Advertisement

ಟಾವರ್‌ ಸ್ಥಳಾಂತರಿಸಲು ಆಗ್ರಹ

02:06 PM Jul 08, 2019 | Suhan S |

ಧಾರವಾಡ: ನಗರದ ಯಾಲಕ್ಕಿ ಶೆಟ್ಟರ್‌ ಕಾಲೋನಿಯ ಸಪ್ತಗಿರಿ ಬಡಾವಣೆಯಲ್ಲಿ ಖಾಸಗಿ ಸಂಸ್ಥೆಗೆ ಸ್ಥಾಪಿಸಿರುವ 40 ಮೀಟರ್‌ ಎತ್ತರದ ಟಾವರ್‌ ಸ್ಥಳಾಂತರ ಮಾಡುವಂತೆ ಬಡಾವಣೆಯ ನಾಗರಿಕ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

Advertisement

ಟಾವರ್‌ ಸಮೀಪವೇ ಮನೆಗಳಿದ್ದು, ಟಾವರ್‌ನಿಂದ ಹೊರಸೂಸುವ ರೇಡಿಯೇಷನ್‌ಗಳಿಂದ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಸ್ಥಳೀಯರ ಗಮನಕ್ಕೆ ತರದೇ ಟಾವರ್‌ ಸ್ಥಾಪಿಸಲಾಗುತ್ತಿದ್ದು, ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ಟಾವರ್‌ನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಪಾಲಿಕೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದೆ.

Advertisement

Udayavani is now on Telegram. Click here to join our channel and stay updated with the latest news.

Next