Advertisement

Democracy ಎಂದರೆ ಕೇವಲ ಕಟ್ಟಡಗಳಲ್ಲ… : ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

05:24 PM May 28, 2023 | Team Udayavani |

ಹೊಸದಿಲ್ಲಿ: ನೂತನ ಸಂಸತ್ ಭವನದ ಉದ್ಘಾಟನೆಯನ್ನು ಕಾಂಗ್ರೆಸ್ ಪಕ್ಷ ಬಹಿಷ್ಕರಿಸಿದ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಜಾಪ್ರಭುತ್ವ ಎಂದರೆ ಕೇವಲ ಕಟ್ಟಡಗಳಲ್ಲ, ಅದು ಜನರ ಧ್ವನಿಯೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

Advertisement

ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಸಂಸತ್ತಿನತ್ತ ಮೆರವಣಿಗೆ ನಡೆಸಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಬಲವಂತವಾಗಿ ತಡೆದು ವಶಕ್ಕೆ ಪಡೆದಿರುವ ಮತ್ತು ಮಾರಾಮಾರಿ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

“ನೂತನ ಸಂಸತ್ತಿನ ಉದ್ಘಾಟನೆಯ ಹಕ್ಕನ್ನು ರಾಷ್ಟ್ರಪತಿಯಿಂದ ಕಿತ್ತುಕೊಳ್ಳಲಾಗಿದೆ. ಸರ್ವಾಧಿಕಾರದ ಬಲದಿಂದ ಮಹಿಳಾ ಆಟಗಾರ್ತಿಯರನ್ನು ಬೀದಿಗಳಲ್ಲಿ ಥಳಿಸಲಾಗಿದೆ ಎಂದು ಖರ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

“ಬಿಜೆಪಿ-ಆರ್‌ಎಸ್‌ಎಸ್ ಆಡಳಿತಗಾರರ ಮೂರು ಸುಳ್ಳುಗಳು, ಪ್ರಜಾಪ್ರಭುತ್ವ, ರಾಷ್ಟ್ರೀಯತೆ ಮತ್ತು ಬೇಟಿ ಬಚಾವೋ ಈಗ ದೇಶದ ಮುಂದೆ ಬಯಲಾಗಿವೆ . ಮೋದಿ ಜಿ ನೆನಪಿರಲಿ, ಪ್ರಜಾಪ್ರಭುತ್ವವು ಕೇವಲ ಕಟ್ಟಡಗಳಲ್ಲ, ಆದರೆ ಸಾರ್ವಜನಿಕರ ಧ್ವನಿಯೊಂದಿಗೆ ಕಾರ್ಯನಿರ್ವಹಿಸುತ್ತದೆ” ಎಂದು ಖರ್ಗೆ ಹೇಳಿದ್ದಾರೆ.

ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಮತ್ತು ದೆಹಲಿ ಪೊಲೀಸರ ನಡುವೆ ಮಾರಾಮಾರಿ ನಡೆದ ನಂತರ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರನ್ನು ಇತರ ಪ್ರತಿಭಟನಾಕಾರರನ್ನು ಬಂಧಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next