Advertisement

ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹ

12:42 PM Jul 04, 2022 | Team Udayavani |

ಚಿಂಚೋಳಿ: ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಜಟ್ಟೂರ ಗ್ರಾಮದ ಸರಕಾರಿ ಶಾಲೆ ವಿದ್ಯಾರ್ಥಿನಿಯರು ಚಿಂಚೋಳಿ ಬಸ್‌ ಡಿಪೋ ಹತ್ತಿರ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಜಟ್ಟೂರ, ಹಲಕೋಡಾ, ಪೋತಂಗಲ, ವೆಂಕಟಾಪೂರ ಗ್ರಾಮಗಳಿಗೆ ಬಸ್‌ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಶಾಲೆಗಳಿಗೆ ಹೋಗಲು ತೊಂದರೆ ಆಗಿದೆ. ಬಸ್‌ ಬಾರದೇ ಇರುವುದರಿಂದ ಶಾಲೆಗೆ ಹೋಗದೇ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತೆಲಂಗಾಣ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಈ ಗ್ರಾಮಗಳಿಗೆ ಸರಿಯಾಗಿ ಬಸ್‌ ಬರುತ್ತಿಲ್ಲ. ವಿದ್ಯಾಭ್ಯಾಸಕ್ಕಾಗಿ ಪ್ರತಿನಿತ್ಯ ನಿಡಗುಂದಾ, ಸೇಡಂ ಹೋಗುತ್ತೇವೆ. ಆದರೆ ಸರಿಯಾಗಿ ಬಸ್‌ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಟ್ಟೂರ್‌-ನಿಡಗುಂದಾ 8 ಕಿ.ಮೀ ದೂರ ಇರುವುದರಿಂದ ನಡೆದುಕೊಂಡು ಹೋಗುವುದಕ್ಕೆ ತುಂಬಾ ತೊಂದರೆ ಆಗುತ್ತಿದೆ. ಸೇಡಂ ಶಾಸಕರಿಗೆ ಮತ್ತು ಚಿಂಚೋಳಿ ಬಸ್‌ ಡಿಪೋ ವ್ಯವಸ್ಥಾಪಕರಿಗೆ ಅನೇಕ ಸಲ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಈಗ ಶಾಲೆ ಕಾಲೇಜುಗಳು ಪ್ರಾರಂಭ ಆಗಿವೆ. ತರಗತಿಗಳು ನಡೆಯುತ್ತಿವೆ. ಸಮಯಕ್ಕೆ ಸರಿಯಾಗಿ ಹೋಗದೇ ಇರುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿದೆ. ಜಟ್ಟೂರ, ಹಲಕೋಡ, ಪೋತಂಗಲ, ವೆಂಕಟಾಪೂರ ಗ್ರಾಮಗಳಿಗೆ ಕೂಡಲೇ ಬಸ್‌ ಸಂಚಾರ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಚಿಂಚೋಳಿ ಬಸ್‌ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಜಟ್ಟೂರ ಗ್ರಾಪಂ ಅಧ್ಯಕ್ಷ ವೆಂಕಟರೆಡ್ಡಿ, ಶ್ರೀಶೈಲಂ, ಬಿಚ್ಚಪ್ಪ, ಭೀಮಪ್ಪ, ಶ್ರೀನಿವಾಸ ಹಾಗೂ ಗ್ರಾಮಸ್ಥರು ಶಾಲೆ ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next