Advertisement
ಶ್ರೀಮಂತರು ಬೇಸಿಗೆ ಬೇಗೆಗೆ ತಣ್ಣನೆ ನೀರಿಗೆ ಫ್ರಿಡ್ಜ್ ಬಳಸುತ್ತಿದ್ದಾರೆ. ಆದರೆ, ಬಡವರು ದುಬಾರಿ ಫ್ರಿಡ್ಜ್ ಕೊಂಡುಕೊಳ್ಳಲು ಸಾಧ್ಯವಾಗದ ಕಾರಣ ಮಡಕೆ ಬಳಸುತ್ತಾರೆ. ವಿದ್ಯುತ್ ಕಡಿತವಾದರೆ ನೀರು ತಣ್ಣಗೆ ಇರುವುದಿಲ್ಲ. ಆದರೆ, ಮಡಕೆ ಸದಾ ತಣ್ಣೀರನ್ನು ನೀಡುತ್ತದೆ ಎಂಬುವುದು ಜನರ ವಾದ.
Related Articles
Advertisement
ಮಡಕೆ ತಯಾರಿಸಲು ಕೆಂಪು, ಕಪ್ಪು ಮಣ್ಣನ್ನು ಬಳಸಿ ಮಣ್ಣಿನಲ್ಲಿರುವ ಖನಿಜಾಂಶ ನೀರಿನ ಮೂಲಕ ದೇಹ ಸೇರುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಅನೇಕ ಜನರು ದೇಹ ತಂಪಾಗಿಸಲು ಫ್ರಿಡ್ಜ್ ನಲ್ಲಿರುವ ತಂಪು ನೀರು ಹಾಗೂ ಪಾನೀಯ ಮೊರೆ ಹೋದರೆ ಬಡವರ ಮನೆಗಳಲ್ಲಿ ಮಣ್ಣಿನ ಮಡಕೆಗಳಲ್ಲಿ ನೀರು, ಅಂಬಳಿ, ಮಜ್ಜಿಗೆ ಯಂತಹ ಪಾನೀಯಗಳನ್ನು ಸೇವಿಸುತ್ತಾರೆ. ವರ್ಷವಿಡೀ ಉದ್ಯೋಗವಿಲ್ಲದೆ ಖಾಲಿ ಇರುವ ಕುಂಬಾರನಿಗೆ ಈಗ ಬಾರಿ ಬೇಡಿಕೆ ಇದೆ.
ಉತ್ಪಾದನೆಗೆ ಹೆಚ್ಚಿನ ಒತ್ತನ್ನು ನೀಡುತ್ತಿರು ವುದರಿಂದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ವ್ಯಾಪಾರಸ್ಥರು ಇದನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ ನಗರ ಪ್ರದೇಶಗಳಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜನರು ಬೆಲೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಖರೀದಿಯಲ್ಲಿ ಉತ್ಸಾಹ ತೋರುತ್ತಿರುವುದು ಮಡಕೆಯ ಅಗತ್ಯತೆ ಹಾಗೂ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ.
ದಿನೇ ದಿನೆ ಬಿಸಿಲಿನ ತಾಪ 36 ಡಿಗ್ರಿಯಿಂದ 37 ಡಿಗ್ರಿ ತಾಪಮಾನ ದಾಖಲೆ ಆಗುತ್ತಿದೆ. ಬೆಳಗ್ಗೆ 8 ಗಂಟೆಗೆ ಬಿಸಿಲು ಪ್ರಾರಂಭ ಆಗುತ್ತಿದ್ದು. ಮಧ್ಯಾಹ್ನ 12 ಗಂಟೆಗೆ ನೆತ್ತಿ ಸುಡುವಷ್ಟು ಬಿಸಿಲು ಹೆಚ್ಚಾಗುತ್ತಿದೆ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿವರ್ಷ ಬೇಸಿಗೆಯಲ್ಲಿ ಅತಿ ಹೆಚ್ಚು ಮಡಕೆ ಖರೀದಿಸುತ್ತಾರೆ. ನಲ್ಲಿ ಇರುವ ಮಡಕೆ 200 ರಿಂದ 250 ರೂ.ಗೆ ಮಾರಲಾಗುತ್ತದೆ. ನಮ್ಮ ಹಿರಿಯ ಕಾಲದಿಂದಲೂ ಮಡಕೆ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ನಾವೂ ಸಹ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. – ರತ್ನಮ್ಮ, ಮಡಕೆ ವ್ಯಾಪಾರಸ್ಥೆ
ಆಂಧ್ರ ಪ್ರದೇಶದ ಚಿತ್ತೂರು ಕಡೆಯಿಂದ ಕಳೆದ 7 ವರ್ಷದಿಂದ ಮಡಕೆ ತಂದು ರಸ್ತೆಯ ಬದಿಗಳಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಈ ಬಾರಿ ಮಡಕೆಗೆ ನಲ್ಲಿ ಅಳವಡಿಸಲಾಗಿದೆ. ಬೇಸಿಗೆ ಆರಂಭ ಆಗಿರುವುದರಿಂದ ಜನಸಾಮಾನ್ಯರು ಹೆಚ್ಚು ಮಡಕೆ ಖರೀದಿಸುತ್ತಿದ್ದಾರೆ. ಏಪ್ರಿಲ್ ತಿಂಗಳವರೆಗೆ ಮಡಕೆ ಮಾರಾಟ ಇರುತ್ತದೆ. –ವೇಣು, ಮಡಕೆ ಮಾರಾಟಗಾರ
ಯಾವುದೇ ಖರ್ಚಿಲ್ಲದೆ ತಂಪು ನೀರನ್ನು ನೀಡುವ ಮಡಕೆ ತಲತಲಾಂತರದಿಂದ ನಮ್ಮೆಲ್ಲರ ಮಧ್ಯೆ ಇದ್ದು, ಬಡವರ ಫ್ರಿಡ್ಜ್ ಎಂದೇ ಖ್ಯಾತಿ ಪಡೆದಿದೆ. ಮಣ್ಣಿನಿಂದ ತಯಾರಿಸಿದ ಮಡಕೆ ನೀರನ್ನು ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬ ನಂಬಿಕೆ ಹಿರಿಯರಲ್ಲಿ ಇದೆ. ಆರೋಗ್ಯ ತಜ್ಞರು ಇದನ್ನು ಅನುಮೋದಿಸಿದ್ದಾರೆ. ಪ್ರತಿವರ್ಷ ಮಡಕೆ ಖರೀದಿಸುತ್ತೇವೆ. –ಮಂಜುಳಾ, ಗ್ರಾಹಕರು
–ಎಸ್. ಮಹೇಶ್