ಬೆಂಗಳೂರು: ವೀರಶೈವ- ಲಿಂಗಾಯತ ಸಮುದಾಯದಲ್ಲಿರುವ ಎಲ್ಲ ಉಪ ಪಂಗಡಗಳನ್ನೂ ಹಿಂದುಳಿದ ವರ್ಗ (ಒಬಿಸಿ)ಗಳ ಪಟ್ಟಿಗೆ ಸೇರಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿರುವ ಮಠಾಧೀಶರು, ಈ ಸಂಬಂಧ ಕೇಂದ್ರಕ್ಕೆ ನಿಯೋಗ ತೆರಳಲು ನಿರ್ಧರಿಸಿದ್ದಾರೆ.
ಶುಕ್ರವಾರ ವಿಜಯನಗರದ ಸುಜ್ಞಾನ ಮಂಟಪದಲ್ಲಿ ಶ್ರೀಶೈಲ, ಕಾಶಿ, ಉಜ್ಜಯಿನಿ ಪೀಠ ಸೇರಿ ವಿವಿಧ ಮಠಗಳ ಮಠಾಧೀಶರು ನಡೆಸಿದ ಸಭೆಯಲ್ಲಿ ಸಮುದಾಯದಲ್ಲಿರುವ ಎಲ್ಲ ಉಪ ಪಂಗಡಗಳನ್ನೂ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು. ಇದಕ್ಕಾಗಿ ಕೇಂದ್ರ ಸರಕಾರದ ಬಳಿ ನಿಯೋಗ ತೆರಳಿ ಈ ಸಂಬಂಧ ಹಕ್ಕೊತ್ತಾಯ ಮಂಡಿಸಲು ತೀರ್ಮಾನ ಕೈಗೊಳ್ಳಲಾಯಿತು.
ಅನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಶೈಲ ಜಗದ್ಗುರು ಚನ್ನಬಸವ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಇದು ದಶಕಗಳಿಂದ ನಡೆಯುತ್ತಿರುವ ಹೋರಾಟ. ಆದಾಗ್ಯೂ ನ್ಯಾಯ ಸಿಕ್ಕಿಲ್ಲ. ಈಗ ಮತ್ತಷ್ಟು ತೀ ವ್ರ ತ ರ ವಾದ ಹೋರಾಟ ಮಾಡಲು ನಿ ರ್ಧ ರಿ ಸಿ ದ್ದೇವೆ. ಹೋ ರಾಟ ತಾರ್ತಿಕ ಅಂತ್ಯ ತಲುಪುವವರೆಗೂ ವಿ ರ ಮಿ ಸು ವು ದಿಲ್ಲ. ಹೋರಾಟದ ರೂಪುರೇಷೆಗ ಳನ್ನು ಸಿ ದ್ಧ ಪ ಡಿ ಸು ತ್ತಿ ದ್ದೇವೆ. ಶೀಘ್ರ ಕೇಂದ್ರ ಸರಕಾರದ ಬಳಿಗೆ ನಿ ಯೋಗ ತೆಗೆದುಕೊಂಡು ಹೋಗುತ್ತೇವೆ’ ಎಂದರು.
ಸದ್ಯ ಕೇಂದ್ರ ಸರಕಾರ ಕೇವಲ 16 ಉಪ ಪಂಗಡ
ಗಳನ್ನು ಒಬಿಸಿ ಪಟ್ಟಿಗೆ ಸೇರಿಸಿದೆ. ಆದರೆ ವೀರಶೈವ ಲಿಂಗಾಯತ ಸಮುದಾಯದಲ್ಲಿ 90ಕ್ಕೂ ಹೆಚ್ಚು ಉಪ ಪಂಗಡಗಳಿವೆ. ಕೇವಲ 16 ಸೇರ್ಪಡೆ ಮಾಡಿದರೆ, ಉಳಿದ ಉಪಪಂಗಡಗಳಿಗೆ ಅನ್ಯಾಯವಾಗಲಿದೆ. ಇದರಿಂದಾಗಿ ಸಂಪೂರ್ಣವಾಗಿ ನಮ್ಮಲ್ಲಿರುವ ಎಲ್ಲ ಉಪಪಂಗಡಗಳನ್ನೂ ಸೇರಿಸಬೇಕೆಂದು ಆಗ್ರಹಿಸಿದರು.
ಉಪ ಪಂಗ ಡ ಗ ಳಿಗೆ ಸೇ ರಿದ ಸ ಮು ದಾಯ ಬ ಹು ತೇಕ ಗ್ರಾ ಮೀಣ ಪ್ರ ದೇ ಶ ದಲ್ಲಿದ್ದು, ಕೃಷಿಯನ್ನೇ ಅ ವ ಲಂಬಿ ಸಿ ದ್ದಾರೆ. ಅ ದ ರಲ್ಲೂ ಮಳೆ ಆಧಾರಿತ ವ್ಯವಸಾಯವನ್ನೇ ನಂಬಿ ದ್ದಾರೆ. ನಮ್ಮ ಸಮುದಾಯ ಹೆಚ್ಚಿನ ಸಾಂದ್ರತೆಯಲ್ಲಿರುವ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಪ್ರದೇಶಗಳಲ್ಲಿನ ಜನರ ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಇನ್ನೂ ದುಸ್ತರವಾಗಿದೆ. 3ನೇ ಹಿಂದುಳಿದ ವರ್ಗಗಳ ಆಯೋಗದ ನ್ಯಾ| ಚಿನ್ನಪ್ಪ ರೆಡ್ಡಿ ಆಯೋಗದ ಸಮೀಕ್ಷೆ ವ ರ ದಿ ಯ ಲ್ಲಿ ನ ಅಂಕಿ-ಅಂಶಗಳು ವೀರಶೈವ ಲಿಂಗಾಯತ ಸಮುದಾಯವನ್ನೂ ಒಳಗೊಂಡಂತೆ ರಾಜ್ಯದ ವಿವಿಧ ವರ್ಗಗಳ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ ಬಗ್ಗೆ ಸ್ಪಷ್ಟ ಚಿತ್ರಣ ನೀ ಡು ತ್ತಿವೆ. ಇದರ ಆಧಾರದ ಮೇಲೆ ಎಲ್ಲ ಉಪ ಪಂಗಡಗ ಳನ್ನೂ ಕೇಂದ್ರದ ಒ ಬಿಸಿ ಮೀ ಸ ಲಾತಿ ಪ ಟ್ಟಿ ಗೆ ಸೇರಿಸಬೇಕೆಂದು ಹೇಳಿದರು.