ಕೋಲ್ಕತಾ : ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಜಾಪ್ರಭುತ್ವವನ್ನು ಬುಲ್ಡೋಜ್ ಮಾಡಲಾಗುತ್ತಿದೆ ಎಂದು ಗುರುವಾರ ಹೇಳಿದ್ದಾರೆ.
“ಭಾರತದಲ್ಲಿ, ಇಲ್ಲಿ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುತ್ತದೆಯೇ ಎಂದು ನನಗೆ ಅನುಮಾನವಿದೆ! ಪ್ರಜಾಪ್ರಭುತ್ವ ಎಲ್ಲಿದೆ? ಅವರು ಪ್ರಜಾಪ್ರಭುತ್ವ ಸರ್ಕಾರವನ್ನು ಬುಲ್ಡೋಜ್ ಮಾಡಿದರೆ! ನಾವು ಜನರಿಗೆ, ಉದ್ಧವ್ ಠಾಕ್ರೆ ಅವರಿಗೆ ನ್ಯಾಯವನ್ನು ಬಯಸುತ್ತೇವೆ, ಮಹಾರಾಷ್ಟ್ರದ ನಂತರ ಅವರು ಮತ್ತೊಂದು ಸರ್ಕಾರವನ್ನು ಉರುಳಿಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಹವಾಲಾ ಹಣದ ಮೂಲಕ ಶಾಸಕರನ್ನು ಖರೀದಿಸಲಾಗಿದೆ ಎಂದು ಕಿಡಿಕಾರಿ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದು ನಿಜಕ್ಕೂ ಆಘಾತಕಾರಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಶೀಘ್ರದಲ್ಲಿಯೇ ಬಿಜೆಪಿ ಸರ್ಕಾರ : ಪ್ರಮೋದ್ ಸಾವಂತ್