Advertisement

ಅತಿವೃಷ್ಟಿ ತಾಲೂಕು ಘೋಷಣೆಗೆ ಆಗ್ರಹ

05:44 PM Sep 16, 2022 | Team Udayavani |

ಬೀದರ: ಬೀದರ ತಾಲೂಕು ಅತಿವೃಷ್ಟಿ ಎಂದು ಘೋಷಣೆ ಮಾಡಬೇಕೆಂದು ಬಿಜೆಪಿ ಬೀದರ ಗ್ರಾಮಾಂತರ ಮಂಡಲ ಆಗ್ರಹಿಸಿದೆ. ಈ ಕುರಿತು ಗುರುವಾರ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಿ, ಬೆಳೆಹಾನಿ ಸಮೀಕ್ಷೆಯ ವರದಿಯಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲಾದ್ಯಂತ ಬೆಳೆಹಾನಿ ಸಮೀಕ್ಷೆ ಮಾಡಲಾಗಿದ್ದು, ಬೀದರ ತಾಲೂಕಿನಲ್ಲಿ ತಾರತಮ್ಯ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಉದಾಹರಣೆಗೆ ಭಾಲ್ಕಿ ತಾಲೂಕಿನಲ್ಲಿ 9873 ಹೆಕ್ಟೇರ್‌, ಔರಾದ ತಾಲೂಕಿಗೆ 9840, ಬಸವಕಲ್ಯಾಣ ತಾಲೂಕಿಗೆ 9790 ನೀಡಿರುತ್ತಾರೆ. ಆದರೆ ನಮ್ಮ ಬೀದರ ತಾಲೂಕಿನ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳು ಸೇರಿ ಕೇವಲ 2838 ಹೆಕ್ಟೇರ್‌ ಮಾತ್ರ ಸಮೀಕ್ಷೆಯಲ್ಲಿ ಬೆಳೆ ಹಾನಿಯಾಗಿರುವುದೆಂದು ಸಮೀಕ್ಷೆಯಲ್ಲಿ ತಿಳಿಸಿರುವುದು ಕಂಡುಬಂದಿರುತ್ತದೆ ಎಂದಿದ್ದಾರೆ.

ಬೀದರ ತಾಲೂಕಿನ ಕಾರಂಜಾ ಜಲಾಶಯ, ಮಾಂಜ್ರಾ ನದಿ, ಹಳ್ಳ-ಕೊಳ್ಳಗಳು ಇರುತ್ತವೆ. ಬೀದರ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗಿರುವುದರಿಂದ ಬೀದರ ತಾಲೂಕಿನಲ್ಲಿ ಸಾಕಷ್ಟು ಬೆಳೆಗಳು ನಾಶವಾಗಿದ್ದು, ರೈತರು ಆತ್ಮಹತ್ಯೆಗೆ ಶರಣಾಗುವಂತಹ ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿರುತ್ತದೆ. ಹೀಗಿರುವಾಗ ಬೀದರ ತಾಲೂಕಿಗೆ ಸಮೀಕ್ಷೆಯ ವರದಿಯಲ್ಲಿ ಕಡಿಮೆ ಪ್ರಮಾಣ ವರದಿ ಸಲ್ಲಿಸಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಪುನಃ ಸರ್ವೆ ಮಾಡಿ, 3-4 ದಿನಗಳ ಧಾರಾಕಾರ ಮಳೆಯಿಂದ ಅಲ್ಪ-ಸ್ವಲ್ಪ ಉಳಿದಿರುವ ಬೆಳೆಯು ಕೂಡ ಸಂಪೂರ್ಣ ನಾಶವಾಗಿರುತ್ತದೆ. ಆದ್ದರಿಂದ ತಾವುಗಳು ದಯಮಾಡಿ ಬೀದರ ತಾಲೂಕಿಗೆ ಅತಿವೃಷ್ಟಿ ಘೋಷಣೆ ಮಾಡಿ, ಬೀದರ ತಾಲೂಕಿನ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅಧ್ಯಕ್ಷ ರಾಜೇಂದ್ರ ಬಗ್ಗೆ ಪೂಜಾರಿ, ಪ್ರಮುಖರಾದ ದೀಪಕ ಗಾದಗಿ, ರಾಜಶೇಖರ, ಪಂಢರಿನಾಥ ಲದ್ದೆ, ರವಿ ಚನ್ನಪ್ಪನೋರ್‌, ನಾಗಶೆಟ್ಟಿ ಅಲಿಯಂಬರ್‌, ಅಂಬವ್ವ ಕಗಂಟಿ, ಪುಟ್ಟರಾಜ, ರವೀಂದ್ರ, ವೆಂಕಟ, ವಿಶ್ವನಾಥ, ಕಬೀರ್‌ ದಾಸ್‌, ಶಂಕರ ಇತರರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next