Advertisement

Hassan: ಸಂತ್ರಸ್ತೆಯರಿಗೆ ನ್ಯಾಯದ ಜತೆ ಪರಿಹಾರ ನೀಡಲು ಆಗ್ರಹ

09:57 PM May 30, 2024 | Team Udayavani |

ಹಾಸನ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಪೆನ್‌ಡ್ರೈವ್‌ ಹಂಚಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತೆಯರಿಗೆ ನ್ಯಾಯದ ಜತೆ ಪರಿಹಾರ ಕೊಡಬೇಕೆಂದು ರಾಜ್ಯದ ವಿವಿಧ ಸಂಘಟನೆಗಳು ಸರಕಾರವನ್ನು ಆಗ್ರಹಿಸಿದವು.

Advertisement

“ಹೋರಾಟದ ನಡಿಗೆ ಹಾಸನದ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ನಾಡಿನ ವಿವಿಧ ಸಂಘಟನೆಗಳು ಹಾಸನಕ್ಕೆ ಆಗಮಿಸಿದ್ದು, ಸಾಹಿತಿಗಳು, ಹೋರಾಟಗಾರರು, ಸಂಘಟನೆಗಳ ಪ್ರಮುಖರು ಒಂದೆಡೆ ಸೇರಿ ಪ್ರತಿಭಟಿಸಿದರು. “ಸಂತ್ರಸ್ತೆಯರೇ ನಿರ್ಭಯವಾಗಿ ದೂರು ಕೊಡಿ’ ಎನ್ನುವ ಬ್ಯಾನರನ್ನು ವೇದಿಕೆಯಲ್ಲಿ ಬಿಡುಗಡೆ ಮಾಡುವ ಮೂಲಕ ಉತ್ತರ ಪ್ರದೇಶದ ಮಾಜಿ ಸಂಸದೆ ಸುಭಾಷಿಣಿ ಅಲಿ ವೇದಿಕೆ ಸಮಾವೇಶಕ್ಕೆ ಚಾಲನೆ ನೀಡಿದರು. ಪ್ರಕರಣದಲ್ಲಿ ಭಾಗವಹಿಸಿದ್ದವರನ್ನೆಲ್ಲ ಬಂಧಿಸಬೇಕು, ಹಾಸನದ ಕರ್ಮಕಾಂಡ ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ, ಸ್ತ್ರೀ ರೋಗ ತಜ್ಞೆ ಡಾ| ಭಾರತಿ ರಾಜಶೇಖರ್‌, ಸಬೀಹಾ ಭೂಮಿಗೌಡ ಮುಂತಾದವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next