Advertisement

ಬೆಂಬೆಲೆ ಕಾನೂನು ಬದ್ದಕ್ಕೆ ಆಗ್ರಹ

03:34 PM Sep 21, 2022 | Team Udayavani |

ವಾಡಿ: ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನುಬದ್ಧಕ್ಕೆ ಆಗ್ರಹಿಸಿ ವಿವಿಧ ಗ್ರಾಮಗಳ ರೈತರು, ಅಖೀಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್‌) ನೇತೃತ್ವದಲ್ಲಿ ಸಂಘಟಿತರಾಗುವ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಯಿತು.

Advertisement

ಈ ಕುರಿತು ಮಂಗಳವಾರ ಚಿತ್ತಾಪುರ ತಾಲೂಕಿನ ಹಳಕರ್ಟಿ, ಲಾಡ್ಲಾಪುರ, ಕಮರವಾಡಿ ಸೇರಿದಂತೆ ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಏಕಕಾಲದಲ್ಲಿ ಮನವಿಪತ್ರ ಸಲ್ಲಿಸಿ, ಅಖೀಲ ಭಾರತ ಪ್ರತಿಭಟನಾ ದಿನವನ್ನಾಗಿ ಆಚರಿಸಲಾಯಿತು.

ಈ ವೇಳೆ ರೈತರನ್ನು ಉದ್ದೇಶಿಸಿ ಮಾತನಾಡಿದ ಎಐಕೆಕೆಎಂಎಸ್‌ ತಾಲೂಕು ಉಪಾಧ್ಯಕ್ಷ ಗುಂಡಣ್ಣ ಎಂ.ಕೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಗ್ರಾಮೀಣ ಬಡ ಜನತೆ ಬದುಕಿನ ಮೇಲೆ ಸರ್ಕಾರವೇ ಬರೆ ಎಳೆದಿದೆ. ಬೀಜ, ರಸಗೊಬ್ಬರ ಬೆಲೆ ದುಬಾರಿಗೊಳಿಸಿ ಸಬ್ಸಿಡಿ ಹಿಂದಕ್ಕೆ ಪಡೆದು ಕೃಷಿಯನ್ನೇ ಕಡೆಗಣಿಸಲಾಗಿದೆ. ಆದ್ದರಿಂದ ಸರ್ಕಾರವೇ ಬೆಳೆ ಖರೀದಿಸಬೇಕು. ಎಂಎಸ್‌ಪಿ ಕಾನೂನು ಬದ್ಧ ಮಾಡಬೇಕು ಎಂದು ಆಗ್ರಹಿಸಿದರು.

ರೈತರಾದ ಮಲ್ಲಣ್ಣ ಗಂಜಿ, ನಾಗಪ್ಪ ದಂಡಬಾ, ಈರಣ್ಣ ನರಿಬೋಳ, ಶರಣು ಗಂಜಿ, ಸಾಬಣ್ಣ ಚಿನ್‌, ಬಸಣ್ಣ ಗಜ್ಜ, ಮಾಶಪ್ಪ ಆನೇಮಿ, ಮರೆಪ್ಪ ಆನೇಮಿ, ಅಯ್ಯಪ್ಪ ಆನೇಮಿ, ಮಲ್ಲಪ್ಪ ಹಡಪದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಮರವಾಡಿ ಗ್ರಾಪಂ: ಎಐಕೆಕೆಎಂಎಸ್‌ ಕರೆ ನೀಡಿದ ಅಖೀಲ ಭಾರತ ಪ್ರತಿಭಟನಾ ದಿನದ ನಿಮಿತ್ತ ಮರವಾಡಿ ರೈತರು ಗ್ರಾಪಂ ಪಿಡಿಒ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿದರು. ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ರೈತರು ಬೆಳೆದ ಬೆಳೆಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಬದ್ಧಗೊಳಿಸುವಂತೆ ಆಗ್ರಹಿಸಿದರು.

Advertisement

ರೈತ-ಕೃಷಿ ಕಾರ್ಮಿಕ ಸಂಘಟನೆ ತಾಲೂಕು ಕಾರ್ಯದರ್ಶಿ ಶಿವುಕುಮಾರ ಅಂದೋಲಾ, ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ಕರದಳ್ಳಿ, ಕಾರ್ಯದರ್ಶಿ ಸೂರ್ಯಕಾಂತ ಶಿರವಾಳ, ರೈತ ಮುಖಂಡರಾದ ಹಣಮಂತ ತಳವಾರ, ರಾಯಪ್ಪ ಕೊಟಗಾರ, ಮರೆಪ್ಪ ಮಾಂಗ್‌, ಬಸವರಾಜ ಸ್ವಾಮಿ, ಮರೆಪ್ಪ ಕರಕನೋರ, ಮಹಾಂತೇಶ ಹುಳಗೋಳ, ಶರಣಪ್ಪ ಪೂೂಜಾರಿ, ಮಹೆಮೂದ್‌ ಗುಡುಸಾಬ, ಗುರುಪ್ರಸಾದ ಕರಕನೋರ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next