Advertisement
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕು ರೈತಸಂಘದ ಮುಖಂಡರು, ಕಾರ್ಯಕರ್ತರು ಪರಿಸರ ಉಳಿಸಿ, ಜೀವ ಸಂಕುಲ ರಕ್ಷಿಸಿ ಎಂಬಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವ್ಯಕ್ತಪಡಿಸಿ, ಕ್ರಮಕೈಗೊಳ್ಳಲು ತಹಶೀಲ್ದಾರ್‌ಸಂತೋಷ್ ಕುಮಾರ್‌ಗೆ ಮನವಿ ಸಲ್ಲಿಸಿದರು.
Related Articles
Advertisement
ರೈತ ಮುಖಂಡ ಮೇಳೇನಹಳ್ಳಿ ರಮೇಶ್ ಮಾತನಾಡಿ, ನಗರ ಸೇರಿ ತಾಲೂಕಿನಲ್ಲಿ ಅಕ್ರಮಮರಳು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ.ರೈತರು ತಮ್ಮ ಮನೆಯ ರಿಪೇರಿ ಕೆಲಸ ಕಾರ್ಯಗಳಿಗೆತಮ್ಮ ಜಮೀನಲ್ಲಿರುವ ಮರಳು ತೆಗೆದುಕೊಂಡುಹೋಗಲು ಅವಕಾಶ ನೀಡದೆ, ಪೊಲೀಸರಿಂದ ಪ್ರಕರಣ ದಾಖಲಾಗುತ್ತದೆ. ಆದರೆ, ಆಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ಮಾಡುವವರ ಮೇಲೆಯಾವುದೇ ಕಾನೂನು ಕ್ರಮಕೈಗೊಳ್ಳುತ್ತಿಲ್ಲ, ಇದು ರೈತ ವಿರೋಧಿ ನೀತಿಯಾಗಿದೆ ಎಂದು ಕಿಡಿಕಾರಿದರು.
ಗಂಭೀರ ಚಿಂತನೆ ಮಾಡಲಿ: ಹರತನಹಳ್ಳಿ ಜಯಣ್ಣ ಮಾತನಾಡಿ, ತಾಲೂಕಿನ ಅನೇಕ ಗ್ರಾಮಗಳಸಮೀಪದಲ್ಲಿ ಕಲ್ಲು ಗಣಿಗಾರಿಕೆಗಳಿಗೆ ಬಳಸುವ ಸ್ಫೋಟಕಗಳ ಶಬ್ದಗಳಿಗೆ ಅನೇಕ ಜೀವಸಂಕುಲಗಳು ನಾಶವಾಗುತ್ತಿವೆ. ಹಲವು ಮನೆಗಳಿಗೂ ಹಾನಿಯಾಗುತ್ತಿದೆ. ಪ್ರತಿನಿತ್ಯ ಲಾರಿ, ಟ್ರ್ಯಾಕ್ಟರ್‌ಗಳು ತಿರುಗಾಡುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ. ಈ ಬಗ್ಗೆ ತಾಲೂಕು ಆಡಳಿತ ಗಂಭೀರ ಚಿಂತನೆ ಮಾಡುವ ಮೂಲಕ ಸಾರ್ವಜನಿಕರಿಗೆ ಉಂಟಾಗುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಅಣ್ಣಾ ನಾಯಕನಹಳ್ಳಿ ಶಿವಮೂರ್ತಿ, ತಾಲೂಕು ಉಪಾಧ್ಯಕ್ಷ ರಮೇಶ್ ಬಾಬು, ಚಂದ್ರಶೇಖರ್, ಮಂಜುನಾಥ್, ಸ್ವಾಮಣ್ಣ, ವೆಂಕಟಬೋವಿ, ಮಲ್ಲಯ್ಯ, ಕುಮಾರ್, ಸುರೇಶ್ ಜಗದೀಶ್ ಇದ್ದರು.