ ಹೆಸರು ಪಕ್ಷಕ್ಕೆ ಇಡಬೇಕೆಂದು ಬಯಸಿದ್ದು, ಆ ನಿಟ್ಟಿನಲ್ಲಿ ಡೆಮೋಕ್ರಟಿಕ್ ಆಜಾದ್ ಪಕ್ಷ ಎಂದು ಹೆಸರಿಟ್ಟಿರುವುದಾಗಿ ಗುಲಾಂ ನಬಿ ಎಎನ್ ಐಗೆ ತಿಳಿಸಿದ್ದಾರೆ.

ಪಕ್ಷದ ಹೆಸರನ್ನು ರಿಜಿಸ್ಟರ್ಡ್ ಮಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಆದರೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಯಾವಾಗ ಬೇಕಾದರೂ ನಡೆಯಬಹುದು ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಹೇಳುವ ಮೂಲಕ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಎಂದು ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next