Advertisement

ಠೇವಣಿ ವಾಪಸ್‌ಗೆ ಆಗ್ರಹ

02:25 PM Jul 15, 2019 | Team Udayavani |

ಅಥಣಿ: ಪಟ್ಟಣದ ಕರ್ನಾಟಕ ಕೋ ಆಫ್‌ ಕ್ರಿಡಿಟ್ ಸೊಸೈಟಿಯಲ್ಲಿಟ್ಟ ಠೇವಣಿ ಹಣ ವಾಪಸ್‌ ನೀಡುವಂತೆ ಆಗ್ರಹಿಸಿ ಗ್ರಾಹಕರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಇದೇ ವೇಳೆ ಠೇವಣಿ ಹಣ ವಂಚಿತ ಗ್ರಾಹಕ ಎಸ್‌.ಎಂ. ಗುರುಸ್ವಾಮಿ ಮಾತನಾಡಿ, ಶ್ರಮ ವಹಿಸಿ ಜೀವನೋಪಯೋಗಕ್ಕಾಗಿ ಕೂಡಿಟ್ಟ ಠೇವಣಿ ಹಣವನ್ನು ಅಥಣಿಯ ಕರ್ನಾಟಕ ಕೋ ಆಫ್‌ ಕ್ರೆಡಿಟ್ ಸೊಸೈಟಿ ತನ್ನ ಗ್ರಾಹಕರಿಗೆ ನೀಡಲಾರದೆ ವಂಚಿಸಿದೆ. ಇದರಿಂದ ಠೇವಣಿದಾರರು ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆಗಳಿಗೆ ಹಣವಿಲ್ಲದೆ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಗ್ರಾಹಕರು ಠೇವಣಿ ಕೇಳಲು ಹೋದಾಗ ಬ್ಯಾಂಕ್‌ ಮುಚ್ಚಲಾಗಿದ್ದು, ಬ್ಯಾಂಕಿನ ಮ್ಯಾನೇಜರ್‌ ಹಾಗೂ ಆಡಳಿತ ಮಂಡಳಿ ಸದಸ್ಯರು ಸಿಗುತ್ತಿಲ್ಲ. ಶೀಘ್ರ ಗ್ರಾಹಕರು ಇಟ್ಟ ಠೇವಣಿ ಹಣವನ್ನು ವಾಪಸ್‌ ನೀಡದಿದ್ದರೆ ತಹಶೀಲ್ದಾರ್‌ ಕಚೇರಿ ಹಾಗೂ ಸೊಸೈಟಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಪಿ.ಡಿ. ಹರಳೆ ಮಾತನಾಡಿದರು. ಎ.ಎಸ್‌. ಗುಂಡಾ, ಎಲ್.ಡಿ. ಪುಟಾಣಿ, ಶ್ರೀಧರ ಕುಲಕರ್ಣಿ, ಎಸ್‌.ಆರ್‌. ಕಾಡಪ್ಪನ್ನವರ, ಎಸ್‌.ಆರ್‌. ಪಾಟೀಲ, ಬಿ.ಎ. ಪಾಟೀಲ, ಆರ್‌.ಡಿ. ಬಾಗೇನ್ನವರ ಸೇರಿದಂತೆ ಹಲವರು ಗ್ರಾಹಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next