Advertisement

ಗಣಿಗಾರಿಕೆಯಿಂದ ಪಂಚಗಿರಿಧಾಮ ರಕ್ಷಿಸಲು ಆಗ್ರಹ

12:05 PM Nov 14, 2021 | Team Udayavani |

ದೇವನಹಳ್ಳಿ: ಇತಿಹಾಸ ಪ್ರಸಿದ್ಧ ನಂದಿಬೆಟ್ಟ ಸೇರಿದಂತೆ ಪಂಚಗಿರಿಧಾಮಗಳು ಗಣಿಗಾರಿಯಿಂದ ಮುಂದೊಂದು ದಿನ ಮಾರಕವಾಗಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತಿರುವ ಬೆನ್ನಲ್ಲೇ ಲೋಕ್‌ ಅದಾಲತ್‌ ಕಮಿಟಿ ಸದಸ್ಯ ಹಾಗೂ ಪರಿಸರ ತಜ್ಞ ಡಾ.ಯಲ್ಲಪ್ಪರೆಡ್ಡಿ ಕೊಯಿರಾ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಕೊಯಿರ ಗ್ರಾಮ ತನ್ನದೇ ಆದ ಇತಿಹಾಸ ಹೊಂದಿದ್ದು, ಇಲ್ಲಿರುವ ಕಲ್ಲಿಗೆ ತನ್ನದೇ ಆದ ಮಹತ್ವ ಇದೆ. ನಂದಿಬೆಟ್ಟಕ್ಕೆ ಹೊಂದಿಕೊಂಡಿರುವಂತೆ ಇರುವ ಪಂಚಗರಿ ಧಾಮಗಳು ಒಂದು ಕಡೆಯಾದರೆ, ಕೊಯಿರ ಬೆಟ್ಟವೂ ಹಂತ-ಹಂತವಾಗಿ ನಶಿಸುವ ಹಂತ ತಲುಪುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದರು.

ಅರಣ್ಯೀಕರಣಕ್ಕೆ ಒತ್ತು ನೀಡಲು ಆದೇಶ: ಪ್ರಕೃತಿ ವಿನಾಶ ಮಾಡಬಹುದು. ಆದರೆ, ಪ್ರಕೃತಿಯನ್ನು ಸೃಷ್ಟಿಸಲು ಸಾಧ್ಯ ವಿಲ್ಲ. ಈ ಪ್ರದೇಶ ಪಂಚನದಿಗಳು ಹುಟ್ಟುವ ಸ್ಥಳವಾಗಿದ್ದು, ಅರ್ಕಾವತಿ, ದಕ್ಷಿಣ ಪಿನಾಕಿನಿ ಹರಿಯುವ ಪ್ರದೇಶ ಕೊಯಿರಾ ಆಗಿರುವುದರಿಂದ ಇದರ ಸಂರಕ್ಷಣೆ ಮತ್ತು ಪಂಚಗಿರಿಧಾಮ ಗಳ ಸಂರಕ್ಷಣೆಯಾಗಬೇಕಿದೆ. ಲೋಕ್‌ ಅದಾಲತ್‌ನಲ್ಲಿ ಏರ್‌ ಪೋರ್ಟ್‌ನಿಂದ 25 ಕಿ.ಮೀ. ಅರಣ್ಯೀಕರಣಕ್ಕೆ ಒತ್ತು ನೀಡಲು ಆದೇಶವಿದೆ.

ಇದನ್ನೂ ಓದಿ:- ಜನರ ಸಮಸ್ಯೆಯನ್ನೇ “ಬಿಟ್‌’ ಬಿಟ್ಟ ವಿಪಕ್ಷಗಳು

ಅದೇ 25ಕಿ.ಮೀ. ಅಂತರದಲ್ಲಿಯೇ ಇವೆಲ್ಲವೂ ಸೇರಿಕೊಳ್ಳುತ್ತದೆ. ಸರ್ಕಾರ ಇಂತಹ ಗಣಿಗಾರಿಕೆ ನಡೆಸುತ್ತಿರು ವುದು ಎಷ್ಟರ ಮಟ್ಟಿಗೆ ಸರಿಯೆನಿಸುತ್ತದೆ. ನಂದಿಬೆಟ್ಟದ ಸುತ್ತಲೂ ಗಣಿಗಾರಿಕೆ ನಡೆದರೆ, ಭೂಪದರಗಳು ಅಲುಗಾಡಿ ಮುಂದೊಂದು ದಿನ ಅನಾಹುತವಾಗುವ ಮುನ್ನ ಎಚ್ಚೆತ್ತು ಕೊಳ್ಳಬೇಕಿದೆ. ನಂದಿಬೆಟ್ಟದ 5ಕಿ.ಮೀ. ಸುತ್ತಲೂ ಬಫ‌ರ್‌ ಝೊàನ್‌ ಆಗಬೇಕು. ಗಣಿಗಾರಿಕೆಯಿಂದ ಬ್ಲಾಸ್ಟಿಂಗ್‌ ಆಗಿರುವ ಸ್ಥಳ ಪರಿಶೀಲಿಸಿದ್ದೇನೆ ಎಂದರು. ಬಫ‌ರ್‌ಝೊàನ್‌ ಮಾಡಬೇಕು: ನಂದಿಬೆಟ್ಟದ ಸುತ್ತಲೂ ಬಫ‌ರ್‌ ಝೋನ್‌ ಮಾಡಬೇಕು.

Advertisement

ಈ ಹಿಂದೆ ಕಣಿವೆ ನಾರಾ ಯಣಪುರ ಮತ್ತು ತೈಲಗೆರೆಯಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಈಗಲೂ ನಡೆಯುತ್ತಿದೆ. ಕಳೆದ ಬಾರಿ ನಂದಿ ಗಿರಿಧಾಮದ ಭಾಗವಾಗಿರುವ ಬ್ರಹ್ಮಗಿರಿಯಲ್ಲಿ ಭೂಕುಸಿತ ಏಕೆ ಸಂಭವಿಸಿದೆ. ಗಣಿಗಾರಿಕೆ ಇಂದಾಗಿದೆಯೇ ಎಂಬ ಹಲವಾರು ಸಂಶಯ ಮಧ್ಯೆಯೂ ಯತೇತ್ಛವಾಗಿ ಗಣಿಗಾರಿಕೆ ನಡೆಯುತ್ತಲೇ ಇದೆ ಎಂದರು.

ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ: ತಾಲೂಕಿನ ಕೊಯಿರಾ ಬೆಟ್ಟವು ಸಮೃದ್ಧಿಯ ತಾಣವಾಗಿದ್ದು, ಹಲವು ಜೀವ ಪ್ರಭೇದ ಗಳ ವಾಸಸ್ಥಾನವಾಗಿದೆ. ಅರ್ಕಾವತಿ ಕ್ಯಾಚ್‌ಮೆಂಟ್‌ ಹೊಂದಿ ರುವ ಬೆಟ್ಟವಾಗಿದೆ. ಈಗಾಗಲೇ ಸರ್ಕಾರ ಈ ಹಿಂದೆ ಇದು ಕ್ಯಾಚ್‌ಮೆಂಟ್‌ ಪ್ರದೇಶವೆಂದು ಘೋಷಿಸಿದ್ದಾರೆ. ಆದರೂ, ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ. ಗಣಿಗಾರಿಕೆಯಿಂದ ಇಲ್ಲಿನ ಪರಿಸರ ಹಾಳಾಗುವುದರ ಜತೆಗೆ ವಿನಾಶದತ್ತ ಎಡೆಮಾಡಿ ಕೊಡಬಹುದೇ ಎಂಬ ಸಂಶಯ ಪ್ರತಿಯೊಬ್ಬರಲ್ಲಿ ಕಾಡತೊಡಗಿದೆ.

ಕೊಯಿರಾ ಚಿಕ್ಕೇಗೌಡ ಮತ್ತು ಗ್ರಾಮಸ್ಥರು ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂರಕ್ಷಣೆಗೆ ಹಲವಾರು ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದರು. ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದ ಕೊಯಿರ ಬೆಟ್ಟ, ತೈಲಗೆರೆ-ಮೀಸಗಾನಹಳ್ಳಿ ಗ್ರಾಮಗಳಲ್ಲಿ ನಡೆಯುತ್ತಿ ರುವ ಗಣಿಗಾರಿಕೆ ಪ್ರದೇಶ ಮತ್ತು ಪಂಚಗಿರಿಧಾಮಗಳ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ವಾಸ್ತವಾಂಶದ ಸ್ಥಿತಿಗತಿ ಪರಿಶೀಲಿದ್ದೇವೆ ಎಂದರು. ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next