Advertisement

ಸಚಿವ ಡಿಕೆಶಿ ರಾಜೀನಾಮೆಗೆ ಆಗ್ರಹ

04:44 PM Aug 19, 2017 | Team Udayavani |

ಯಾದಗಿರಿ: ಸಚಿವ ಡಿ.ಕೆ. ಶಿವಕುಮಾರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು. ನಗರದ ಸುಭಾಷ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕಾಂಗ್ರೆಸ್‌ ಸರಕಾರ ಹಾಗೂ ಸಚಿವ ಡಿ.ಕೆ. ಶಿವಕುಮಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಈಚೆಗೆ ಇಂಧನ ಸಚಿವರ ಮನೆ ಹಾಗೂ ಕಚೇರಿ ಮೇಲೆ ಐ.ಟಿ ದಾಳಿ ಮಾಡಿದಾಗ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಆಸ್ತಿ ಕುರಿತು ಅನೇಕ ದಾಖಲೆಗಳು ಪತ್ತೆಯಾಗಿದ್ದು ಆದಾಯಕ್ಕಿಂತ ಹೆಚ್ಚು ಹಣ ಸಂಪಾದನೆಗಾಗಿ ಭ್ರಷ್ಟಾಚಾರದಿಂದ ಈ ಹಣಗಳಿಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಕೂಡಲೇ ಮುಖ್ಯಮಂತ್ರಿಗಳು
ಸಂಪುಟದಿಂದ ಕೈ ಬಿಡಬೇಕು ಇಲ್ಲವೇ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅದೇ ಪ್ರಕಾರ ರಮೇಶ ಜಾರಿಕಿಹೊಳಿ ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಲಕ್ಷ್ಮೀ ಹೆಬ್ಟಾಳಕರ್‌ ಅವರು ಸಹ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಭ್ರಷ್ಟ ಕಾಂಗ್ರೆಸ್‌ ಪಕ್ಷವನ್ನು ಕಿತ್ತೂಗೆಯಲು ರಾಜ್ಯ ಜನತೆ
ಕಾತುರರಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರಾಮ ರಾಜ್ಯ ಬರಲಿದೆ. ರಾಜ್ಯದಲ್ಲಿ ದಲಿತರು, ಹಿಂದುಳಿದವರು ಹಾಗೂ ಅಲ್ಪ ಸಂಖ್ಯಾತರರಿಗೆ ನೆಮ್ಮದಿಯಿಂದ ಬದುಕಲು ಬಿಜೆಪಿ ನೇತೃತ್ವದ ಸರಕಾರ ಬರಲಿ ಎಂದು ಜನ ನಿರೀಕ್ಷೆ ಮಾಡುತ್ತಿದ್ದಾರೆ ಎಂದರು. ಪಕ್ಷದ ಹಿರಿಯ ಮುಖಂಡ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಬಂದಾಗಿನಿಂದ ರೈತರಿಗೆ ವಿಪರೀತ ತೊಂದರೆ ನೀಡುತ್ತಿದೆ. ರೈತರ ಪಂಪ್‌ ಸೇಟ್‌ಗಳಿಗೆ ವಿದ್ಯುತ್‌ 7 ಗಂಟೆಗಳ ಕಾಲ ನೀಡುತ್ತೇವೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಸರಕಾರ ಈಗ ರೈತರಿಗೆ ವಿದ್ಯುತ್‌ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಪ್ರತಿಭಟನೆಯಲ್ಲಿ ಭಾರತೀಯ ಆಹಾರ
ನಿಗಮದ ಸದಸ್ಯ ಖಂಡಪ್ಪ ದಾಸನ, ಪಕ್ಷದ ಮುಖಂಡರಾದ ಸಿದ್ದಣ್ಣಗೌಡ ಕಾಡಂನೋರ್‌, ಶರಣಗೌಡ ಬಾಡಿಯಾಳ, ಎಸ್‌.ಪಿ. ನಾಡೇಕರ್‌, ಮಲ್ಲಣ್ಣಗೌಡ ಉಕ್ಕಿನಾಳ, ಬಸವರಾಜ ಮುಂಡರಗಿ, ಚನ್ನಾರೆಡ್ಡಿ ಮದರಕಲ್‌, ಹಣಮಂತ ಇಟಗಿ, ಗೋಪಾಲ ದಾಸನಕೇರಿ, ಮಲ್ಲಿಕಾರ್ಜುನ ಗುಳೇ‌ದ, ಸುರೇಶ ರಾಠೊಡ್‌, ಬಸವರಾಜಪ್ಪ ಯಲ್ಹೇರಿ, ಬಲವಂತ ದಾಸನಕೇರಿ ಸೇರಿದಂತೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next