Advertisement

ವೇತನ ವಿಳಂಬ ಖಂಡಿಸಿ ಸಾಮೂಹಿಕ ರಜೆಗೆ ಆಗ್ರಹ

05:31 PM Nov 15, 2018 | Team Udayavani |

ಯಲಬುರ್ಗಾ: ಸ್ಥಳೀಯ ಪಟ್ಟಣದ ಪಪಂ ಕಚೇರಿಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರ ನೌಕರರ ವೇತನ ವಿಳಂಬ ಖಂಡಿಸಿ ಪೌರ ಸೇವಾ ನೌಕರರು ಬುಧವಾರ ಸಾಮೂಹಿಕ ಅನಿರ್ಧಿಷ್ಟಾವಧಿ ರಜೆ ಮಂಜೂರು ಮಾಡುವಂತೆ ಒತ್ತಾಯಿಸಿ ತಹಶೀಲ್ದಾರ್‌ ರಮೇಶ ಅಳವಂಡಿಕರಗೆ ಮನವಿ ಸಲ್ಲಿಸಿದರು.

Advertisement

ಪೌರ ಸೇವಾ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕುಮಾರ ಸರಗಣಾಚಾರ ಮಾತನಾಡಿ, ಪಪಂನಲ್ಲಿ ಕಾರ್ಯನಿರ್ವಹಿಸುವ ಪೌರ ನೌಕರರಿಗೆ ಐದಾರು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಸಕಾಲಕ್ಕೆ ವೇತನ ಸಿಗದೇ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಸ್ಥಗಿತ ವೇತನ ಹಾಗೂ ಹಬ್ಬದ ಮುಂಗಡ ಕೂಡ ಪಾವತಿಸಲಿಲ್ಲ, ಹೀಗಾಗಿ ಹಬ್ಬಗಳ ಆಚರಣೆ ಮಾಡದೇ ನಮ್ಮ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿವೆ. ವೇತನ ಪಾವತಿಯಾಗದೇ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ. ಶೀಘ್ರದಲ್ಲಿ ಬಾಕಿ ವೇತನ ಪಾವತಿ ಮಾಡಬೇಕು ಇಲ್ಲದಿದ್ದರೇ ಪೌರ ಸೇವಾ ನೌಕರರು ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟ ರಜೆಯಲ್ಲಿ ಮುಂದುವರಿಯುತ್ತೇವೆ ಎಂದು ಎಚ್ಚರಿಸಿದರು.

ಮನವಿ ಪತ್ರ ಸ್ವೀಕರಿಸಿ ತಹಶೀಲ್ದಾರ್‌ ರಮೇಶ ಅಳವಂಡಿಕರ್‌ ಮಾತನಾಡಿ, ಪೌರ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ಶೀಘ್ರದಲ್ಲಿ ವೇತನ ಮಂಜೂರು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ವೇತನ ಪಾವತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂಬ ಭರವಸೆ ನೀಡಿದರು. ಪೌರ ಸೇವಾ ನೌಕರರಾದ ರಮೇಶ ಬೆಲೇರಿ, ಬಸವಲಿಂಗಪ್ಪ ಭಾಸ್ಕರ್‌, ರವಿ ಪೋತೆದಾರ್‌, ಉಮೇಶ ಬೇಲಿ, ನಾರಾಯಣ ಗಂಗಾಖೇಡ, ಯಂಕಣ್ಣ ಜೋಶಿ, ಚೆನ್ನಯ್ಯ ಹಿರೇಮಠ, ಸುಭಾಷ ಭಾವಿಮನಿ, ಸೀಮಣ್ಣ ಬನ್ನಿಮರದ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next