Advertisement

ಕೃಷಿ ಕೂಲಿಕಾರರ ಬೇಡಿಕೆ ಈಡೇರಿಕೆಗೆ ಆಗ್ರಹ

05:14 PM Dec 21, 2017 | Team Udayavani |

ಮುಂಡಗೋಡ: ಕೃಷಿ ಕೂಲಿಕಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖೀಲ ಭಾರತ ಕೃಷಿ ಕೂಲಿಕಾರರ ಸಂಘದವರು
ತಹಶೀಲ್ದಾರ ಅಶೋಕ ಗುರಾಣಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

 ತಾಲೂಕಿನ ಎಲ್ಲ ಕೂಲಿಕಾರರ ಕುಟುಂಬಗಳಿಗೆ ಬಿಪಿಎಲ್‌ ರೇಷನ್‌ ಕಾರ್ಡ್‌ ವಿತರಿಸಿ ಸಮರ್ಪಕ ರೇಷನ್‌ ವಿತರಣೆಯಾಗಬೇಕು. ಕೂಲಿಕಾರರಿಗೆ ಸರಿಯಾಗಿ ರೇಷನ್‌ ಸಿಗದಂತೆ ಆಗಿದೆ. ಕಾರಣ ಪ್ರತಿದಿನ ಕೆಲಸದಲ್ಲಿ ತೊಡಗಿದ ಕೂಲಿಕಾರರ ಹೆಬ್ಬೆಟ್ಟಿನ ಗುರುತುಗಳು ಸವಕಳಿ ಬಂದಿರುತ್ತವೆ. ಕಾರಣ ಹೆಬ್ಬೆಟ್ಟಿನ ಗುರುತಿನ ಪದ್ಧತಿಯಿಂದ ಬಡ ಕೂಲಿಕಾರರಿಗೆ ರೆಷನ್‌ ಸಿಗದಂತಾಗಿದೆ. ಕೂಡಲೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು. ಪ್ರತಿ ಒಂದು ಕಾರ್ಡಿಗೆ 4 ಲೀ.ಸೀಮೆಎಣ್ಣೆ ಕೊಡಬೇಕು. ಪಟ್ಟಣದಲ್ಲಿ ಸ್ವಂತ ಮನೆ, ನಿವೇಶನ ಇಲ್ಲದ ಬಡ ಅರ್ಜಿದಾರರಿಗೆ ಗುರುತಿ ಬಹುಮಹಡಿ ಕಟ್ಟಡವನ್ನು ನಿರ್ಮಾಣ ಮಾಡಿ ಮನೆ ವಿತರಿಸಬೇಕು. ಕೃಷಿ ಕಾರ್ಮಿಕ
ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ, ಅವರ ಮಕ್ಕಳಿಗೆ ಶಿಕ್ಷಣಕ್ಕೆ ನೆರವು, ನಿವೃತ್ತಿ ವೇತನ ಸೌಲಭ್ಯಗಳನ್ನು ನೀಡಬೇಕು. ಬಡ
ಕೃಷಿ ಕಾರ್ಮಿಕರ ಕಂದಾಯ ಹಾಗೂ ಅರಣ್ಯ ಭೂಮಿ ಬಗರ್‌ ಹುಕ್ಕಂ ಸಾಗುವಳಿ ಪ್ರಕರಣಗಳನ್ನು ಸಕ್ರಮಗೊಳಿಸಿ ಹಕ್ಕು ಪತ್ರ
ವಿತರಿಸಬೇಕು ಎಂದು ಆಗ್ರಹಿಸಿದರು.

ಇಲ್ಲಿನ ಜನರಿಗೆ ಕಾರವಾರ ಜಿಲ್ಲಾ ಕೇಂದ್ರ ದೂರವಾಗಿದ್ದು, ಶಿರಸಿಯನ್ನು ಜಿಲ್ಲೆಯಾಗಿ ಘೋಷಿಸಬೇಕು. ಹೀಗೆ ಇನ್ನೂ ಮುಂತಾದ
ಹಲವು ಬೇಡಿಕೆ ಶಿಘ್ರ ಈಡೇರಿಸಲು ಮನವಿ ಮಾಡಲಾಯಿತು. ಇಲ್ಲಿನ ಪ್ರವಾಸಿ ಮಂದಿರದಿಂದ ತಹಶೀಲ್ದಾರ ಕಚೇರಿ ವರೆಗೆ
ಪ್ರತಿಭಟನಾ ಮೆರವಣಿಗೆ ನಡೆಯಿತು. ತಾಲೂಕು ಅಧ್ಯಕ್ಷ ಭೀಮಣ್ಣ ಹು. ಬೋವಿ, ಕಾರ್ಯದರ್ಶಿ ರವಿ ಗಿ. ಬೋವಿ,
ಹನುಮನ ಗೌಡ, ವಾಣಿ ತೇವರಕರ, ಹನುಮಂತಪ್ಪ ನ್ಯಾಸರ್ಗಿ ಬುತೇಶ ಚಿತ್ರಗಾರ, ಶಿವಕುಮಾರ ವಾಲ್ಮೀಕಿ, ಅಕ್ಕಮ್ಮ ನ್ಯಸರ್ಗಿ,
ಗಂಗಮ್ಮಾ ಭೋವಿ, ಶಕುಂತಲಾ ತೇವರಕರ, ಮಂಜುನಾಥ ವಡ್ಡರ, ಪಾರವ್ವಾ ಗದಗ, ಚಿನ್ನಮ್ಮ ಭೋವಿ, ಮೌಲಾಲಿ ಅಂದಲಗಿ
ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next