Advertisement

ಪರಿಸರ ಸ್ನೇಹಿ ಗಣಪತಿ ಮೂರ್ತಿಗೂ ಬೇಡಿಕೆ ಕುಸಿತ

02:29 PM Aug 27, 2022 | Team Udayavani |

ಅರಕಲಗೂಡು: ಗಣಪತಿ ತಯಾರಿಕೆಯನ್ನೆ ವೃತ್ತಿಯಾಗಿಸಿಕೊಂಡಿರುವ ತಾಲೂಕಿನ ಕೇರಳಾಪುರದ ಕಲಾವಿದ ವಿಶ್ವನಾಥ್‌ ಅವರ ಕುಟುಂಬ ಪರಿಸರ ಸ್ನೇಹಿ ಗಣಪತಿ ತಯಾರಿಕೆಗೆ ಹೆಸರಾಗಿದೆ. ಮೂರು ತಲೆಮಾರುಗಳಿಂದ ಈ ಕುಟುಂಬದ ಸದಸ್ಯರು ಗಣಪತಿ ತಯಾರಿಕೆಯನ್ನು ತನ್ನ ಕುಲ ಕಸುಬಾಗಿಸಿಕೊಂಡಿದ್ದು ಹಾಸನ, ಮೈಸೂರು, ಕೊಡಗು ಜಿಲ್ಲೆಗಳಿಗೆ ಮಾರಾಟ ಮಾಡಿ ಇದರಲ್ಲಿ ಬರುವ ಆದಾಯವನ್ನೆ ತಮ್ಮ ಜೀವನೋಪಾಯಕ್ಕಾಗಿ ನಂಬಿಕೊಂಡಿದ್ದಾರೆ.

Advertisement

ಗೌರಿ ಗಣೇಶ ಹಬ್ಬದ ಎರಡು ತಿಂಗಳ ಮುಂಚಿನಿಂದ ಗಣಪತಿ ತಯಾರಿಕೆಗೆ ಈ ಕುಟುಂಬದ ಸದಸ್ಯರು ಸಿದ್ಧತೆ ನಡೆಸುತ್ತಾರೆ. ಮೊದಲೆಲ್ಲಾ ಸಮೀಪದ ಕೆರೆಗಳಿಂದ ತಾವೆ ಉತ್ತಮ ಗುಣಮಟ್ಟದ ಮಣ್ಣನ್ನು ಆಯ್ಕೆ ಮಾಡಿ ತರುತ್ತಿದ್ದರು. ಈಗ ದಿಢೀರ್‌ ಸುರಿಯುವ ಮಳೆಗೆ ಕೆರೆಗಳು ತುಂಬಿರುವ ಕಾರಣ ಮಣ್ಣು ತರುವುದು ಹರಸಹಾಸವಾಗಿದೆ. ಸಾವಿರಾರು ರೂ.ಹಣ ತೆತ್ತು ದೂರದ ಕಡೆಯಿಂದ ಟ್ರಾಕ್ಟರ್‌ ನಲ್ಲಿ ಮಣ್ಣು ತರಿಸಿ ಗಣೇಶನ ವಿಗ್ರಹಗಳನ್ನು ಮಾಡಬೇಕಿರುವ ಕಾರಣ ವೆಚ್ಚ ಹೆಚ್ಚುತ್ತಿದೆ.

ಈ ಸುತ್ತಮುತ್ತಲ ಊರುಗಳಿಗೆ ಹಿಂದೆಲ್ಲ ನಾವೊಬ್ಬರೆ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದೆವು. ಇದರಿಂದ ನಾಲ್ಕು ಕಾಸು ಸಂಪಾದನೆಯಾಗಿ ಜೀವನೋಪಾಯ ನಡೆಯುತ್ತಿತ್ತು. ಈಗ ಅಲ್ಲಲ್ಲಿ ವಿಗ್ರಹ ತಯಾರು ಮಾಡುವವರು ಇರುವ ಕಾರಣ ಮಾರಾಟ ಕಡಿಮೆಯಾಗಿದೆ. ಹಿಂದೆಲ್ಲ ಗಲ್ಲಿಗಲ್ಲಿಗಳಲ್ಲಿ ಗಣಪತಿ ಕೂರಿಸಿ ಪೂಜೆ ನಡೆಸುತ್ತಿದ್ದರು. ಈಗ ಇದಕ್ಕೆ ಕಾನೂನು ಅಡ್ಡಿಯಾಗಿದೆ. ಅಲ್ಲದೆ ಇಂದಿನ ಯುವಕರಲ್ಲಿ ಅಂತಹ ಉತ್ಸಾಹ ಮರೆಯಾಗುತ್ತಿದೆ. ಹೀಗಾಗಿ ವಿಗ್ರಹ ಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. – ವಿಶ್ವನಾಥ್‌, ಕಲಾವಿದ

Advertisement

Udayavani is now on Telegram. Click here to join our channel and stay updated with the latest news.

Next