Advertisement

ಸಕ್ರಿಯ ವಿರೋಧ ಪಕ್ಷ ದಿಂದ ಪ್ರಜಾಪ್ರಭುತ್ವ ಗಟ್ಟಿ

02:51 PM Aug 06, 2022 | Team Udayavani |

ಶಹಾಬಾದ: ಸಕ್ರಿಯ ವಿರೋಧ ಪಕ್ಷ ಹಾಗೂ ಸಕ್ರಿಯವಾಗಿ, ಸ್ವತಂತ್ರವಾಗಿ ಮತ್ತು ಸ್ವಾಭಿಮಾನಿಗಳಾಗಿ ಕೆಲಸ ಮಾಡುವ ಪತ್ರಕರ್ತರು ಇದ್ದಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಗಟ್ಟಿಯಾಗಿ ಉಳಿಯುತ್ತವೆ ಎಂದು ಮಾಜಿ ಸಚಿವ ಹಾಗೂ ಶಾಸಕರಾದ ಪ್ರಿಯಾಂಕ್‌ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಶುಕ್ರವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮಗಳ ತನಿಖಾ ವರದಿಗಳಿಂದಾಗಿ ಸರ್ಕಾರಗಳ ನೀತಿಗಳು ಬದಲಾಗಿವೆ. ರಾಜಕಾರಣಿಗಳು ರಾಜಿನಾಮೆ ನೀಡಿದ್ದಾರೆ. ಭ್ರಷ್ಟಾಚಾರ ಬಯಲಿಗೆ ಬಂದಿವೆ. ಪಿಎಸ್‌ಐ ಪರೀಕ್ಷಾ ಅಕ್ರಮವೂ ಬಯಲಿಗೆ ಬಂದು ಅನೇಕರು ಬಂಧನಕ್ಕೊಳಗಾದರು. ಇದು ಮಾಧ್ಯಮಗಳ ನಿಜವಾದ ಶಕ್ತಿ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸದಸ್ಯ ಡಾ| ಶಿವರಂಜನ್‌ ಸತ್ಯಂಪೇಟೆ ಮಾತನಾಡಿ, ಪತ್ರಕರ್ತರು ಏಕತಾನತೆ ಸುದ್ದಿಗಳ ಕಡೆಗೆ ಗಮನ ಕೊಡದೇ ವಿಭಿನ್ನ ತರದ ಸುದ್ದಿಗಳ ಕಡೆಗೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಖರ್ಗೆ ಚಿತ್ತಾಪುರ ಪಟ್ಟಣದ ಪತ್ರಕರ್ತರಿಗಾಗಿ ನಿವೇಶನ ಒದಗಿಸಲು ಎರಡು ಎಕರೆ ಜಮೀನು ಕೊಟ್ಟಿದ್ದಾರೆ. ಹಾಗೆ ಪತ್ರಿಕಾ ಭವನ ನಿರ್ಮಾಣಕ್ಕಾಗಿ 40×80 ಅಳತೆಯ ನಿವೇಶನ ಹಾಗೂ 50ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

Advertisement

ಕ.ರಾ.ರ.ಸಾ.ಸಂ ಮಾಜಿ ಅಧ್ಯಕ್ಷ ಇಲಿಯಾಸ್‌ ಭಾಗವಾನ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಪತ್ರಕರ್ತ ಸಂಘದ ಅಧ್ಯಕ್ಷ ರಘುವೀರ್‌ಸಿಂಗ್‌ ಠಾಕೂರ ಮಾತನಾಡಿದರು.

ಬಿಜೆಪಿ ಮುಖಂಡ ಗೋರಕನಾಥ ಶಾಖಾಪುರ, ಕಾ.ನಿ.ಪ.ಸಂ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್‌ ಠಾಕೂರ, ಕಾ.ನಿ.ಪ.ಸಂ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಕಾ.ನಿ.ಪ.ಸಂ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಅವಂಟಿ, ತಹಶೀಲ್ದಾರ್‌ ಸುರೇಶ ವರ್ಮಾ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಷೀದ್‌ ಮಚಂìಟ್‌, ಕಾಂಗ್ರೆಸ್‌ ಮುಖಂಡ ಡಾ| ರವಿ ಚವ್ಹಾಣ, ನಗರ ಯೋಜನಾ ಪ್ರಾ ಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್‌, ಜೆಡಿಎಸ್‌ ಅಧ್ಯಕ್ಷ ರಾಜ ಮಹಮ್ಮದ್‌, , ಅಡತ್‌ ಹಾಗೂ ದಾಲಮಿಲ್‌ ಸಂಘದ ಅಧ್ಯಕ್ಷ ಶಿವಕುಮಾರ ಇಂಗನಶೆಟ್ಟಿ, ಎಪಿಎಂಸಿ ಸದಸ್ಯ ವಿಶ್ವಾರಾಧ್ಯ ಬಿರಾಳ, ಚಿತ್ತಾಪುರ ಎಪಿಎಂಸಿ ಅಧ್ಯಕ್ಷ ಸಿದ್ಧುಗೌಡ ಅಫಜಲಪುರಕರ್‌, ನಗರಸಭೆ ಪೌರಾಯುಕ್ತ ಬಸವರಾಜ ಹೆಬ್ಟಾಳ, ತಾಪಂ ಇಒ ಡಾ| ಬಸಲಿಂಗಪ್ಪ ಡಿಗ್ಗಿ, ನಾಗರಾಜ ದಂಡಾವತಿ ಮತ್ತಿತರರಿದ್ದರು.

ರಾಜು ಕೋಬಾಳ ಮತ್ತು ದಶರಥ ಕೋಟನೂರ ನಾಡಗೀತೆ ಹಾಡಿದರು, ಲೋಹಿತ್‌ ಕಟ್ಟಿ ನಿರೂಪಿಸಿದರು, ಮಲ್ಲಿನಾಥ ಪಾಟೀಲ ಸ್ವಾಗತಿಸಿದರು, ಶಿವಕುಮಾರ ಕುಸಾಳೆ ವಂದಿಸಿದರು.

ಕ್ವಾಲಿಟಿ ಆಫ್‌ ಜರ್ನಲಿಸಂ ಕುರಿತಂತೆ ಮಾತನಾಡುವುದೇ ಬೇಡದಂತಾಗಿದೆ. ಮಾಧ್ಯಮಗಳು ಉದ್ಯಮಗಳಾಗಿ ಬದಲಾಗಿವೆ. ಜಾಹೀರಾತಿನ ಮೂಲಕ ಆರ್ಥಿಕತೆ ನಿರೀಕ್ಷೆ ಮಾಡುತ್ತಿರುವುದರಿಂದಾಗಿ ಕ್ವಾಲಿಟಿ ಕಡಿಮೆಯಾಗಿದೆ. ಇದರಲ್ಲಿ ಜನಪ್ರತಿನಿಧಿಗಳ ಪಾಲು ಇದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗವೂ ದಾರಿಯಲ್ಲಿ ನಡೆಯಬೇಕು. ಕಾರ್ಯಾಂಗ ಜೀ ಹೂಜೂರ್‌ ಕೆಲಸ ಮಾಡುತ್ತಿದೆ. ನ್ಯಾಯಾಂಗ ಕಾರ್ಯಾಂಗದ ಕೆಲಸ ಮಾಡುತ್ತಿದೆ. ಮಾಧ್ಯಮರಂಗ ನ್ಯಾಯಾಂಗದ ಕೆಲಸ ಮಾಡುತ್ತಿದೆ. ಇದರ ಬದಲು ಈ ಎಲ್ಲ ಅಂಗಗಳು ಪ್ರಭುದ್ದ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು. -ಪ್ರಿಯಾಂಕ್‌ ಖರ್ಗೆ, ಶಾಸಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next