Advertisement

ಕಬ್ಬಿನ ಬಾಕಿ ಹಣ ಪೂರೈಕೆಗೆ ಆಗ್ರಹ

03:28 PM Sep 23, 2018 | Team Udayavani |

ರಾಮದುರ್ಗ: ಏಫ್‌ಆರ್‌ಪಿ ದರದಂತೆ ಪ್ರತಿ ಟನ್‌ ಕಬ್ಬಿಗೆ 2016-17 ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡ 305 ರೂ.ಗಳನ್ನು ರೈತರಿಗೆ ನೀಡಬೇಕೆಂದು ಒತ್ತಾಯಿಸಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಸ್ಥಳೀಯ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ರೈತರ ಧರಣಿ ಸತ್ಯಾಗ್ರಹ ಆಹೋರಾತ್ರಿ ಮುಂದುವರೆದಿದೆ.

Advertisement

ರೈತರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಹಾದೇವಪ್ಪ ಯಾದವಾಡ, ಕಾರ್ಖಾನೆಯನ್ನು ಪ್ಯಾರಿ ಕಂಪನಿಗೆ ಲೀಜ್‌ ನೀಡಿದ್ದು, ರೈತರ ಏಳ್ಗೆಗಾಗಿ, ಆದರೆ ಮೊದಲು ಬಾಕಿ ಹಣ ನೀಡುತ್ತೇನೆಂದು ರೈತರಿಗೆ ಭರವಸೆ ನೀಡಿ, ನಂತರ ನಷ್ಟದ ನೆಪ ಹೇಳಿ, ರೈತರಿಗೆ ಬಾಕಿ ಹಣ ಬಿಡುಡಗೆ ಮಾಡದಿರುವ ಪ್ಯಾರಿ ಕಂಪನಿಯ ಕ್ರಮ ಖಂಡನೀಯವಾಗಿದೆ. ರೈತರ ಬಾಕಿ ಹಣ ನೀಡಲು ಆಗದಿದ್ದಲ್ಲ. ನಮ್ಮ ಕಾರ್ಖಾನೆಯಿಂದ ಹೊರ ಹೋಗಿ ಎಂದು ಎಂದು ಪ್ಯಾರಿ ಕಂಪನಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಮಹಾದೇವಪ್ಪ ಯಾದವಾಡ ರೈತರ ಹೋರಾಟಕ್ಕೆ ಬೆಂಬಲ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ ಮಾತನಾಡಿ, ಸಕಾಲಕ್ಕೆ ಮಳೆಯಾಗದೆ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ದೊರೆತ ಅಲ್ಪಸ್ವಲ್ಪ ನೀರು ಬಳಕೆ ಮಾಡಿಕೊಂಡು ಕಬ್ಬು ಬೆಳೆದು ಕಾರ್ಖಾನೆಯ ಪೂರೈಸಿದ ರೈತರಿಗೆ ಸರ್ಕಾರ ನಿಗ ಪಡಿಸಿದ ದರ ನೀಡುತ್ತೇವೆಂದು ಹೇಳಿ, ಮತ್ತೆ ಬಾಕಿ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವ ಕಂಪನಿಯ ಕ್ರಮ ರೈತ ವಿರೋಧಿಯಾಗಿದೆ. ಬಾಕಿ ನೀಡುವ ಅಧಿಕೃತ ಆದೇಶ ನೀಡುವವರೆಗೆ ಧರಣಿ ಹಿಂಪಡೆಯುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕೃತ ಆದೇಶ ಹೊರಡುವವರೆಗೆ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಟೆಂಟ್‌ ಹಾಕಿ ರೈತರು ಧರಣಿ ಸತ್ಯಾಗ್ರಹ ಮುಂದುವರೆಸಿದ್ದಾರೆ. ಪ್ರತಿಭಟನೆಯಲ್ಲಿ ರೈತ ಸೇನೆಯ ತಾಲೂಕಾಧ್ಯಕ್ಷ ಎಚ್‌.ಎಸ್‌. ಪಾಟೀಲ, ಜಿಲ್ಲಾ ಸಂಚಾಲಕ ಶಂಕರಗೌಡ ಪಾಟೀಲ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ರಾಮದುರ್ಗ, ರೈತ ಮುಖಂಡರಾದ ಶಿವಾನಂದ ದೊಡವಾಡ, ಬಾಳಪ್ಪ ರಡರಟ್ಟಿ, ಗಿರಿಯಪ್ಪ ಹಂಜಿ, ಬಾಳಪ್ಪ ಚುಂಚನೂರ, ಯಲ್ಲಪ್ಪ ದೊಡಮನಿ, ಅಪ್ಪಣ್ಣ ಗುದಗಿ, ರಾಮನಗೌಡ ಮುದಿಗೌಡ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next