Advertisement

KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ

12:40 PM May 03, 2024 | Team Udayavani |

ಬೆಂಗಳೂರು: ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಬಿ. ಎನ್‌.ಯೋಗಾನಂದ ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರಿಗೆ ಪತ್ರ ಬರೆದಿದೆ.

Advertisement

ಈ ಬಾರಿಯ ಸಿಇಟಿ ಪರೀಕ್ಷೆ ಗೊಂದಲಗಳಿಗೆ ನೇರವಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾರವರೇ ನೇರ ಹೊಣೆಗಾರರಾಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಕಳೆದ ತಿಂಗಳು ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಮ್ಮ ಸಮನ್ವಯ ಸಮಿತಿಯು ದೂರು ನೀಡಿತ್ತು. ಆದರೆ ಇದುವರೆಗೆ ರಮ್ಯಾ ವಿರುದ್ಧ ಯಾವುದೇ ತನಿಖೆಗೆ ಸರ್ಕಾರ ಮತ್ತು ಇಲಾಖೆ ಮುಂದಾಗದಿರುವುದು ಇಲಾಖೆಯ ಕುರಿತು ಅನೇಕ ಸಂಶಯಗಳನ್ನು ಹುಟ್ಟು ಹಾಕಿದೆ.

ಆದರೀಗ ರಮ್ಯಾರವರು ಕೆ.ಇ.ಎ. ನಿಯಮದ ಪ್ರಕಾರವೇ ಪರೀಕ್ಷೆ ನಡೆಸಲಾಗಿದೆ ಎಂದು ಉದ್ಘಾಟತನದ ಹೇಳಿಕೆಯನ್ನು ನೀಡಿ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರನ್ನು ಪೂಲ್‌ ಮಾಡಲು ಹೊರಟಿದ್ದಾ.

ಈ ಕೂಡಲೇ ತಾವು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ರಮ್ಯಾರವನ್ನು ಅಮಾನತಿನಲ್ಲಿ ಇಟ್ಟು ಪರೀಕ್ಷೆ ಅಕ್ರಮದ ಕುರಿತು ಸಮಗ್ರವಾಗಿ ಉನ್ನತ ಮಟ್ಟದ ತನಿಖೆಯಾಗಬೇಕು. ಯಾವ್ಯಾವ ಕೋಚಿಂಗ್‌ ಸೆಂಟರ್‌ಗಳು, ಟ್ಯೂಷಿನ್‌ ಕೇಂದ್ರಗಳು ಇದರಲ್ಲಿ ಶಾಮಿಲಾಗಿವೇ ಎಂಬುದರ ಬಗ್ಗೆ ಕಂಡುಹಿಡಿಯಬೇಕು.

ಇಲ್ಲದಿದ್ದರೆ ವಿದ್ಯಾರ್ಥಿ ಸಂಘಟನೆಗಳು, ನೊಂದ ಪಿಯು ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ ಕೆಇಎಗೆ ಮುತ್ತಿಗೆ ಹಾಕಿ ಪ್ರತಿಭಟಸಬೇಕಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next