Advertisement
ಬಳಿಕ ಮಾತನಾಡಿದ ಅವರು, ಪಶ್ಚಿಮವಾಹಿನಿ ಯೋಜನೆಯಡಿ ಅಲ್ಲಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲು ಅವಕಾಶ ಗಳಿದ್ದು, ಬೇಡಿಕೆಗಳಿದ್ದರೆ ಈಡೇರಿಸಲಾ ಗುವುದು. ಡ್ಯಾಂನಲ್ಲಿ ನೀರು ಸಂಗ್ರಹವಾಗಿ ನಿಲ್ಲುವುದರಿಂದ ಅಂತರ್ಜಲ ವೃದ್ಧಿ ಯಾ ಗುತ್ತದೆ. ನೂರಾರು ಮಂದಿ ಕೃಷಿಕರಿಗೆ ಪ್ರಯೋಜನವಾಗುತ್ತದೆ ಎಂದರು. ಬೆಳ್ತಂಗಡಿ ತಾಲೂಕಿನ ಅತೀದೊಡ್ಡ ಡ್ಯಾಂ ಇದಾಗಿದ್ದು, ವಿದ್ಯುತ್ ಚಾಲಿತ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನೀರು ಸಂಗ್ರಹವಾಗುವುದರಿಂದ ಕೃಷಿ ಭೂಮಿಗೆ ಹಾನಿಯಾಗುವ ಬಗ್ಗೆ ಸ್ಥಳೀಯ ಕೃಷಿಕರು ಅವಲತ್ತು ಕೊಂಡಾಗ ಪ್ರತಿಕ್ರಿಯಿಸಿದ ಬಂಗೇರ ಅವರು, ಈ ಯೋಜನೆಯಲ್ಲಿ ತಡೆಗೋಡೆ ಕಾಮಗಾರಿ ವಿಸ್ತರಿಸಲು ಆಗುವುದಿಲ್ಲ. ನೀರಿನ ಸಂಗ್ರಹ ಮಟ್ಟ ಆಧರಿಸಿ ತಡೆಗೋಡೆಗೆ ಬೇರೆ ಅನುದಾನಗಳನ್ನು ಇರಿಸಿ ಕಾಮಗಾರಿ ನಡೆಸಲಾಗುವುದು ಎಂದರು.