Advertisement
ವಿಜಯಪುರ ಪಟ್ಟಣದ ಮೇಲೂರು ಮುಖ್ಯ ರಸ್ತೆ ನಾಗರಬಾವಿ ಬಳಿ ಇರುವ ವಿಜಯ ಮಾರುತಿ ಭಕ್ತ ಮಂಡಳಿ ದೇವಾಸ್ಥಾನ ದಲ್ಲಿ ಕಿಡಿಗೇಡಿಗಳು ದೇವಾಲಯದ ಗರ್ಭ ಗುಡಿಯಲ್ಲಿ ಮಲಮೂತ್ರಗಳನ್ನು ಗರ್ಭಗುಡಿಯ ತುಂಬಾ ಎಸೆದು ಹೋಗಿರುವ ವಿಚಾರ ಖಂಡಿಸಿ ಮಾತ ನಾಡಿದರು. ಯಾವುದೇ ಧರ್ಮದ ಆಚರಣೆಗೆ ಯಾರೂ ಧಕ್ಕೆ ತರುವಂತಿಲ್ಲ.
Related Articles
Advertisement
ಹಿಂದೂ ಜಾಗರಣಾ ವೇದಿಕೆಯ ಕಾರ್ಯ ಕರ್ತರು, ವಿಜಯಮಾರುತಿ ಭಕ್ತ ಮಂಡಳಿ ಹಾಗೂ ಹಿಂದೂ ಜನಾಂಗದವರು ಹಿಂದು ದೇವಾಯಲದಲ್ಲಿ ಆದ ಘಟನೆಯನ್ನು ಖಂಡಿಸಿ ಇದಕ್ಕೆ ಕಾರಣರಾದವರ ವಿರುದ್ಧ ಧಿಕ್ಕಾರ ಕೂಗಿ ಕೃತ್ಯ ಎಸಗಿದವರನ್ನು ಬಂಧಿಸು ವಂತೆ ಆಗ್ರಹಿಸಿದರು.
ಪಟ್ಟಣದ ಬಹುತೇಕ ಹಿಂದೂಗಳು ಸ್ಥಳಕ್ಕೆ ಆಗಮಿಸಿ ದೇವಾಲಯದಲ್ಲಿ ಆಗಿರುವ ಹೇಸಿಗೆ ಯನ್ನು ಕಂಡು ಆಕೊ›àಶ ವ್ಯಕ್ತಪಡಿಸಿ ದೇವಾ ಲಯವನ್ನು ಶುಚಿಗೊಳಿಸಲು ಗೋಮೂತ್ರವನ್ನು ಪ್ರೋಕ್ಷಣೆ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ವಿಜಯಪುರ ಠಾಣೆ ಯಲ್ಲಿ ದೂರು ದಾಖಲಿಸಿ ದರು. ಬೆಂಗಳೂರು ಡಿವೈಎಸ್‌ಪಿ ನಾಗರಾಜ್, ವಿಜಯಪುರ ವೃತ್ತ ನಿರೀಕ್ಷಕ ಕೆ. ಶ್ರೀನಿವಾಸ್, ಪಿ.ಎಸ್.ಐ ನಂದೀಶ್ ಆಗಮಿಸಿ ಸ್ಥಳ ಪರಿಶೀಲಿಸಿದರು.
“ಹಿಂದೂಗಳು ಶಾಂತಿ ಪ್ರಿಯರು, ದುಷ್ಕೃತ್ಯಗಳು ನಡೆದಾಗ ಹೆಚ್ಚು ಸಂಘಟಿತರಾಗುವುದಿಲ್ಲ ಎಂದು ಪೊಲೀಸರೇ ನಿರ್ಲಕ್ಷ್ಯ ಮಾಡಬೇಡಿ. ಕಡಿಮೆ ಸಂಖ್ಯೆಯಲ್ಲಿ ಬಂದು ವಿಚಾರಣೆ ಮಾಡಿಕೊಂಡು ಹೋಗಿದ್ದೀರಾ. ಇದೇ ರೀತಿ ಅಮೇಧ್ಯವನ್ನು ಚರ್ಚ್ ಅಥವಾ ಮಸೀದಿಯಲ್ಲಿ ಎಸೆದಿದ್ದರೆ ಪೊಲೀಸ್ ರಕ್ಷಣೆಗೆ ನಿಲ್ಲುತ್ತಿತ್ತು. ಜಿಲ್ಲೆಯಲ್ಲಿ ಹಿಂದೂ ದೇಗುಲಗಳಲ್ಲಿ ಇಂತಹ ಘಟನೆ ನಾಲ್ಕು ನಡೆದಿದ್ದರೂ ಇದನ್ನು ಸಾಮಾನ್ಯ ಎನ್ನುವಂತೆ ಪರಿಗಣಿಸಿದರೆ ಹಿಂದೂಗಳು ಇದನ್ನು ಸಹಿಸುವುದಿಲ್ಲ.” – ಆರ್.ಸಿ. ಮಂಜುನಾಥ್, ವಿಜಯಪುರ ಬಿಜೆಪಿ ಟೌನ್ ಅಧ್ಯರು.