ಮುಳಬಾಗಿಲು: ಅಕ್ಕಿ ಮೇಲೆ ವಿಧಿಸಿರುವ ಜಿಎಸ್‌ಟಿ ಆದೇಶ ವಾಪಸ್ ಪಡೆದು ಮುಂಗಾರು ಕೃಷಿಗೆ ಅವಶ್ಯಕತೆ ಇರುವರಸಗೊಬ್ಬರ, ಬಿತ್ತನೆ ಬೀಜ, ಪೂರೈಕೆಮಾಡುವಂತೆ ಕೇಂದ್ರ ಸರ್ಕಾರವನ್ನುಒತ್ತಾಯಿಸಿ ಜು.21ರಂದು ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಅಕ್ಕಿ ಸಮೇತ ಮುತ್ತಿಗೆಹಾಕಲು ನಗರದ ನೆಹರು ಪಾರ್ಕ್‌ನಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಿದರು.
ಬಡವರ ವಿರೋಧಿ ನೀತಿ: ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಬಡವರ ಹಸಿವು ತುಂಬುವ ಅಕ್ಕಿಗೂ ಜಿಎಸ್‌ಟಿ ವಿಧಿಸುವ ಮೂಲಕ ಬಡವರ, ಕಾರ್ಮಿಕರ ಅನ್ನವನ್ನು ಕಿತ್ತುಕೊಳ್ಳುವ ಮೂಲಕ ದೇಶದಕೋಟ್ಯಂತರ ಬಡವರನ್ನು ಅಪೌಷ್ಟಿಕತೆಗೆತಳ್ಳುವ ಮೂಲಕ ಸರ್ಕಾರ ಬಡವರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ಜನವಿರೋಧಿ ನೀತಿ: ಎರಡು ವರ್ಷಗಳಿಂದ ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿ,ದುಡಿಯುವ ಕೈಗೆ ಕೆಲಸವಿಲ್ಲದೆ, ರೈತರುಬೆಳೆದ ಬೆಲೆ ಇಲ್ಲದೆ ತತ್ತರಿಸಿರುವ ಜನಸಾಮಾನ್ಯರ ಮೇಲೆ ಅಗತ್ಯ ವಸ್ತುಗಳ ಬೆಲೆಏರಿಕೆ ಮಾಡುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿವೆ, ಸರ್ಕಾರ ಈಗ ಅಕ್ಕಿಯಮೇಲೆ ತಮ್ಮ ಪೌರುಷ ತೋರಿಸುತ್ತಿವೆ ಎಂದು ವಿವರಿಸಿದರು.
ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್‌ಮಾತನಾಡಿ, ಮುಂಗಾರು ಬಿತ್ತನೆ ಕೃಷಿಗರಿಗೆದರಿದೆ. ಆದರೆ, ಪ್ರತಿ ವರ್ಷಸರ್ಕಾರಗಳು ರೈತರ ಕೃಷಿಗೆ ಅಗತ್ಯವಿರುವಬಿತ್ತನೆಬೀಜ, ರಸಗೊಬ್ಬರ ದಾಸ್ತಾನು ಇದೆಎಂದು ಹೇಳಿ ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿ ಮಾಡಿ, ಗೊಬ್ಬರ, ಬಿತ್ತನೆ ಬೀಜಕ್ಕಾಗಿಬರುವ ಅನ್ನದಾತರ ಮೇಲೆ ಲಾಠಿ ಚಾರ್ಜ್ ಮಾಡುವ ಅವ್ಯವಸ್ಥೆ ಇದೆ ಎಂದು ದೂರಿದರು.
ರೈಲ್ವೆ ನಿಲ್ದಾಣ ಮುತ್ತಿಗೆ ಹಾಕುವ ನಿರ್ಧಾರ: 24 ಗಂಟೆಯಲ್ಲಿ ಅಕ್ಕಿ ಮೇಲೆ ಹಾಕಿರುವಜಿಎಸ್‌ಟಿ ಆದೇಶ ವಾಪಸ್ ಪಡೆದುಮುಂಗಾರು ಕೃಷಿಗೆ ಅವಶ್ಯಕತೆ ಇರುವ ಬಿತ್ತನೆಬೀಜ, ರಸಗೊಬ್ಬರ ಪೂರೈಕೆ ಮಾಡುವಂತೆಕೇಂದ್ರ ಸರ್ಕಾರವನ್ನು ಒತ್ತಾಯಿಸಿಜು.21ರಂದು ಬಂಗಾರಪೇಟೆ ರೈಲ್ವೆ ನಿಲ್ದಾಣಮುತ್ತಿಗೆ ಹಾಕುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ,ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್,ವಿಭಾಗೀಯ ಕಾರ್ಯಾಧ್ಯಕ್ಷ ಫಾರೂಖ್ ಪಾಷ,ತಾಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್,ರಾಜ್ಯ ಮುಖಂಡ ಬಂಗಾರಿ ಮಂಜು, ಜಿಲ್ಲಾಪ್ರಧಾನ ಕಾರ್ಯದರ್ಶಿ ವಿಜಯ್‌ಪಾಲ್,ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿಹನುಮಯ್ಯ, ಶಿವನಾರಹಳ್ಳಿ ವೇಣು, ಹೆಬ್ಬಣಿ ಆನಂದರೆಡ್ಡಿ, ಲಾಯರ್ ಮಣಿ, ಯಾರಂಘಟ್ಟಗಿರೀಶ್, ಪುತ್ತೇರಿ ರಾಜು, ಮಂಗಸಂದ್ರ ತಿಮ್ಮಣ್ಣ, ನಾಗೇಶ್, ಮಾಲೂರು ತಾಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಇದ್ದರು.