Advertisement

ಬೇಡಿಕೆ ಈಡೇರಿಕೆಗೆ ಸಮುದಾಯ ಆರೋಗ್ಯ ನೌಕರರ ಆಗ್ರಹ

05:20 PM Nov 19, 2022 | Team Udayavani |

ತುಮಕೂರು: ಸೇವೆ ಖಾಯಂ, ಪ್ರೋತ್ಸಾಹಧನ ಹೆಚ್ಚಳ, ಮೇಲಧಿಕಾರಿಗಳ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಶುಕ್ರವಾರ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಜಿಲ್ಲೆಯ ಪಿ.ಎಚ್‌.ಸಿ ಉಪಕೇಂದ್ರಗಳಲ್ಲಿ ರಾಷ್ಟ್ರೀ ಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಪ್ರವೇಶ ಪರೀಕ್ಷೆ ಬರೆದು ಗೌರವಧನದ ಆಧಾರದಲ್ಲಿ ನೇಮಕಗೊಂಡಿರುವ ಬಿ.ಎಸ್‌.ಸಿ ನರ್ಸಿಂಗ್‌, ಎಂ.ಎಸ್ಸಿ ನರ್ಸಿಂಗ್‌ ಓದಿರುವ ಸು ಮಾರು 394 ಜನರು ಸಮುದಾಯ ಆರೋಗ್ಯಾ ಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದು, ಮೇಲಧಿಕಾರಿ ಗಳಿಂದ ಕಿರುಕುಳ ಅನುಭವಿಸುತ್ತಿದ್ದು, ಜೊತೆಗೆ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿ ರುವ ಖಾಯಂ ಸಹಪಾಠಿಗಳಿಂದಲೂ ದೌರ್ಜನ್ಯ ಒಳಗಾಗುತ್ತಿದ್ದಾರೆ ಎಂಬುದು ಸಂಘದ ಆರೋಪವಾಗಿದೆ.

ಇಡೀ ರಾಜ್ಯದಾದ್ಯಂತ ಶುಕ್ರವಾರ ಎಲ್ಲಾ ಸಮು ದಾಯ ಆರೋಗ್ಯಾಧಿಕಾರಿಗಳು ತಮ್ಮ ಸೇವೆ ಸ್ಥಗಿತಗೊಳಿಸಿ ಎಲ್ಲಾ ಡಿಎಚ್‌ಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರೋತ್ಸಾಹಧನ ಹೆಚ್ಚಳ: ಸಮುದಾಯ ಆರೋ ಗ್ಯಾಧಿಕಾರಿಗಳ ಬೇಡಿಕೆ ಕುರಿತಂತೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್‌, ಸಮುದಾಯ ಆರೋಗ್ಯಾಧಿಕಾರಿಗಳ ಸೇವೆ ಖಾಯಂಗೊಳಿಸ ಬೇಕು ಹಾಗೂ ಅವರಿಗೆ ಮುಂಬಡ್ತಿಗೆ ಅವಕಾಶ ನೀಡಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ನೇಮಕವಾಗಿರುವ ಸಮುದಾಯ ಆರೋಗ್ಯಾಧಿಕಾರಿಗಳಿಗೆ ಬೇರೆ ರಾಜ್ಯಗಳಲ್ಲಿ 15 ಸಾವಿರ ರೂ ನೀಡುತಿದ್ದಾರೆ. ಕರ್ನಾಟಕದಲ್ಲಿ ಮಾತ್ರ 8,000 ಸಾವಿರ ರೂ. ನೀಡಲಾಗುತ್ತಿದೆ. ಬೇರೆ ರಾಜ್ಯಗಳ ರೀತಿ ನಮಗೂ ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕು ಎಂದರು.

ಮುಕ್ತ ನಿಧಿಯಲ್ಲಿ 50 ಸಾವಿರ ರೂ.ನೀಡಬೇಕು: ಆರೋಗ್ಯ ಉಪಕೇಂದ್ರಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಾರ್ಷಿಕ ಮುಕ್ತ ನಿಧಿಯಲ್ಲಿ 50 ಸಾವಿರ ರೂ.ನೀಡಬೇಕು ಹಾಗೂ ಅದನ್ನು ನೇರವಾಗಿ ಬಳಕೆ ಮಾಡಲು ಅವಕಾಶ ಕಲ್ಪಿಸಬೇಕೆಂಬುದು ನಮ್ಮ ಕೋರಿಕೆಯಾಗಿದೆ ಎಂದರು.

Advertisement

ಅಂತರ ಜಿಲ್ಲಾ ವರ್ಗಾವಣೆಗೂ ಅವಕಾಶ: ಸಂಘದ ಮಹಿಳಾ ನಿರ್ದೇಶಕಿ ಶಿಲ್ಪಾ ಮಾತನಾಡಿ, ಏನಾದರೂ ಸಲಹೆ ನೀಡಿದರೆ ನೀವು ಖಾಯಂ ನೌಕರರಲ್ಲ ಎಂದು ಕೀಳಾಗಿ ನೋಡುತ್ತಾರೆ. ಮೊದಲು ಇದು ನಿಲ್ಲಬೇಕು. ಇಲ್ಲದಿದ್ದರೆ ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವುದು ಕಷ್ಟವಾಗುತ್ತದೆ. ಅಂತರ ಜಿಲ್ಲಾ ವರ್ಗಾವಣೆಗೂ ಅವಕಾಶ ಕಲ್ಪಿಸಬೇಕು ಎಂದರು.

ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಸುರೇಶ್‌ ವಾರದ, ಪದಾಧಿಕಾರಿಗಳಾದ ಚನ್ನ ಲಿಂಗೇಶ್‌ಮೂರ್ತಿ, ರೋಹಿತ್‌ರಾಜ್‌, ನಾಗೇಂದ್ರ, ಕುಮಾರ್‌, ಶಾಂತಕುಮಾರ್‌ ಸೇರಿದಂತೆ ಜಿಲ್ಲೆಯ 394 ಸಮುದಾಯ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next