Advertisement

ಸಚಿವರಿಂದ ಪ್ರಜಾಪ್ರಭುತ್ವ ಕಗ್ಗೊಲೆ

07:43 PM Mar 08, 2021 | Adarsha |

ತಾಳಿಕೋಟೆ: ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಬಲಿಷ್ಠ ಅಂಗವೆಂದು ಗುರುತಿಸಿಕೊಂಡಿರುವ ಪತ್ರಿಕಾ ರಂಗದ ಹಕ್ಕುಗಳನ್ನು ಕಸಿದುಕೊಳ್ಳಲು ಸರ್ಕಾರದ ಭಾಗವಾಗಿರುವ ಸಚಿವರುಗಳು ಮಾಡುತ್ತಿರುವದು ಕಾರ್ಯ ಖಂಡನೀಯವಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ರಾಜ್ಯಾಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಭಾಗವಾಗಿರುವ ಸಚಿವರುಗಳು ಅಶ್ಲೀಲವಾಗಿ ತಮ್ಮ ನಡೆ ತೋರಿಸುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಬಸವಣ್ಣನವರು ಜನ್ಮ ತಾಳಿದ ನಮ್ಮ ನಾಡಿನಲ್ಲಿ ರಾಜಕಾರಣಿಗಳು ಮಾದರಿಯಾಗಬೇಕು. ಆದರೆ ಇಡಿ ಸಮಾಜಕ್ಕೆ ನಾಚಿಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದರು. ಸರ್ಕಾರದ ಭಾಗವಾಗಿರುವ 6 ಸಚಿವರುಗಳು ತಮ್ಮ ತಮ್ಮ ಪ್ರಕರಣಗಳು,ಹಗರಣಗಳ ಸಿಡಿಗಳು  ಬಿಡುಗಡೆಯಾದರೆ ಮಾಧ್ಯಮಗಳು ಪ್ರಸಾರ ಮಾಡಬಾರದೆಂದು ಕೋರ್ಟ್‌ ಮೋರೆ ಹೋಗಿದ್ದಾರೆ.

ಇದರ ಅರ್ಥ ಜಾರಕಿಹೋಳಿ ಅವರ ಹಾಗೆ ತಾವು ಅಕ್ರಮ ಸಂಬಂಧ ಹೊಂದಿದ್ದಾರೆಂಬ ವಾಸನೆ ತಾವೇ ನಾಗರಿಕ ಸಮಾಜಕ್ಕೆ ತೋರಿಸುತ್ತಿರುವುದು  ಲಜ್ಜೆಗಟ್ಟಜೀವನವಾಗಿದೆ. ನಿಮಗೆ ಅಂತಹ ಜೀವನ ಬೇಕಾಗಿದ್ದರೆ ಪವಿತ್ರವಾದ ತಮ್ಮ ಹುದ್ದೆಗಳಿಗೆ ರಾಜೀನಾಮೆಯನ್ನು ಕೊಟ್ಟು ಹೊರಗಡೆ ಬನ್ನಿ.

ಅದನ್ನು ಬಿಟ್ಟು ತಮ್ಮ ಅಕ್ರಮದ ಸತ್ಯಾಸತ್ಯತೆಯ ಸುದ್ದಿ ಪ್ರತಿಕಾ ಹಾಗೂ ಇನ್ನಿತರ ಮಾದ್ಯಮಗಳಲ್ಲಿ ಮುದ್ರಿಸಬಾರದೆಂದು ಕೋರ್ಟ್‌ಗೆ ಮೋರೆ ಹೋಗಿರುವದು ಮಾಧ್ಯಮದ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದರು. ಶಮಶುದ್ದೀನ್‌ ನಾಲಬಂದ, ಕಾಶೀಮಪಟೇಲ್‌ ಪಾಟೀಲ (ಮೂಕಿಹಾಳ), ಇಬ್ರಾಹಿಂ ಮನ್ಸೂರ್‌, ಜೈಭೀಮ ಮುತ್ತಗಿ, ಗೌಸ್‌ ನಾಸರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next